Abhishek Ambarish -Aviva marriage: ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಬಿದ್ದಪ್ಪ ಅವರ ಮದುವೆ ವೈಭವೋಪೇತವಾಗಿ ನಡೆದಿದೆ. ಮೊನ್ನೆ ಜೂನ್ 5 ರಂದು ವಿವಾಹ ಜರುಗಿದ್ದು, ಜೂನ್ 7 ರಂದು ಆರತಕ್ಷತೆ ಕಾರ್ಯಕ್ರಮ ಕೂಡಾ ನಡೆದು ಹೋಗಿದೆ. ಎಲ್ಲಾ ಶ್ರೀಮಂತರ ಮದುವೆಯ ರೀತಿಯಲ್ಲೇ ಅಭಿಷೇಕ್ ಅಂಬರೀಷ್ (Abhishek Ambarish -Aviva marriage) ಮದುವೆ ನಡೆದಿದ್ದು ಘಟಾನುಘಟಿಗಳು ಭಾಗವಹಿಸಿ ನೂತನ ವಧು ವರರನ್ನು ಆಶೀರ್ವದಿಸಿದರು.
ಮದುವೆ ಏನೋ ಮುಗೀತು, ಈಗ ಮದುವೆಗೆ ಬಂದಿದ್ದ ಗಿಫ್ಟ್ ಗಳನ್ನು ಪಟ್ಟಿ ಮಾಡುವ ಕೆಲಸ. ಸೆಲೆಬ್ರಿಟಿ ಮದುವೆಯಾದ ಕಾರಣ ಹಲವು ಮಂದಿ ಶ್ರೀಮಂತರು ಅತಿ ಶ್ರೀಮಂತರು ಮದುವೆಗೆ ಹಲವು ಬೆಳೆಬಾಳುವ ಗಿಫ್ಟ್ ಅನ್ನು ನೀಡಿದ್ದಾರೆ. ಅದರಲ್ಲೂ ಮದುವೆಯಲ್ಲಿ ದುಬಾರಿ ಕಾರೊಂದು ಗಿಫ್ಟ್ ಆಗಿ ಸಿಕ್ಕಿ ಎಲ್ಲರ ಗಮನ ಸೆಳೆದಿದೆ. ಅಭಿಷೇಕ್ ಗೆ ಬಿಎಂಡಬ್ಲ್ಯೂ ಎಕ್ಸ್ 7 ಎಂಬ ಐಷಾರಾಮಿ ಕಾರು ಸಿಕ್ಕಿದೆ. ಹಾಗೆ ಸಿಕ್ಕ ಬಿಎಂಡಬ್ಲ್ಯೂ ಎಕ್ಸ್ 7 ಕಾರಿನ ಆರಂಭಿಕ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳ್ತೀರಿ. ಹೌದು 1.5 ಕೋಟಿ ರೂಪಾಯಿಯ ಬೆಲೆ ಇದೆ ಈ ಕಾರಿಗೆ. 2993 ಸಿಸಿ ಇಂಜಿನ್ ಪವರ್ನ ಇದು ಹೊಂದಿದೆ. ಈ ಕಾರಿನ ವಿಡಿಯೋ ಇಲ್ಲಿದೆ.
ಅಭಿಷೇಕ್ ಅಂಬರೀಶ್ ಅವರಿಗೆ ಪತ್ನಿ ಕುಟುಂಬದವರು ಐಷಾರಾಮಿ ಬಿಎಂಡಬ್ಲ್ಯು X7 ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಈ ಗಿಫ್ಟ್ ನೋಡಿ ಅಭಿಷೇಕ್ ಕೂಡ ಫುಲ್ ಖುಷ್ ಆಗಿದ್ದಾರೆ. ಅಭಿಷೇಕ್ ಅಂಬರೀಷ್ ಅವರನ್ನು ವಿವಾಹವಾಗಿರುವ ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಕೋಟಿ ಕೋಟಿ ಒಡತಿ ಅವಿವಾ, ಅಭಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಅಭಿಷೇಕ್ ಅವರಿಗೆ ಪತ್ನಿ ಕುಟುಂಬದವರು ಐಷಾರಾಮಿ ಬಿಎಂಡಬ್ಲ್ಯು X7 ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಈ ವಿಶೇಷ ಗಿಫ್ಟ್ ನೋಡಿದ ಅಭಿಷೇಕ್ ಕೂಡ ಫುಲ್ ಖುಷ್ ಆಗಿದ್ದಾರೆ ಎನ್ನುವ ಮಾಹಿತಿಯಿದೆ. ಅಭಿಷೇಕ್ ಪತ್ನಿ ಅವಿವಾ ಬಿದ್ದಪ್ಪ ಸ್ವತಃ.ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಕೂಡಾ ಆಗಿದ್ದಾರೆ. ಇನ್ನಿ ಅವಿವಾ ತಂದೆ ಫ್ಯಾಷನ್ ಗುರು ಎಂದು ಕರೆಸಿಕೊಂಡಿದ್ದ ವ್ಯಕ್ತಿ. ಆತ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಹಾಗಾಗಿ ಅವೀವಾ ಕುಟುಂಬವೇ ತುಂಬಾ. ಶ್ರೀಮಂತರು. ಅದರಲ್ಲೂ ಕೋಟಿ ಕೋಟಿ ದುಡ್ಡಿನ ಒಡತಿ ಅವಿವಾ. ಈಗ ಅವಿವಾ ಪೋಷಕರು ಅಭಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅಂಬರೀಶ್ ಅಭಿಷೇಕ್ ಕೈಗೆ BMW ಸಿಕ್ಕಿದೆ.
ಇನ್ನು ಅಭಿಷೇಕ್ ಅಂಬರೀಶ್ ಅವರಿಗೆ ಸಿಕ್ಕ ಐಷಾರಾಮಿ ಬಿಎಂಡಬ್ಲ್ಯು X7 ಕಾರಿಗೆ ಬಗ್ಗೆ ಹೇಳುವುದಾದರೆ ಇದೊಂದು ಅದ್ಭುತ ಚಲಿಸುವ ಮನೆ. ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯನ್ನು ಸ್ಥಳೀಯವಾಗಿ ತಯಾರಾದ ಜರ್ಮನ್ ವಾಹನ. ಈ ಬಿಎಂಡಬ್ಲ್ಯು X7 ಎಸ್‍ಯುವಿಯು ಮಿನರಲ್ ವೈಟ್, ಬ್ಲ್ಯಾಕ್ ಸಫೈರ್, ಕಾರ್ಬನ್ ಬ್ಲಾಕ್, ದ್ರಾವಿಟ್ ಗ್ರೇ, ಮತ್ತು ಟಾಂಜಾನೈಟ್ ಎಂಬ ಐದು ಬಣ್ಣಗಳ ವಿವಿಧ ಆಯ್ಕೆಗಳಲ್ಲಿ ಲಭ್ಯವಿದೆ. ಅಭಿಷೇಕ್ ಅಂಬರೀಶ್ ಅವರಿಗೆ ಗಿಫ್ಟ್ ಸಿಕ್ಕ ಕಾರು ವೈಟ್ ಮಿನರಲ್ ವೈಟ್ ಬಣ್ಣವನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು X7 ಎಸ್‍ಯುವಿಯಲ್ಲಿ ಹೆಚ್ಚು ಶಕ್ತಿಶಾಲಿ 3.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ 6, ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಬರೋಬ್ಬರಿ 380 ಬಿಹೆಚ್‍ಪಿ ಪವರ್ ಮತ್ತು 520 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು. ಇತರ ಎಲ್ಲಾ ಐಷಾರಾಮಿ ಫೀಚರ್ಗಳನ್ನು ಹೊಂದಿರುವ ಭರಪೂರ ವಾಹನವಾಗಿದೆ.
ಇದನ್ನು ಓದಿ: Love Jihad: ಒಡ ಹುಟ್ಟಿದ ಸಹೋದರಿಯರಿಬ್ಬರ ದುರಂತ ಅಂತ್ಯ, ಇಲ್ಲೂ ನಡೆದಿತ್ತಾ ಲವ್ ಜಿಹಾದ್ ?
