Home » Aaradhya Bachchan: 11 ವರ್ಷದ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಹೈಕೋರ್ಟ್ ಮೆಟ್ಟಲೇರಿದ್ದು ಯಾಕೆ ಗೊತ್ತೇ ?

Aaradhya Bachchan: 11 ವರ್ಷದ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಹೈಕೋರ್ಟ್ ಮೆಟ್ಟಲೇರಿದ್ದು ಯಾಕೆ ಗೊತ್ತೇ ?

2 comments
Aaradhya Bachchan

Aaradhya Bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ (Aishwarya Rai and Abhishek Bachchan) ಅವರ ಪುತ್ರಿ ಆರಾಧ್ಯ ಬಚ್ಚನ್ (Aaradhya Bachchan) ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಾರಣ ಏನು ಗೊತ್ತಾ?

ಯೂಟ್ಯೂಬ್ ಚಾನೆಲ್ ವೊಂದು (yotube channel) 11 ವರ್ಷದ ಆರಾಧ್ಯ ಬಚ್ಚನ್ ಜೀವನದ ಬಗ್ಗೆ ವರದಿ ಮಾಡಿದ್ದು, ಆರಾಧ್ಯಳ ಆರೋಗ್ಯ ಚೆನ್ನಾಗಿಲ್ಲ ಎಂದು ತಿಳಿಸಿತ್ತು ಎನ್ನಲಾಗಿದೆ. ಈ ಮಾಹಿತಿ ತಿಳಿದ ಐಶ್ವರ್ಯ ರೈ ಪುತ್ರಿ ಆರಾಧ್ಯ ತನ್ನ ಆರೋಗ್ಯ ಹಾಗೂ ತನ್ನ ಜೀವನಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನೆಲ್ ಸುಳ್ಳು ಸುದ್ದಿ ವರದಿ ಮಾಡಿದೆಯೆಂದು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಅರ್ಜಿಯಲ್ಲಿ ತನ್ನ ಬಗ್ಗೆ ಮಾಧ್ಯಮಗಳು ಇಂತಹ ವರದಿ ಮಾಡುವ ಬಗ್ಗೆ ತಡೆಯಾಜ್ಞೆ ನೀಡಬೇಕು ಎಂದು ಆರಾಧ್ಯ ಕೋರಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆ ಏಪ್ರಿಲ್ 20ರ ಗುರುವಾರ (ಇಂದು) ನಡೆಯಲಿದೆ.

ಸದ್ಯ‌ ಕಳೆದ ಕೆಲ ದಿನಗಳಿಂದ ಐಶ್ವರ್ಯ ರೈ (Aishwarya Rai) ಬಗ್ಗೆ ಹಲವು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ದಾಂಪತ್ಯ ಸರಿಯಿಲ್ಲ. ಬಿರುಕು ಮೂಡಿದೆ ಎಂಬ ಗಾಸಿಪ್ ಹಬ್ಬಿತ್ತು. ಈ ಬಗ್ಗೆ ಅಭಿಷೇಕ್ ಬಚ್ಚನ್ ಸ್ಪಷ್ಟನೆ ನೀಡಿದ್ದು, ಗಾಸಿಪ್ ಗೆ ತೆರೆ ಎಳೆದಿದ್ದರು. ಇದೀಗ ಪುತ್ರಿ ಆರಾಧ್ಯ ಬಚ್ಚನ್ ಆರೋಗ್ಯ ಸರಿ ಇಲ್ಲ ಎಂಬ ಸುಳ್ಳು ಸುದ್ದಿ ಹರಿದಾಡಿದೆ. ಈ ಬಗ್ಗೆ ಆರಾಧ್ಯ ಕೋರ್ಟ್ ಮೊರೆ ಹೋಗಿದ್ದೂ ಆಗಿದೆ. ಈ ಪ್ರಕರಣದ ವಿಚಾರಣೆ ಏಪ್ರಿಲ್ 20ರ ಗುರುವಾರ (ಇಂದು) ನಡೆಯಲಿದೆ.

You may also like

Leave a Comment