Home » ಸಾರ್ವಜನಿಕರೇ ಗಮನಿಸಿ:ಶಾಕಿಂಗ್ ನ್ಯೂಸ್ : KSRTC ಬಸ್ ದರ ಹೆಚ್ಚಳ !

ಸಾರ್ವಜನಿಕರೇ ಗಮನಿಸಿ:ಶಾಕಿಂಗ್ ನ್ಯೂಸ್ : KSRTC ಬಸ್ ದರ ಹೆಚ್ಚಳ !

0 comments

ತಾತ್ಕಾಲಿಕ ಒಪ್ಪಂದದ ಅನುಸಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹೊರೆಯನ್ನೂ ಪರಿಗಣಿಸಿ ದರ ಪರಿಷ್ಕರಿಸಲಾಗಿದೆ ಎಂದು ಹೇಳಿದೆ.


ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ಗಳಿಗೆ ಕನಿಷ್ಠ 300 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳಗೆ ಪ್ರತಿ ಕಿ.ಮೀ. ಗೆ 44 ರೂ, ಅಂತಾರಾಜ್ಯ ಸೇವೆ ಒದಗಿಸುವ ಬಸ್​ಗಳಿಗೆ ಪ್ರತಿ ಕಿ.ಮೀ. ಗೆ ರೂ.47 ನಿಗದಿ ಮಾಡಲಾಗಿದೆ.

ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದ್ದು, ಈ ಆದೇಶ ಹೊರಡಿಸುವ ಮೊದಲು ಬುಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರಗಳನ್ನೇ ವಿಧಿಸಲಾಗುವುದು ಎಂದು ಕೆಎಸ್‌ಆರ್​ಟಿಸಿ ಮಾಹಿತಿ ನೀಡಿದೆ.

ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ ದರವನ್ನು ರಾಜ್ಯದೊಳಗೆ 46 ರೂ ಮಾಡಲಾಗಿದ್ದು, ಅಂತಾರಾಜ್ಯಕ್ಕೆ 51 ರೂ, ರಾಜಹಂಸ 39 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ದಿನಕ್ಕೆ ಕನಿಷ್ಠ ನಿಗದಿಪಡಿಸಲಾಗಿದ್ದು ರಾಜ್ಯದೊಳಗೆ 49 ರೂ., ಹೊರರಾಜ್ಯಕ್ಕೆ 53 ರೂ. ನಿಗದಿ ಮಾಡಲಾಗಿದೆ.

ರಾಜಹಂಸ 12 ಮೀಟರ್ ಚಾಸಿಸ್​ನ 44 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ಕನಿಷ್ಠ ದಿನಕ್ಕೆ ಪರಿಷ್ಕರಿಸಿದ್ದು ರಾಜ್ಯದೊಳಗೆ 51 ರೂ ಪ್ರತಿ ಕಿ.ಮೀ. ಗೆ ಹಾಗೂ ಹೊರ ರಾಜ್ಯಗಳಿಗೆ ಪ್ರತಿ ಕಿ.ಮೀ ಗೆ ರೂ.55 ಏರಿಕೆ ಮಾಡಲಾಗಿದೆ.

You may also like

Leave a Comment