Home » Shivraj kumar: ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ನಟ ಶಿವರಾಜ್ ಕುಮಾರ್ ನಿರ್ಧಾರ? ಶಿವಣ್ಣ ಹೇಳಿದ್ದಿಷ್ಟು!!

Shivraj kumar: ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ನಟ ಶಿವರಾಜ್ ಕುಮಾರ್ ನಿರ್ಧಾರ? ಶಿವಣ್ಣ ಹೇಳಿದ್ದಿಷ್ಟು!!

1 comment
Shivraj kumar

Shivraj kumar: ಹ್ಯಾಟ್ರಿಕ್ ಹೀರೋ, ನಾಡಿನ ಖ್ಯಾತ ನಟ, ದೊಡ್ಮನೆಯ ದೊಡ್ಡ ಕುಡಿ, ಅಪಾರ ಅಭಿಮಾನಿಗಳ ನಾಯಕ ನಟ ಶಿವರಾಜ್ ಕುಮಾರ್(Shivraj kumar) ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಸದ್ದುಮಾಡುತ್ತಿದೆ. ಈ ಕುರಿತು ಶಿವಣ್ಣ ಕೂಡ ಪ್ರತಿಕ್ರಿಯಿಸಿದ್ದಾರೆ.

ಹೌದು, ಹತ್ತಿರ ಹತ್ತಿರ ಸುಮಾರು 40 ವರ್ಷದಿಂದ ಸಿನಿಮಾ ಜಗತ್ತಿಗೆ ದೊಡ್ಡ ಕಲಾ ಸೇವೆ ಒದಗಿಸಿದ, ಅದ್ರಲ್ಲೂ ಬಾಲ ನಟನಾಗಿ, ತಮ್ಮ ತಂದೆಯಾದ ವರನಟ ಡಾ.ರಾಜ್‌ಕುಮಾರ್ ಅವರ ಜೊತೆಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾ ಕ್ಷೇತ್ರ ಬಿಟ್ಟು ಹೋಗ್ತಾರಾ? ಎಂಬ ಪ್ರಶ್ನೆ ಮೂಡಿದ್ದು,

ಕನ್ನಡ ಇಂಡಸ್ಟ್ರಿಯಲ್ಲೀಗ ಭಾರೀ ದೊಡ್ಡ ಸಂಚಲನ ಸೃಷ್ಟಿಸಿದೆ. ಸದ್ಯ ಇದಕ್ಕೆ ಶಿವಣ್ಣ ಕೂಡ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Davanagere: ದರ್ಶನ್ ಅಭಿಮಾನಿಯಿಂದ ನೈತಿಕ ಪೋಲೀಸ್ ಗಿರಿ- ಯುವಕನ ಬರಗೈ ಮೇಲೆ ಕರ್ಪೂರ ಹಚ್ಚಿಸಿ ದೌರ್ಜನ್ಯ!!

ಅಂದಹಾಗೆ ಶಿವಣ್ಣ ನಟನೆಯ, ತಮಿಳಿನ ಎರಡನೇ ಸಿನಿಮಾ ಆದ ಕ್ಯಾಪ್ಟನ್ ಮಿಲ್ಲರ್’ ರಿಲೀಸ್ ಆಗುವಾಗ ತಮಿಳು ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ, ನಟ ಶಿವಣ್ಣ ಅವರಿಗೆ ಎಂದಾದರೂ ಸಿನಿಮಾ ಬೇಜಾರ್ ಆಗಿ ಸಿನಿಮಾದ ಸಹವಾಸವೇ ಸಾಕು ಅಂತಾ ಅನಿಸಿದೆಯಾ? ಅಂತಾ ಸಂದರ್ಶಕ ಪ್ರಶ್ನೆ ಕೇಳಿದ್ರು. ಅದಕ್ಕೆ ಹ್ಯಾಟ್ರಿಕ್ ಹೀರೋ ಖಡಕ್ ಆಗಿ ಉತ್ತರಿಸಿದ್ದು, ನನಗೆ ಸಿನಿಮಾ ಕ್ಷೇತ್ರವನ್ನ ಬಿಟ್ಟು ಹೋಗುವ ಯಾವ ಚಿಂತನೆ ಕೂಡ ಇಲ್ಲ. ನನ್ನ ಉಸಿರು & ಕನಸು ಹಾಗೂ ಜೀವನ ಎಲ್ಲವೂ ಸಿನಿಮಾನೇ ಆಗಿದೆ ಎಂದಿದ್ದಾರೆ ನಟ ಶಿವಣ್ಣ. ಈ ಮೂಲಕ ದೊಡ್ಮನೆಯ ಕುಡಿ, ಸಿನಿಮಾ ಕುರಿತು ತಮಗೆ ಇರುವಂತಹ, ಪ್ರೀತಿ & ಗೌರವಾಧಾರಗಳನ್ನು ತಿಳಿಸಿದ್ದಾರೆ.

You may also like

Leave a Comment