Home » Bigg Boss Kannada-11: ಬಿಗ್ ಬಾಸ್ ಮನೆಯೊಳಗೆ ಅವಘಡ – ಎಲ್ಲರನ್ನು ನಕ್ಕು ನಗಿಸ್ತಿದ್ದ ಹನುಮಂತು ಸ್ಥಿತಿ ಗಂಭೀರ !!

Bigg Boss Kannada-11: ಬಿಗ್ ಬಾಸ್ ಮನೆಯೊಳಗೆ ಅವಘಡ – ಎಲ್ಲರನ್ನು ನಕ್ಕು ನಗಿಸ್ತಿದ್ದ ಹನುಮಂತು ಸ್ಥಿತಿ ಗಂಭೀರ !!

362 comments

Bigg Boss Kannada-11: ಕನ್ನಡ ಬಿಗ್ ಬಾಸ್ ಸೀಸನ್-11ರ ಗ್ರಹಚಾರ ಯಾಕೋ ಸರಿಯೇ ಇಲ್ಲ ಅನಿಸ್ತಿದೆ. ಆರಂಭದಲ್ಲೇ ಒಂದಲ್ಲಾ ಒಂದು ಎಡವಟ್ಟುಗಳ ಸಂಭವಿಸುತ್ತಲೇ ಇದೆ. ಹಲವರಿಗೆ ಗಾಯ, ಏಟುಗಳಾಗಿವೆ. ನೋವುಗಳು ಉಂಟಾಗಿವೆ. TRP ಕಿಂಗ್ ಆಗಿದ್ದ ಜಗದೀಶ್ ಮನೆಯಿಂದ ಹೊರ ಹೋದ ಬೆನ್ನಲ್ಲೇ ಹಳ್ಳಿಯ ಮುಗ್ಧ ಹುಡುಗ, ಹಾಡುಗಾರ ಹನುಮಂತು ಎಂಟ್ರಿ ಆಗಿ ಮತ್ತೆ TRP ಕಿತ್ತುಕೊಂಡು ಬಂದಿತ್ತು. ಆದರೀಗ ಹನುಮಂತು ಸ್ಥಿತಿ ಕೂಡ ಗಂಭೀರ ಎನ್ನಲಾಗಿದೆ.

https://www.instagram.com/reel/DBgFPwDN5hX/?igsh=ejhvY21rNTlmOG13

ಹೌದು, ಜಗದೀಶ್(Jagadish) ಮನೆಯಿಂದ ಹೊರ ಹೋದಾಗ ನಾವು ಬಿಗ್ ಬಾಸ್(Bigg Boss) ನೋಡಲ್ಲ ಎಂದು ಸುಮ್ಮನಿದ್ದ ಜನ ಹನುಮಂತು(Hanumantu) ಎಂಟ್ರಿ ಆಗ್ತಿದ್ದಂತೆ ಮತ್ತೆ ವೀಕ್ಷಕರು ದುಪ್ಪಟ್ಟಾಗಿ TRP ಸಿಕ್ಕಾಪಟ್ಟೆ ಏರಿತ್ತು. ಮುಗ್ಧತೆಗೆ ಇನ್ನೊಂದು ಹೆಸರಾಗಿರುವ ಹನುಮಂತ ಟಿಆರ್‌ಪಿ ಅಸ್ತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಮೂರು ದಿನಗಳಿಂದ ಪ್ರೇಕ್ಷಕರು ಹನುಮಂತನಿಗಾಗಿ ಶೋ ನೋಡುತ್ತಿದ್ದರು ಜೊತೆಗೆ ಎಂಜಾಯ್‌ ಮಾಡುತ್ತಿದ್ದರು. ಆದರೆ ಈಗ ಅದಕ್ಕೂ ಕಲ್ಲು ಬಿದ್ದಂತಾಗಿದೆ. ಯಾಕೆಂದರೆ ಮನೆಯಲ್ಲಿ ಬಿಗ್ ಬಾಸ್ ನೀಡಿದ ಟಾಸ್ಕ್ ಆಡುವಾಗ ಅವಘಡ ಸಂಭವಿಸಿ ಹನುಮಂತು ಸ್ಥಿತಿ ಗಂಭೀರವಾಗಿದೆ. ಬಿಗ್ ಬಾಸ್ ಹಂಚಿಕೊಂಡ ಪ್ರೋಮೋ ಇದನ್ನು ಸಾಕ್ಷೀಕರಿಸಿದೆ.

ಯಸ್, ಇಂದು ಪ್ರಸಾರಗೊಳ್ಳುತ್ತಿರುವ ಸಂಚಿಕೆಯಲ್ಲಿ ಟಾಸ್ಕ್ ವೇಳೆ ಕಿತ್ತಾಟಗಳು ಜೋರಾಗಿ ನಡೆದಿದೆ. ಆದರೆ ಈ ಟಾಸ್ಕ್ ಆಡುವಾಗ ಅವಘಡ ಸಂಭವಿಸಿದ್ದು ಎಳೆದಾಟ ಕಿತ್ತಾಟದಲ್ಲಿ ಹನುಮಂತ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತತನನ್ನು ಇತರ ಸ್ಪರ್ಧಿಗಳು ಉಪಚರಿಸಿ, ಚಿಕಿತ್ಸೆಗೆ ಕಳುಹಿಸಿರುವ ಪ್ರೋಮೋ ವೈರಲ್‌ ಆಗುತ್ತಿದೆ. ಹನುಮಂತನ ಆರೋಗ್ಯ ಸ್ಥಿತಿಯ ಬಗ್ಗೆ ಇಂದಿಪ ಸಂಚಿಕೆಯಲ್ಲಿ ಸ್ಪಷ್ಟೀಕರಣ ಸಿಗಬೇಕಿದೆ.

You may also like

Leave a Comment