Home » Salman Khan: ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಬಾಲಿವುಡ್ ಬ್ಯಾಡ್ ಬಾಯ್! ತಪ್ಪೆಲ್ಲ ನನ್ನದೇ ಎಂದ ಸಲ್ಲು ಹೇಳಿದ್ದೇನು?

Salman Khan: ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಬಾಲಿವುಡ್ ಬ್ಯಾಡ್ ಬಾಯ್! ತಪ್ಪೆಲ್ಲ ನನ್ನದೇ ಎಂದ ಸಲ್ಲು ಹೇಳಿದ್ದೇನು?

by ಹೊಸಕನ್ನಡ
2 comments
Salman Khan

Salman Khan: ಬಾಲಿವುಡ್ ಬ್ಯಾಡ್ ಬಾಯ್, ನಟ ಸಲ್ಮಾನ್ ಖಾನ್ (Salman Khan) ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾದ ಸೋಲಿನ ನಂತರ ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದಿದ್ದು, ತಪ್ಪೆಲ್ಲ ನನ್ನದೇ ಎಂದು ತಾನು ಪ್ರೀತಿಯಲ್ಲಿ ಎಲ್ಲಿ ಎಡವಿದೆ ಅನ್ನೋದ್ರುಬಗ್ಗೆ ಬಾಯ್ಬಿಟ್ಟಿದ್ದಾರೆ

ಹೌದು, ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ ನಡುವಿನ ಪ್ರೀತಿ ವಿಚಾರ ಇಡೀ ಜಗತ್ತೇ ಗೊತ್ತಿರುವ ವಿಚಾರ. 90ರ ದಶದಲ್ಲಿ ಇಬ್ಬರೂ ಅನೇಕ ಸಂದರ್ಭದಲ್ಲಿ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದ್ದರು. ಇನ್ನೇನು ಈ ಜೋಡಿ ಮದುವೆ ಆಗಲಿದೆ ಎಂಬಷ್ಟರಲ್ಲೇ ಎಲ್ಲವೂ ತಲೆಕೆಳಗಾಯಿತು. ನಂತರ ಮತ್ತೊಬ್ಬಳು ಬಾಲಿವುಡ್ ನಟಿ ಕತ್ರಿನಾ ಕೈಫ್ ಜೊತೆಗೆ ಸಲ್ಲುಗೆ ಪ್ರೇಮಾಂಕುರವಾಗಿದ್ದು ಅದು ಕೂಡ ಅರ್ಧಕ್ಕೆ ಮೊಟಕಾಗಿದ್ದು ಎಲ್ಲರಿಗೂ ಗೊತ್ತಿದೆ. ಆದರೀಗ ಸಲ್ಮಾನ್ ಖಾನ್ (Salman Khan) ತಮ್ಮ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾದ ಸೋಲಿನ ನಂತರ ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದಿದ್ದಾರೆ. ‘ತಪ್ಪೆಲ್ಲ ನನ್ನದೇ ಎಂದು ತಾವು ಪ್ರೀತಿಯಲ್ಲಿ ಎಡವಿದ್ದು ಎಲ್ಲಿ’ ಎಂದು ಬಾಯ್ಬಿಟ್ಟಿದ್ದಾರೆ.

ಇತ್ತೀಚಿಗೆ ತೆರೆಯ ಕಂಡ, ಸಲ್ಮಾನ್ ಖಾನ್ ಅವರೇ ನಟಿಸಿ, ನಿರ್ಮಾಣ ಮಾಡಿದ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ನಿರೀಕ್ಷಿಸಿದ ಹಾಗೆ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡಲಿಲ್ಲ. ಫ್ಲಾಪ್ ಆಗಿ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಳೆಯ ರಿಲೇಶನ್‌ಶಿಪ್ ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

ತಮ್ಮ ಹಳೇ ಪ್ರೀತಿಯರ ಬಗ್ಗೆ ಮಾತನಾಡಿದ ಸಲ್ಲು ಇಂದು ನನ್ನ ಎಲ್ಲಾ ಎಕ್ಸ್‌ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ ಎಂದಿದ್ದಾರೆ. ಅಲ್ಲದೆ ಪ್ರೀತಿಯಲ್ಲಿ ನಾನು ದುರಾದೃಷ್ಟವಂತ. ಎಲ್ಲರೂ ಒಳ್ಳೆಯವರಾಗಿದ್ದರು. ಆದರೆ, ತಪ್ಪು ನನ್ನದೇ. ಮೊದಲ ವ್ಯಕ್ತಿ ಬಿಟ್ಟು ಹೋದಾಗ ತಪ್ಪು ಅವರದ್ದು ಅನಿಸುತ್ತದೆ. ಇದು ಪದೇಪದೇ ರಿಪೀಟ್ ಆದಾಗ ಅನುಮಾನ ಬರುತ್ತದೆ. ತಪ್ಪು ಅವರದ್ದೋ ಅಥವಾ ನನ್ನದೋ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಮುಂದೆಯೂ ನನ್ನ ಜೀವನದಲ್ಲಿ ವಿಶೇಷವಾದ ಯಾರಾದರೂ ಬರಬಹುದು ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಇದರೊಂದಿಗೆ ಹೆಚ್ಚೆಚ್ಚು ಮಂದಿ ನಮ್ಮನ್ನು ಬಿಟ್ಟು ಹೋದರು ಎಂದರೆ ಆಗ ತಪ್ಪು ನಮ್ಮದೇ ಅನ್ನೋದು ಖಚಿತವಾಗುತ್ತದೆ. ಅವರಲ್ಲಿ ಯಾವುದೇ ತಪ್ಪಿರಲಿಲ್ಲ. ತಪ್ಪೆಲ್ಲ ನನ್ನದೇ. ಅವರು ಅಂದುಕೊಂಡ ರೀತಿಯ ಜೀವನ, ಖುಷಿಯನ್ನು ನನಗೆ ನೀಡಲು ಆಗದಿದ್ದರೆ ಎನ್ನುವ ಭಯ ಇದ್ದೇ ಇತ್ತು. ನನ್ನನ್ನು ಬಿಟ್ಟು ಹೋದ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಐಶ್ವರ್ಯ ರೈ(Aishwarya Rai), ಕತ್ರಿನಾ ಕೈಫ್ (Katrina Kaif) ಬಗ್ಗೆ ಪರೋಕ್ಷವಾಗಿ ನಟ ಮಾತನಾಡಿದ್ದಾರೆ.

ಇದನ್ನೂ ಓದಿ: ಮೇ3 ದ.ಕ.ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ, ಬಿಗಿ ಭದ್ರತೆ,ವಾಹನ ಸಂಚಾರ ಬದಲಾವಣೆ

You may also like

Leave a Comment