Home » Thalapathy Vijay : ಇನ್‌ಸ್ಟಾಗ್ರಾಮ್‌ಗೆ ಲಗ್ಗೆ ಇಟ್ಟ ತಮಿಳು ನಟ ವಿಜಯ್! ಕೆಲವೇ ಗಂಟೆಗಳಲ್ಲಿ 25 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಪಡೆದ ತಳಪತಿ!

Thalapathy Vijay : ಇನ್‌ಸ್ಟಾಗ್ರಾಮ್‌ಗೆ ಲಗ್ಗೆ ಇಟ್ಟ ತಮಿಳು ನಟ ವಿಜಯ್! ಕೆಲವೇ ಗಂಟೆಗಳಲ್ಲಿ 25 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಪಡೆದ ತಳಪತಿ!

by ಹೊಸಕನ್ನಡ
0 comments
Actor Thalapathy Vijay

Actor Thalapathy Vijay :  ತಮಿಳು ನಟ ವಿಜಯ್‌ ( Actor Thalapathy Vijay) ಅವರಿಗಿರೋ ಫ್ಯಾನ್ಸ್ ಬಳಗದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರ ಎಲ್ಲಾ ಸಿನಿಮಾಗಳು ಕೂಡ ನೂರು ಕೋಟಿಗೂ ಅಧಿಕ ವ್ಯವಹಾರ ಮಾಡುತ್ತವೆ. ಅಂದಹಾಗೆ ಈಗಾಗಲೇ ಫೇಸ್‌ಬುಕ್ ಮತ್ತು ಟ್ವಿಟರ್‌ ನಲ್ಲಿ ಹವಾ ಕ್ರಿಯೇಟ್ ಮಾಡಿರೋ ತಳಪತಿ ಈವರೆಗೂ ಇನ್‌ಸ್ಟಾಗ್ರಾಮ್‌ಗೆ (Instagram) ಎಂಟ್ರಿ ಕೊಟ್ಟಿರಲಿಲ್ಲ. ಆದರೀಗ ಅದು ಕೂಡ ಆಗಿದೆ. ಅವ್ರು ಎಂಟ್ರಿ ಕೊಟ್ಟ ಕೆಲವೇ ಕ್ಷಣಗಳಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಆಗಿ ದಾಖಲೆ ಬರೆದಿದ್ದಾರೆ.

ಹೌದು, ಏಪ್ರಿಲ್ 2ರಂದು ‘ದಳಪತಿ’ ವಿಜಯ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ. ಅಚ್ಚರಿ ಎಂದರೆ, ಅವರು ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ಕೆಲವೇ ಕ್ಷಣಗಳಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ. ಸೋಷಿಯಲ್ ಮೀಡಿಯಾಗಳಿಂದ ಕೊಂಚ ದೂರವೇ ಇರುವ ವಿಜಯ್ ಅವರು ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಇದ್ದರೂ ವರ್ಷಕ್ಕೊಮ್ಮೆ ಪೋಸ್ಟ್ ಹಾಕುವುದು ಕಷ್ಟ. ಅವರು ಏನಾದ್ರೂ ಹಾಕಿದ್ರೆ ಅದು ಬೇಗನೇ ವೈರಲ್ ಆಗುತ್ತೆ. ಸದ್ಯ ಇನ್‌ಸ್ಟಾಗ್ರಾಮ್ ನಲ್ಲೂ ಹೀಗೆ ಆಗಿದೆ.

ಇನ್​ಸ್ಟಾಗ್ರಾಂನಲ್ಲಿ ಆಕ್ಟರ್ ವಿಜಯ್ ಹೆಸರೊಂದಿಗೆ ಖಾತೆ ತೆರೆದಿರುವ ವಿಜಯ್ ತಮ್ಮ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಲೋ ಗೆಳೆಯ-ಗೆಳತಿಯರೇ ಎಂದು ಬರೆದುಕೊಂಡಿದ್ದಾರೆ. ಚಿತ್ರ ಹಂಚಿಕೊಂಡ ನಾಲ್ಕು ಗಂಟೆಯಲ್ಲಿಯೇ 25 ಲಕ್ಷ ಲೈಕ್​ಗಳು ಬಂದಿದ್ದು, 25 ಲಕ್ಷಕ್ಕೂ ಹೆಚ್ಚು ಮಂದಿ ವಿಜಯ್ ಅವರನ್ನು ಫಾಲೋ ಮಾಡಿದ್ದಾರೆ. ವರ್ಷಗಳಿಂದ ಇನ್​ಸ್ಟಾಗ್ರಾಂನಲ್ಲಿರುವ ಹಲವು ನಟ-ನಟಿಯರಿಗೆ ಈಗಲೂ 25 ಲಕ್ಷ ಫಾಲೋವರ್​ಗಳಿಲ್ಲ ಇನ್​ಸ್ಟಾಗ್ರಾಂನಲ್ಲಿ ಆದರೆ ವಿಜಯ್​ಗೆ ಕೇವಲ ನಾಲ್ಕು ಗಂಟೆಯಲ್ಲಿ 25 ಲಕ್ಷ ಮಂದಿ ಫಾಲೋವರ್​ಗಳು ದೊರಕಿದ್ದಾರೆ.

ವಿಜಯ್​ಗೆ ಟ್ವಿಟ್ಟರ್​ನಲ್ಲಿ 44 ಲಕ್ಷ ಫಾಲೋವರ್​ಗಳಿದ್ದಾರೆ, ಆದರೆ ವಿಜಯ್ ಯಾರನ್ನೂ ಫಾಲೋ ಮಾಡುವುದಿಲ್ಲ. ಇನ್ನು ಫೇಸ್​ಬುಕ್​ನಲ್ಲಿ 78 ಲಕ್ಷ ಜನ ಫಾಲೋವರ್​ಗಳಿದ್ದಾರೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ನಾಲ್ಕೇ ಗಂಟೆಯಲ್ಲಿ 25 ಲಕ್ಷ ಮಂದಿ ಫಾಲೋವರ್​ಗಳನ್ನು ಗಳಿಸಿದ್ದು, ಮುಂದೆ ಈ ಸಂಖ್ಯೆ ಹತ್ತು ಕೋಟಿ ಮುಟ್ಟಿದರೂ ಆಶ್ಚರ್ಯವಿಲ್ಲ. ಅಂದಹಾಗೆ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವ ವ್ಯಕ್ತಿ ವಿರಾಟ್ ಕೊಹ್ಲಿ(Virat Kohli), ಅವರನ್ನು 24 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡುತ್ತಾರೆ.

 

You may also like

Leave a Comment