4
UPI: ಯುಪಿಐ ಪಾವತಿ ಮೇಲೆ ವಿಧಿಸುವ ಯಾವುದೇ ಪ್ರಸಾವನೆ ಸರಕಾರದ ಮುಂದಿಲ್ಲ. ಗ್ರಾಹಕರು ಇಂಥ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
2 ಸಾವಿರ ರೂ. ಗಿಂತಲೂ ಹೆಚ್ಚು ಮೌಲ್ಯದ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ. ಇದು ಗ್ರಾಹಕರಿಗೆ ಭಾರಿ ಹೊರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸಚಿವಾಲಯ ಸ್ಪಷ್ಟನೆ ಹೊರಬಿದ್ದಿದೆ.
ಗ್ರಾಹಕರು ವರ್ತಕರಿಗೆ ಪಾವತಿಸುವ ಮೊತ್ತದಲ್ಲಿ ನೀಡಬೇಕಿರುವ ಮರ್ಚಂಟ್ ಡಿಸ್ಕೊಂಟ್ ರೇಟ್ (ಎಂಡಿಆರ್) ಶುಲ್ಕವನ್ನು 2020ರ ಜನವರಿಯಿಂದ ಅನ್ವಯವಾಗುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ರದ್ದುಪಡಿಸಿದೆ. ಇದರಿಂದ ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ ಇಲ್ಲ, ಹೀಗಾಗಿ జిఎనోటి ಕೂಡ ಅನ್ವಯಿಸುವುದಿಲ್ಲ ಎಂದಿದೆ.
