Home » SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆ ಇದೆಯೇ ? ಹಾಗಾದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ

SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆ ಇದೆಯೇ ? ಹಾಗಾದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ

0 comments

ಸದ್ಯ ನೀವು ಎಸ್ ಬಿ ಐ , ಪಿ ಎನ್ ಬಿ , ಬ್ಯಾಂಕ್ ಆಫ್ ಬರೋಡ,HDFC ಮತ್ತು ICICI ಬ್ಯಾಂಕ್ ಸೇರಿದಂತೆ ಯಾವುದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ನಿಮಗೊಂದು ಹೊಸ ಸುದ್ದಿ ಇದೆ . ಪ್ರಸ್ತುತ, ದೇಶದ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ಗ್ರಾಹಕರಿಗೆ ಸ್ಥಿರ ಠೇವಣಿ ಸೌಲಭ್ಯವನ್ನು ಒದಗಿಸುತ್ತಿದ್ದು ನಿಮ್ಮ ಹಣದಿಂದ ನೀವು ಕೇವಲ 6 ತಿಂಗಳಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು ಎಂದು ಮಾಹಿತಿ ಇದೆ.

ನಿಮ್ಮ ಹಣದ ಸುರಕ್ಷತೆಗಾಗಿ ಎಸ್‌ಬಿಐ, PNB, HDFC ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ICICI ನಂತಹ ದೊಡ್ಡ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಯಾವ ಬ್ಯಾಂಕ್ ಎಂದು ಬಡ್ಡಿ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಎಸ್‌ಬಿಐ ಎಫ್‌ಡಿ ದರಗಳು:
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು ಸ್ಥಿರ ಠೇವಣಿ ಹೊಂದಿದ್ದರೆ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಆರು ತಿಂಗಳ ಎಫ್‌ಡಿ ಮೇಲೆ 4.5% ಬಡ್ಡಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ ಹಿರಿಯ ನಾಗರಿಕರಿಗೆ 5% ಬಡ್ಡಿಯನ್ನು ಒದಗಿಸುತ್ತದೆ.

ಪಿ ಎನ್ ಬಿ ಎಫ್‌ಡಿ ದರಗಳು:
ಪಿಎನ್ಬಿ ಬ್ಯಾಂಕ್‌ನಲ್ಲಿ ಆರು ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ 4.5% ಬಡ್ಡಿ ಲಭ್ಯವಿದ್ದರೆ, ಹಿರಿಯ ನಾಗರಿಕರಿಗೆ 5% ಬಡ್ಡಿ ನೀಡಲಾಗುತ್ತದೆ.

ಬ್ಯಾಂಕ್ ಆಫ್ ಬರೋಡ ಸ್ಥಿರ ಠೇವಣಿ ದರಗಳು:
ಎಸ್‌ಬಿಐ, ಪಿಎನ್ಬಿ ಮಾತ್ರವಲ್ಲದೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಲ್ಲಿಯೂ ಸಹ ಆರು ತಿಂಗಳ ಸ್ಥಿರ ಠೇವಣಿಯಲ್ಲಿ ಸಾಮಾನ್ಯ ನಾಗರಿಕರಿಗೆ 4.5% ಬಡ್ಡಿ ಲಭ್ಯವಿದ್ದರೆ, ಹಿರಿಯ ನಾಗರಿಕರಿಗೆ 5% ಬಡ್ಡಿ ನೀಡಲಾಗುತ್ತದೆ.

HDFC ಮತ್ತು ICICI ಬ್ಯಾಂಕ್ ಎಫ್‌ಡಿ ದರಗಳು:
ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲದೆ ಖಾಸಗಿ ವಲಯದ ಬ್ಯಾಂಕ್‌ಗಳು ಕೂಡ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಮೇಲೆ ಉತ್ತಮ ಬಡ್ಡಿಯನ್ನು ನೀಡುತ್ತವೆ. HDFC ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 6 ತಿಂಗಳವರೆಗೆ 4.5% ಬಡ್ಡಿ ಸೌಲಭ್ಯವನ್ನು ನೀಡುತ್ತದೆ. ಇದೇ ಸಮಯದಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಆರು ತಿಂಗಳ ಸ್ಥಿರ ಠೇವಣಿ ಮೇಲೆ 4.75% ಬಡ್ಡಿಯನ್ನು ನೀಡುತ್ತದೆ.

ಈ ಮೇಲಿನ ಬ್ಯಾಂಕ್ ಗಳಲ್ಲಿ ಸದ್ಯ ನಿಮ್ಮ ಹಣ ಉಳಿತಾಯ, ಹೂಡಿಕೆ ಮತ್ತು ಗ್ಯಾರೆಂಟಿ ಲಾಭ ಪಡೆಯಲು ಸ್ಥಿರ ಠೇವಣಿ ಗೆ ಉತ್ತಮ ಮಾರ್ಗವಾಗಿದ್ದು ಇದರಲ್ಲಿ ಗ್ರಾಹಕರ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ ಗ್ಯಾರಂಟಿ ರಿಟರ್ನ್ಸ್ ಕೂಡ ಲಭ್ಯವಿರುತ್ತವೆ.

You may also like

Leave a Comment