
SBI: ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರ ಟ್ರಾನ್ಸಾಕ್ಷನ್ ಪರಿಷ್ಕರಿಸಿದ್ದು, ಗ್ರಾಹಕರು ಫೆಬ್ರವರಿ 15 ರಿಂದ ಐಎಂಪಿಎಸ್ ಮೂಲಕ ಹಣ ವರ್ಗಾವಣೆ, ಎಟಿಎಂ ಮೂಲಕ ಹಣ ವಿಥ್‌ಡ್ರಾ ಮಾಡುವಾಗ ಶುಲ್ಕ ಪಾವತಿಸಬೇಕು.

ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATM ವಹಿವಾಟು ಶುಲ್ಕಗಳನ್ನು ಪರಿಷ್ಕರಿಸಿದೆ. ಉಚಿತ ವಹಿವಾಟು ಮಿತಿಯನ್ನು ತಲುಪಿದ ನಂತರ ಬ್ಯಾಂಕ್ ATM ಬಳಕೆಯ ಶುಲ್ಕವನ್ನು ಹೆಚ್ಚಿಸಿದೆ. ಇದರ ಪ್ರಕರ SBI ಗ್ರಾಹಕರು ಮಾಸಿಕ ನಗದು ಹಿಂಪಡೆಯುವಿಕೆ ಮಿತಿಯನ್ನು ತಲುಪಿದ ನಂತರ ಬೇರೆ ಬ್ಯಾಂಕಿನ ATM ನಿಂದ ಪ್ರತಿ ನಗದು ಹಿಂಪಡೆಯುವಿಕೆಗೆ ₹23ರೂ ಶುಲ್ಕ (GST ಸೇರಿದಂತೆ) ವಿಧಿಸಲಾಗುತ್ತದೆ ಮತ್ತು ಬ್ಯಾಲೆನ್ಸ್ ಚೆಕ್ಗಳಂತಹ ಹಣಕಾಸೇತರ ವಹಿವಾಟುಗಳಿಗೆ ₹11 ಶುಲ್ಕ ವಿಧಿಸಲಾಗುತ್ತದೆ.
ಶುಲ್ಕದ ವಿವರ:
* 25,000 ರೂಪಾಯಿಯಿಂದ 1 ಲಕ್ಷ ರೂ ವರೆಗೆ : 2 ರೂಪಾಯಿ + GST
* 1 ಲಕ್ಷ ರೂಪಾಯಿಯಿಂದ 2 ಲಕ್ಷ ರೂ ವರೆಗೆ: 6 ರೂಪಾಯಿ + GST
* 2 ಲಕ್ಷ ರೂಪಾಯಿಯಿಂದ 6 ಲಕ್ಷ ರೂ ವರೆಗೆ : 10 ರೂಪಾಯಿ + GST
ಇನ್ನೂ ಎಸ್‌ಬಿಐ ಬ್ಯಾಂಕ್ ಮೂಲಕ ಐಎಂಪಿಎಸ್ ಹಣ ವರ್ಗಾವಣೆಗೆ 2 ರೂಪಾಯಿಯಿಂದ 20 ರೂಪಾಯಿ ಜೊತೆಗೆ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಸದ್ಯ ಇರುವ ಶುಲ್ಕ ನೀತಿಯೇ ಮುಂದುವರಿಯಲಿದೆ.
