Home » SEBI: ಯಾವುದೇ ಕಾರಣಕ್ಕೂ ‘ಡಿಜಿಟಲ್ ಚಿನ್ನ’ದ ಮೇಲೆ ಹೂಡಿಕೆ ಮಾಡಬೇಡಿ – ಸೆಬಿ ಎಚ್ಚರಿಕೆ!!

SEBI: ಯಾವುದೇ ಕಾರಣಕ್ಕೂ ‘ಡಿಜಿಟಲ್ ಚಿನ್ನ’ದ ಮೇಲೆ ಹೂಡಿಕೆ ಮಾಡಬೇಡಿ – ಸೆಬಿ ಎಚ್ಚರಿಕೆ!!

0 comments

SEBI: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ)ಯು ಡಿಜಿಟಲ್‌ ಗೋಲ್ಡ್‌’ನಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದೆ.

ಹೌದು, ಡಿಜಿಟಲ್‌ ಅಥವಾ ಇ -ಚಿನ್ನದ ಉತ್ಪನ್ನಗಳ ಮೇಲೆ ಹೂಡಿಕೆ ಮಾಡುವವರಿಗೆ ಮಾರುಕಟ್ಟೆ ನಿಯಂತ್ರಿಕ ಸೆಬಿ ಶನಿವಾರ ಎಚ್ಚರಿಕೆ ನೀಡಿದೆ. ಅಂತಹ ಉತ್ಪನ್ನಗಳು ಅದರ ನಿಯಂತ್ರಕ ಚೌಕಟ್ಟಿನಿಂದ ಹೊರಗೆ ಬರುತ್ತವೆ. ಇದು ಗಮನಾರ್ಹ ಅಪಾಯವನ್ನು ಒಳಗೊಂಡಿದೆ ಎಂದೂ ಹೇಳಿದೆ.

ಕೆಲವು ಡಿಜಿಟಲ್‌ ಅಥವಾ ಆನ್‌ಲೈನ್‌ ವೇದಿಕೆಗಳು ‘ಡಿಜಿಟಲ್‌ ಗೋಲ್ಡ್‌ ಅಥವಾ ಇ- ಗೋಲ್ಡ್‌’ ಹೆಸರಿನ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸಲು ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿವೆ. ಇದು ಸೆಬಿ ಗಮನಕ್ಕೆ ಬಂದಿದೆ. ಭೌತಿಕ ಚಿನ್ನದ ಮೇಲಿನ ಹೂಡಿಕೆಗೆ ಡಿಜಿಟಲ್ ಚಿನ್ನ ಪರ್ಯಾಯ ಎಂದು ಅದರ ಬಗ್ಗೆ ಹೇಳಲಾಗುತ್ತಿದೆ.

ಆದರೆ, ಇಂತಹ ಡಿಜಿಟಲ್ ಗೋಲ್ಡ್‌ ಹೂಡಿಕೆ ಉತ್ಪನ್ನಗಳು ಸೆಬಿ ನಿಯಂತ್ರಿತ ಚಿನ್ನದ ಹೂಡಿಕೆ ಉತ್ಪನ್ನಗಳಿಗಿಂತ ಭಿನ್ನ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಡಿಜಿಟಲ್ ಗೋಲ್ಡ್‌ ಅಥವಾ ಇ-ಗೋಲ್ಡ್‌ಅನ್ನು ಷೇರು ಅಥವಾ ಸಾಲಪತ್ರದಂತೆ ಅಧಿಸೂಚಿತ ಹೂಡಿಕೆ ಉತ್ಪನ್ನ ಅಲ್ಲ, ಅವುಗಳನ್ನು ಸರಕುಜನ್ಯ ಹೂಡಿಕೆ ಉತ್ಪನ್ನಗಳು ಎಂದು ಕೂಡ ಕಾನೂನಿನ ಅಡಿ ಪರಿಗಣಿಸಿಲ್ಲ ಎಂದು ಸೆಬಿ ವಿವರಿಸಿದೆ.

ಡಿಜಿಟಲ್ ಚಿನ್ನ ಖರೀದಿ ಕಳೆದ ಕೆಲವು ವರ್ಷಗಳಲ್ಲಿ, ಹಲವಾರು ಖಾಸಗಿ ಕಂಪನಿಗಳು ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳ ಮೂಲಕ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿವೆ. ಟಾಟಾ ಗ್ರೂಪ್ನ ಕ್ಯಾರೆಟ್ಲೇನ್, ಸೇಫ್ಗೋಲ್ಡ್, ತನಿಷ್ಕ್ ಮತ್ತು ಎಂಎಂಟಿಸಿ-ಪಿಎಎಂಪಿ ನಂತಹ ಕಂಪನಿಗಳು ಡಿಜಿಟಲ್ ಚಿನ್ನವನ್ನು ನೀಡುತ್ತವೆ. ಫೋನ್ಪೇ, ಗೂಗಲ್ ಪೇ ಮತ್ತು ಪೇಟಿಎಂ ನಂತಹ ಅಪ್ಲಿಕೇಶನ್ಗಳು ಈ ಕಂಪನಿಗಳೊಂದಿಗೆ ಪಾಲುದಾರಿಕೆಯಲ್ಲಿ ಬಳಕೆದಾರರಿಗೆ ಕೆಲವೇ ರೂಪಾಯಿಗಳಿಗೆ ಆನ್ಲೈನ್ನಲ್ಲಿ ಚಿನ್ನವನ್ನು ಖರೀದಿಸುವ ಆಯ್ಕೆಯನ್ನು ನೀಡುತ್ತವೆ. ಕ್ಯಾರೆಟ್ಲೇನ್ ಪ್ರಕಾರ, ಡಿಜಿಟಲ್ ಚಿನ್ನವು ಗ್ರಾಹಕರು ಆನ್ಲೈನ್ನಲ್ಲಿ ಚಿನ್ನವನ್ನು ಖರೀದಿಸಲು, ಅದನ್ನು ಟ್ರ್ಯಾಕ್ ಮಾಡಲು ಮತ್ತು ಅಗತ್ಯವಿದ್ದಾಗ ಅದನ್ನು ಆಭರಣ ಅಥವಾ ಚಿನ್ನದ ನಾಣ್ಯಗಳಾಗಿ ಪಡೆದುಕೊಳ್ಳಲು ಅನುಮತಿಸುತ್ತದೆ.

You may also like