Home » Amrutha Iyengar: ತಾನು ವರಿಸುವ ಹುಡುಗ ಹೀಗಿರಬೇಕೆಂದ ನಟಿ ಅಮೃತ ಅಯ್ಯಂಗಾರ್, ಹಾಗಿದ್ರೆ ‘ಡಾಲಿ’ ಕಥೆ ಏನು?

Amrutha Iyengar: ತಾನು ವರಿಸುವ ಹುಡುಗ ಹೀಗಿರಬೇಕೆಂದ ನಟಿ ಅಮೃತ ಅಯ್ಯಂಗಾರ್, ಹಾಗಿದ್ರೆ ‘ಡಾಲಿ’ ಕಥೆ ಏನು?

by ಹೊಸಕನ್ನಡ
2 comments
Amrutha Iyengar

Amrutha Iyengar : ನಟಿ ಅಮೃತ ಅಯ್ಯಂಗಾರ್(Amrutha Iyengar:) ಇಂದು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಉದಯೋನ್ಮುಖ ನಾಯಕಿ ನಟಿಯಾಗಿ ಹೆಸರು ಗಳಿಸಿದ್ದಾರೆ. ಲವ್ ಮಾಕ್ಟೇಲ್(Love Mocktail) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು ಇಂದು ಎಲ್ಲರಿಗೂ ಚಿರಪರಿಚಿತ. ನಟನೆಯ ಮೂಲಕವೂ ಹಲವರ ನೆಚ್ಚಿನ ನಟಿಯಾಗಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಅಮೃತ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದು ಎಲ್ಲೆಡೆ ಸುದ್ಧಿಯಾಗ್ತಿದೆ.

ಇತ್ತೀಚೆಗೆ ಅಮೃತ ಅವರ ಹೆಸರು ನಟ ಡಾಲಿ ಧನಂಜಯ್(Dali Dhanajay) ಜೊತೆ ತುಳುಕುಹಾಕಿಕೊಂಡಿತ್ತು. ಇತ್ತೀಚೆಗೆ ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ಡಾಲಿ ಧನಂಜಯ್​ ಮತ್ತು ಅಮೃತಾ ಅಯ್ಯಂಗಾರ್​ ಜೊತೆಯಾಗಿ ನಟಿಸುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲವು ಚಿತ್ರಗಳಲ್ಲಿ ನಡೆಸಿದ್ದಲ್ಲದೆ ಆಗಾಗ ಒಂದೇ ವೇದಿಕೆಯಲ್ಲಿ ಕಾಣಿಸುತ್ತಾರೆ. ಹೀಗಾಗಿ ಇಬ್ಬರೂ ಮದುವೆ ಆಗ್ತಾರೆ ಅನ್ನೋ ಸುದ್ದಿ ಕೂಡ ಆಗಾಗ ಕೇಳಿಬರ್ತಾ ಇತ್ತು. ಆದರೀಗ ಅಮೃತ ಆಡಿರೋ ಮಾತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಡಾಲಿ ಧನಂಜಯ್ ಹಾಗೂ ಅಮೃತ ಅಯ್ಯಂಗಾರ್ ನಾಯಕಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಗುರುದೇವ ಹೊಯ್ಸಳ(Gurudev Hoysala) ಸದ್ಯ ಇದೆ ತಿಂಗಳ ಕೊನೆಯಲ್ಲಿ ಬಿಡುಗಡೆ ಆಗಲು ಸಿದ್ಧವಾಗಿ ನಿಂತಿದೆ. ಇದೇ ಸಿನಿಮಾದ ಪ್ರಚಾರ ಕಾರ್ಯದ ಸಂದರ್ಶನ ನೀಡುವ ಸಂದರ್ಭದಲ್ಲಿ ಅಮೃತ ಅಯ್ಯಂಗಾರ್ ಅವರು ತಮ್ಮ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡಿದ್ದಾರೆ.

ತಮ್ಮ ಲವ್ ಲೈಫ್ ಕುರಿತಂತೆ ಮಾತನಾಡಿರುವ ಅಮೃತ ಅಯ್ಯಂಗಾರ್ “ನಾನು ಮದುವೆ ಆಗೋದಾದ್ರೆ ಖಂಡಿತ ಲವ್ ಮ್ಯಾರೇಜ್ ಆಗುತ್ತೇನೆ, ಯಾರೋ ತಿಳಿಯದ ವ್ಯಕ್ತಿಯ ಜೊತೆಗೆ ನಮ್ಮ ಉಳಿದ ಜೀವನವನ್ನು ಅಷ್ಟೊಂದು ಸುಲಭವಾಗಿ ಕಳೆಯುವುದಿಲ್ಲ. ಅಲ್ಲದೆ ನಾನು ಮದುವೆ ಆಗೋದಾದ್ರೆ ಮಿಡಲ್ ಕ್ಲಾಸ್ ಹುಡುಗನನ್ನೇ ಮದುವೆಯಾಗ್ತೇನೆ. ಏಕೆಂದರೆ ನಾನು ಮಿಡಲ್ ಕ್ಲಾಸ್ ಜೀವನವನ್ನೇ ಇಷ್ಟಪಡ್ತೇನೆ. ನಾನು ಯಾವುದೇ ಫೈವ್ ಸ್ಟಾರ್ ಹೋಟೆಲ್‌ಗೆ ಹೋಗುವುದಿಲ್ಲ, ಲೋಕಲ್ ರೆಸ್ಟೋರೆಂಟ್‌ಗಳಿಗೆ ಹೋಗಿ ಮುದ್ದೆ ಮತ್ತು ಅನ್ನ ಸಾರನ್ನೆ ನಾನು ಊಟ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಅಂದಹಾಗೆ ಮೊದಲು ಹೇಳಿದಂತೆ ನಟ ಡಾಲಿ ಧನಂಜಯ್ ಹಾಗೂ ನಟಿ ಅಮೃತ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ಗುಸು ಗುಸು ಶುರುವಾಗಿದೆ. ಕೆಲವೆಡೆ ಈ ವಿಚಾರದಲ್ಲಿ ನೇರವಾಗಿ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗೆಲ್ಲಾ ನಿಮ್ಮ ಮದುವೆ ಯಾವಾಗ ಅಂತ ಕೇಳಿದ್ದಕ್ಕೆ, ‘ಈಗತಾನೇ ಕರಿಯರ್​ ಆರಂಭ ಆಗಿದೆ. ಮದುವೆಗೆ ಇನ್ನೂ ಟೈಮ್​ ಇದೆ’ ಎಂದು ಅವರು ನಗು ಚೆಲ್ಲಿದ್ದರು. ಸದ್ಯ ಅಮೃತ ಹೇಳಿರೋ ಲಕ್ಷಣಗಳೆಲ್ಲ ಡಾಲಿ ಜೊತೆ ಇದ್ದು, ಸದ್ಯದಲ್ಲೇ ಶುಭ ಸುದ್ದಿ ಏನಾದರೂ ಕೊಡ್ತಾರಾ ಎಂದು ಕಾದುನೋಡಬೇಕಿದೆ.

You may also like

Leave a Comment