
Silver : ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಈ ನಡುವೆ ಸದ್ದಿಲ್ಲದೆ ಬೆಳ್ಳಿಯ ದರವು ಕೂಡ ಗಗನಕ್ಕೆ ಏರುತ್ತಿದೆ. ಕೆಜಿಗೆ 1 ಲಕ್ಷ ರೂಪಾಯಿಯ ಆಸು ಪಾಸಿನಲ್ಲಿ ಇದ್ದ ಬೆಳ್ಳಿಯ ದರ 2 ಲಕ್ಷದ ಗಡಿದಾಟಿತ್ತು. ಆದರೆ ಈಗ ಮೂರು ಲಕ್ಷವನ್ನು ಕೂಡ ದಾಟಿ ಬಿಟ್ಟಿದೆ.
ಹೌದು, ಬಂಗಾರದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ದರ ನೋಡಿದ್ರೆ ತಲೆ ತಿರುಗುತ್ತೆ. ಒಂದೇ ದಿನ ಬೆಳ್ಳಿ ಬೆಲೆ ಕೂಡಾ ಭಾರೀ ಏರಿಕೆ ಕಂಡಿದೆ. ಅಲ್ಲದೇ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದಲ್ಲದೇ, ಇತಿಹಾಸದಲ್ಲೇ ಮೊದಲ ಬಾರಿಗೆ 3 ಲಕ್ಷ ಗಡಿ ದಾಟಿದೆ. ಇದೀಗ 1 ಗ್ರಾಂ ಬೆಳ್ಳಿ ಬೆಲೆ ₹305 ರೂ. ಆಗಿದ್ದು, ನಿನ್ನೆ ₹295 ರೂ. ಇತ್ತು. ಒಂದೇ ದಿನದಲ್ಲಿ ದಿಢೀರ್ ₹10 ರೂ. ಏರಿಕೆ ಕಂಡಿದೆ.
ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,440 ರೂ. ಆಗಿದ್ದು, ನಿನ್ನೆ ₹2,360 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹80 ರೂ. ಹೆಚ್ಚಳ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,050 ರೂ., 100 ಗ್ರಾಂ ಬೆಳ್ಳಿ ಬೆಲೆ ₹30,500 ರೂ., 1000 ಗ್ರಾಂ ಬೆಳ್ಳಿ ದರ ₹3,05,000 ರೂ. ಆಗಿದೆ.

