Home » Small Saving Schemes: ನಿಮ್ಮ ಖಾತೆಗೆ ಸೇರುತ್ತೆ 20 ಸಾವಿರ ಈ ಯೋಜನೆಯಿಂದ !

Small Saving Schemes: ನಿಮ್ಮ ಖಾತೆಗೆ ಸೇರುತ್ತೆ 20 ಸಾವಿರ ಈ ಯೋಜನೆಯಿಂದ !

0 comments

ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೂಡ ಒಂದು. ಇದು ಹಿರಿಯ ನಾಗರೀಕರಿಗೆ ಆರ್ಥಿಕ ಸಹಾಯಕ್ಕೆ ಇರುವಂತಹ ಯೋಜನೆಯಾಗಿದೆ. ಇದೀಗ ಈ ಯೋಜನೆಯಲ್ಲಿ ಹೂಡಿಕೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಇದರಿಂದ ಹೂಡಿಕೆದಾರರಿಗೆ ಅನುಕೂಲವಾಗಲಿದೆ.

ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಜನಸಾಮಾನ್ಯರಿಗೆ ಸಿಹಿ ಸುದ್ದಿಯನ್ನೇ ನೀಡಿದೆ‌. ಹಲವು ಪ್ರಮುಖ ಮಾಹಿತಿಯ ಜೊತೆಗೆ ಪೋಸ್ಟ್ ಆಫೀಸ್ ಯೋಜನೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ ನೀಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಹೂಡಿಕೆ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಹಾಗಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು ಹೆಚ್ಚಿನ ಮೊತ್ತವನ್ನು ಪಡೆಯಲಿದ್ದಾರೆ.

ಈವರೆಗೂ ಈ ಯೋಜನೆಯಲ್ಲಿ ರೂ. 15 ಲಕ್ಷದವರೆಗೆ ಹಣ ಉಳಿತಾಯ ಮಾಡುವ ಸೌಲಭ್ಯವಿತ್ತು. ಆದರೆ ಇನ್ಮುಂದೆ ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಸದ್ಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ ಶೇಕಡಾ 8 ಆಗಿದೆ. ಈ ಯೋಜನೆಯಲ್ಲಿ ಇತರರಿಗಿಂತ ಹೆಚ್ಚಿನ ಬಡ್ಡಿ ಬರುತ್ತಿದ್ದು, ಈ ಬಡ್ಡಿದರಗಳು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಗುತ್ತವೆ. ಕೇಂದ್ರವು ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪರಿಶೀಲಿಸುತ್ತದೆ.

ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷ ಆಗಿದ್ದು, ಈ ಮೆಚುರಿಟಿ ಅವಧಿಯ ನಂತರ ಯೋಜನೆಯನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ನೀವೇನಾದರು 8 ಶೇಕಡಾ ಬಡ್ಡಿ ದರದಲ್ಲಿ 30 ಲಕ್ಷ ಹೂಡಿಕೆ ಮಾಡಿದರೆ, ಆಗ ನಿಮಗೆ ಒಂದು ತಿಂಗಳಿಗೆ ಬಡ್ಡಿಯಾಗಿ 20 ಸಾವಿರ ರೂಪಾಯಿ ಸಿಗುತ್ತದೆ. ಹಾಗೇ ಮೂರು ತಿಂಗಳಿಗೆ 60 ಸಾವಿರ ಲಭಿಸುತ್ತದೆ. ವರ್ಷಕ್ಕೆ ರೂ. 2,40,000 ದೊರಕಲಿದೆ. ಇನ್ನು ಐದು ವರ್ಷಕ್ಕೆ 12 ಲಕ್ಷಕ್ಕಿಂತ ಹೆಚ್ಚು ಲಭ್ಯವಾಗುತ್ತದೆ.

ನೀವು ಐದು ವರ್ಷದಲ್ಲಿ 2 ಲಕ್ಷ ರೂ. ಮತ್ತು 10 ಲಕ್ಷ ಹೂಡಿಕೆ ಮಾಡಿದರೆ, ಐದು ವರ್ಷಗಳಲ್ಲಿ ರೂ. 4 ಲಕ್ಷ ಸಿಗುತ್ತದೆ. ಹಾಗೇ ತಿಂಗಳಿಗೆ 6667 ರೂಪಾಯಿ ಕೂಡ ಪಡೆಯಬಹುದು. ನೀವು 20 ಲಕ್ಷ ಹೂಡಿಕೆ ಮಾಡಿದರೆ, ಐದು ವರ್ಷಗಳಲ್ಲಿ 8 ಲಕ್ಷ ಬಡ್ಡಿ ಸಿಗುತ್ತದೆ. ಪ್ರತಿ ತಿಂಗಳು 13,333 ರೂಪಾಯಿ ಕೂಡ ಪಡೆಯಬಹುದು. ಇನ್ನು ನೀವು ರೂ. 25 ಲಕ್ಷ ಹೂಡಿಕೆ ಮಾಡಿದ್ರೆ, ಬಡ್ಡಿ 10 ಲಕ್ಷ ಬರುತ್ತದೆ.

You may also like

Leave a Comment