Home » Abhishek Bachchan: ‘ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ ‘ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಸಕತ್ ಉತ್ತರ !

Abhishek Bachchan: ‘ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ ‘ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಸಕತ್ ಉತ್ತರ !

2 comments
Abhishek Bachchan

Abhishek bachchan: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಮದುವೆಯ ನಂತರ ಸಿನಿಮಾಗಳಿಗೆ ಬ್ರೇಕ್ ನೀಡಿದ್ದರು. ಸದ್ಯ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಇದೀಗ ‘ಪೊನ್ಶಿಯಿನ್ ಸೆಲ್ವನ್ 2’ (ponniyin selvan) ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪೊನ್ನಿನ್ ಸೆಲ್ವನ್ ಭಾಗ 2 ರಲ್ಲಿ ಐಶ್ವರ್ಯಾ ರೈ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಅವರು ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಬಳಿ ಅಭಿಮಾನಿಗಳು ಬೇಡಿಕೆ ಮುಂದಿಟ್ಟಿದ್ದು, ‘ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ’ ಎಂದು ಹೇಳಿದ್ದಾರೆ. ಸದ್ಯ ಇದಕ್ಕೆ ಅಭಿಷೇಕ್ (Abhishek bachchan) ಪ್ರತಿಕ್ರಿಯೆ ನೀಡಿದ್ದು ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಅಭಿಷೇಕ್ ಏನಂದ್ರು?

ಐಶ್ವರ್ಯಾ ರೈ ಅವರು ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಅವರ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ 2’ ನಲ್ಲಿ (ponniyin selvan-2) ಅಭಿನಯಿಸಿದ್ದು,‌ ಐಶ್ ನಟನೆ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಚೋಳ ಸಾಮ್ರಾಜ್ಯದ ಗತವೈಭವ ಸಾರುವ ‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾ ಏಪ್ರಿಲ್​ 28ರಂದು ತೆರೆಗೆ ಬಂದಿದ್ದು, ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೂಪರ್​ ಹಿಟ್​ ಆಗಿ, ಶತಕೋಟಿ ಕ್ಲಬ್​ ಸೇರಿರುವ ಈ ಚಿತ್ರದ ನಾಗಾಲೋಟ ಮುಂದುವರಿದಿದೆ.

ಸಿನಿಮಾದಲ್ಲಿ ಐಶ್ ನಟನೆ ಮೆಚ್ಚಿಕೊಂಡ ಅಭಿಮಾನಿಯೊಬ್ಬ ಅಭಿಷೇಕ್‌ಗೆ “ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾಗಳನ್ನು ಮಾಡಲು ಬಿಡಿ, ನೀವು ಆರಾಧ್ಯಳನ್ನು ನೋಡಿಕೊಳ್ಳಿ” ಎಂದು ಹೇಳಿದ್ದಾರೆ. ಇದಕ್ಕೆ ಅಭಿಷೇಕ್ ಏನಂದ್ರು ಗೊತ್ತಾ?

“ಐಶ್ವರ್ಯಾ ಯಾವುದೇ ವಿಚಾರಕ್ಕೂ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಇಷ್ಟ ಆಗುವುದನ್ನು ಮಾಡುತ್ತಾರೆ. ಅದರಲ್ಲೂ ಅವರಿಗೆ ಇಷ್ಟವಾಗುವ ವಿಚಾರವನ್ನು ಮಾಡುವಲ್ಲಿ ನನ್ನ ಅನುಮತಿ ಬೇಕಿಲ್ಲ” ಎಂದು ನೇರವಾಗಿ ಉತ್ತರ ನೀಡಿದರು.

ಸದ್ಯ ಅಭಿಷೇಕ್ ಮಾತಿನಿಂದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಪತ್ನಿ ಐಶ್ವರ್ಯಾ ಬೆಂಬಲಿಸುವ ರೀತಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪತ್ನಿಗೆ ತನಗಿಷ್ಟವಾದದ್ದನ್ನು ಮಾಡಲು ಸ್ವಾತಂತ್ರ್ಯ ಇದೆ ಎಂದು ಈ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ:India’s Richest Swami: ಭಾರತದ ಅತ್ಯಂತ ಶ್ರೀಮಂತ ಧರ್ಮ ಗುರುಗಳು ಇವ್ರು, ಟನ್ ಲೆಕ್ಕದಲ್ಲಿ ತೂಕಕ್ಕೆ ಹಾಕುವ ಮಟ್ಟಕ್ಕೆ ಇದೆ ಸಂಪತ್ತು !

You may also like

Leave a Comment