ಸ್ಯಾಂಡಲ್‌ವುಡ್‌ನ ತಾರಾ ಜೋಡಿಯಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಈಗ ಈ ಸ್ಟಾರ್ ಜೋಡಿಯ ನಿಶ್ವಿತಾರ್ಥ ನಡೆದಿದೆ. ಅದ್ಧೂರಿಯಾಗಿ ಸಂಭ್ರಮದ ನಿಶ್ಚಿತಾರ್ಥ ನಡೆದಿದೆ ಈ ಜೋಡಿದ್ದು. ಕಳೆದ ಡಿ.3 ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಹಸಮಣೇಯೇಲು ದಿನ ಕೂಡಿ ಬಂದಿದೆ. ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದೆ. ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರಿಸೆಪ್ಷನ್ ಅದ್ಧೂರಿಯಾಗಿ ನಡೆಯಲಿದೆ.
ಈ ಮುದ್ದಾದ ಜೋಡಿ ಮದುವೆ ಸಂಭ್ರಮದಲ್ಲಿದ್ದು, ಸಿಂಹ ತನ್ನ ಮನದರಸಿಗೆ ಅರಶಿನ ಹಚ್ಚಿ ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ಹರಿಪ್ರಿಯ ಹಂಚಿಕೊಂಡಿದ್ದಾರೆ.



