ನಟ ಅಭಿಷೇಕ್ ಅಂಬರೀಷ್ ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಡಿ.11 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿತು. ಇನ್ನೂ ಅಭಿಷೇಕ್ ತಮ್ಮ ಭಾವಿ ಪತ್ನಿಗೆ ನಿಶ್ಚಿತಾರ್ಥದಂದು ತೊಡಿಸಿದ ರಿಂಗ್ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಟ ತೊಡಿಸಿದ ಡೈಮಂಡ್ ರಿಂಗ್ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಕಾರಿ ಪ್ರಶ್ನೆಗಳು ಮೂಡಿದ್ದು, ಅದರ ಬೆಲೆ, ವಿಶೇಷತೆ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಇನ್ನೂ ನೀವೇನಾದರೂ ಈ ಡೈಮಂಡ್ ರಿಂಗ್ ನ ಬೆಲೆ ತಿಳಿದರೆ ಖಂಡಿತ ದಂಗಾಗ್ತೀರಾ!!
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಮಾಡೆಲ್ ಅವಿವಾ ಬಿದ್ದಪ್ಪ ಹಾಗೂ ನಟ ಅಭಿಷೇಕ್ ಅಂಬರೀಷ್ ಇಬ್ಬರಿಗೂ ಕೆಲವು ವರ್ಷಗಳ ಹಿಂದೆ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಇದೀಗ ನಿಶ್ಚಿತಾರ್ಥದ ಹಂತಕ್ಕೂ ಬಂದು, ಡಿ.11 ರಂದು ಎರಡೂ ಕುಟುಂಬದ ಪ್ರಮುಖರ ಸಮ್ಮುಖದಲ್ಲಿ ನಿಶ್ಚಿತಾರ್ಥವು ಅದ್ದೂರಿಯಾಗಿ ನೆರವೇರಿದೆ.
ಇನ್ನೂ ಈ ಎಂಗೇಜ್ಮೆಂಟ್ಗೆ ನಟ ತರಿಸಿದ್ದ ರಿಂಗ್ ಸಖತ್ ಸ್ಪೇಷಲ್ ಆಗಿದ್ದು, ತಮ್ಮ ಪ್ರೀತಿಯ ಭಾವಿಪತ್ನಿಗೆ ಅಭಿಷೇಕ್ ಅಂಬರೀಷ್ ಅವರು ಪೂಣೆಯಿಂದ ಸ್ಪೆಷಲ್ ರಿಂಗ್ ರೆಡಿ ಮಾಡಿಸಿದ್ದಾರೆ. ಇನ್ನೂ ಈ ಡೈಮಂಡ್ ರಿಂಗ್ನ ಬೆಲೆ ಕೇಳಿದರೆ ನೀವಂತು ಖಂಡಿತಾ ಶಾಕ್ ಆಗ್ತೀರಾ!!! ಅಭಿಷೇಕ್ ಅವರು ನಿಶ್ಚಿತಾರ್ಥದಂದು ತಮ್ಮ ಪ್ರೇಯಸಿಗೆ ಬರೋಬ್ಬರಿ 37 ಲಕ್ಷದ ಡೈಮಂಡ್ ರಿಂಗ್ ತೊಡಿಸಿದ್ದಾರೆ.
ಇನ್ನೂ, ನಟ ಅಂಬರೀಷ್ ತಾವು ಸಾವನ್ನಪ್ಪುವ ಒಂದು ವರ್ಷ ಮುಂಚೆಯೇ ಮಗನ ಕ್ಯೂಟ್ ಲವ್ ಸ್ಟೋರಿ ಬಗ್ಗೆ ತಿಳಿಕೊಂಡಿದ್ದರು. ತಮ್ಮ ಪ್ರೀತಿ ವಿಚಾರವನ್ನು ಅಭಿಷೇಕ್ ತಂದೆಗೆ ಹೇಳಿದ್ದರು. ಇದಕ್ಕೆ ತಂದೆ-ತಾಯಿ ಇಬ್ಬರು ಒಪ್ಪಿಗೆ ನೀಡಿ ಹರಿಸಿ, ಹಾರೈಸಿದ್ದರು. ಇನ್ನೂ, ನಟ ಅಭಿಷೇಕ್ ಮತ್ತು ಅವಿವಾ ಇಬ್ಬರದು ಸುಮಾರು ಐದು ವರ್ಷಗಳ ಪ್ರೀತಿಯಾಗಿದ್ದು, ಫಾರಿನ್ ನಲ್ಲಿ ಇಬ್ಬರಿಗೂ ಪರಿಚಯವಾಗಿ, ನಂತರ ಪ್ರೀತಿಗೆ ತಿರುಗಿದೆ. ನಿಶ್ಚಿತಾರ್ಥ ಅದ್ದೂರಿಯಾಗಿ ನಡೆಯಿತು, ಇನ್ನೂ ಜೂನ್ನಲ್ಲಿ ಮದುವೆ ಮಾಡೋದಕ್ಕೆ ಭರ್ಜರಿ ಪ್ಲಾನ್ ನಡೆದಿದ್ದು, ಜೊತೆಗೆ ಮಂಡ್ಯದಲ್ಲಿಯೂ ಮದುವೆ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
