Home » Jaggesh : ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ ಗುರುಪ್ರಸಾದ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟ ಜಗ್ಗೇಶ್

Jaggesh : ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ ಗುರುಪ್ರಸಾದ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟ ಜಗ್ಗೇಶ್

0 comments

Jaggesh : ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ಮಠ ಗುರುಪ್ರಸಾದ್‌ ಅವರು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಗುರುಪ್ರಸಾದ್ ಬಗ್ಗೆ ನಟ, ನವರಸ ನಾಯಕ ಜಗ್ಗೇಶ್(Jaggesh ) ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

ಹೌದು, ಗುರುಪ್ರಸಾದ್ ಅವರ ಸಾವಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನವರಸ ನಾಯಕ ಜಗ್ಗೇಶ್ ಅವರು ‘ಗುರುಪ್ರಸಾದ್ ಮೊದಲು ನನ್ನ ಬಳಿ ಬಂದಾಗ ನಾಲ್ಕು ಪುಸ್ತಕಗಳು ಕೈಲ್ಲಿ ಇರುತ್ತಿದ್ದವು. ಆದ್ರೆ, ಬರಬರುತ್ತಾ ಆರು ಮದ್ಯದ ಬಾಟಲಿಗಳು ಕೈಲ್ಲಿರುತ್ತಿದ್ದವು. ಒಮ್ಮೆ ಅವರ ಮನೆಗೆ ಹೋದ ಮನೆ ತುಂಬೆಲ್ಲಾ ಮದ್ಯದ ಬಾಟೆಲ್ ಗಳು ಬಿದ್ದಿದ್ದವು. ಒಟ್ಟಿನಲ್ಲಿ ಗುರುಪ್ರಸಾದ್ ಅವರು, ಮದ್ಯದ ಚಟಕ್ಕೆ ದಾಸರಾಗಿದ್ದರು ಎಂದು ಹೇಳಿದ್ದಾರೆ.

ಅಲ್ಲದೆ ಮಠ, ಎದ್ದೇಳು ಮಂಜುನಾಥ ಸಿನಿಮಾ ಮಾಡುವಾಗ ಉತ್ತಮವಾಗಿಯೇ ಇದ್ದರು. ಎದ್ದೇಳು ಮಂಜುನಾಥ ಸಿನಿಮಾ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಮಗಳಿಗೋಸ್ಕರ ಕುಡಿತ ಬಿಡಬೇಕೆಂಬ ಸೀನ್ ಇತ್ತು. ಆಗ ಗುರುಪ್ರಸಾದ್ ಮಾಡಿದ್ದ ವರ್ತನೆ ಅಚ್ಚರಿ ತಂದಿತ್ತು. ಗುರುಪ್ರಸಾದ್ ಇಗೋ ಮತ್ತು ನನ್ನ ಮಾತೇ ನಡೆಯಬೇಕು ಎಂಬ ಹಠಮಾರಿ ಡೈರೆಕ್ಟರ್ ಆಗಿದ್ದರು. ಸಹವಾಸದಿಂದ ಗುರುಪ್ರಸಾದ್ ಕೆಟ್ಟು ಹೋಗಿದ್ದರು. ವರ್ತನೆಯೇ ಬದಲಾಗಿತ್ತು ಎಂದಿದ್ದಾರೆ.

ಇಷ್ಟಲ್ಲದೆ ಗುರುಪ್ರಸಾದ್ ಇಗೋ ಮತ್ತು ನನ್ನ ಮಾತೇ ನಡೆಯಬೇಕು ಎಂಬ ಹಠಮಾರಿ ಡೈರೆಕ್ಟರ್ ಆಗಿದ್ದರು. ಸಹವಾಸದಿಂದ ಗುರುಪ್ರಸಾದ್ ಕೆಟ್ಟು ಹೋಗಿದ್ದರು. ವರ್ತನೆಯೇ ಬದಲಾಗಿತ್ತು. ಹಲವು ಬಾರಿ ನಾನೇ ಗುರುಪ್ರಸಾದ್ ಗೆ ಬುದ್ದಿವಾದ ಹೇಳಿದ್ದೆ. ಮೊದಲ ಪತ್ನಿ ತುಂಬಾ ಸಹಾಯ ಮಾಡಿದರು. ಒಳ್ಳೆಯ ಹೆಣ್ಣು ಮಗಳು. ಅವರ ಜೊತೆಗೂ ಚೆನ್ನಾಗಿ ಬಾಳಲಿಲ್ಲ.ಇನ್ನು ಎರಡನೇ ಮದುವೆಯಾಗಿದ್ದ. ಆಕೆಯೊಂದಿಗೆ ಚೆನ್ನಾಗಿ ಬದುಕಲಿಲ್ಲ. ನನಗೆ ಪ್ರೆಸ್ ಮೀಟ್ ನಲ್ಲಿ ಅವಮಾನ ಮಾಡಿದ್ದ. ನನಗೆ ಮಸಿ ಬಳಿದಿದ್ದ ಎಂದು ಬೇಸರ ತೋಡಿಕೊಂಡರು.

‘ಜಗ್ಗೇಶ್ ಮಾನ ಮರ್ಯಾದೆ ಹರಾಜು ಹಾಕುತ್ತೇನೆ’ ಎಂದಿದ್ದ ಗುರುಪ್ರಸಾದ್ 

ಇದೇ ವೇಳೆ ರಂಗನಾಯಕ ಚಿತ್ರದ ಬಗ್ಗೆಯೂ ಮಾತನಾಡಿರುವ ಜಗ್ಗೇಶ್, ‘ಇವನ ಮಾನ ಮರ್ಯಾದೆಯೆಲ್ಲ ಹೆಂಗೆ ಹರಾಜು ಹಾಕ್ತೀನಿ ನೋಡುತ್ತಾ ಇರಿ’ ಎಂದು ಗುರುಪ್ರಸಾದ್ ನನ್ನ ಬಗ್ಗೆ ಹೇಳಿಕೊಂಡಿದ್ದನಂತೆ. ಅದು ನನಗೆ ಗೊತ್ತಾಗಿಹೋಯ್ತು. ನಾನು ತುಂಬಾ ಭಯಭೀತನಾದೆ.

ಹಾಗಾಗಿ ನನಗೆ ಸಿನಿಮಾ ತೋರಿಸು ಎಂದೆ. ಆದರೆ ಅವನು ತೋರಿಸಲಿಲ್ಲ. ನನ್ನ ಬಳಿ ಪಿಕ್ಚರ್​ ಕೇಳೋದೆಲ್ಲ ಇಟ್ಕೋಬೇಡಿ. ನಾನು ಪಿಕ್ಚರ್ ತೋರಿಸಿಕೊಂಡು ಕೂರುವವನಲ್ಲ ಅಂತ ಹೇಳಿದ್ದ. ಸಿನಿಮಾ ರಿಲೀಸ್​ ಆದ ಬಳಿಕ ನನ್ನ ಜೀವನದಲ್ಲೇ ಆಗದೇ ಇರುವಷ್ಟು ಅವಮಾನ ಆ ಒಂದು ಸಿನಿಮಾದಿಂದ ಆಯಿತು’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

You may also like

Leave a Comment