Home » Actress Ileana: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಈ ನಟಿಗೆ ಮದುವೆ ಆಗದೇ ಮಗು ಬೇಕಂತೆ! ಇದಕ್ಕಾಗಿ ಕಾಯುತ್ತಿರುವೆ ಎಂದ ಈಕೆ ಹೇಳಿದ್ದೇನು?

Actress Ileana: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಈ ನಟಿಗೆ ಮದುವೆ ಆಗದೇ ಮಗು ಬೇಕಂತೆ! ಇದಕ್ಕಾಗಿ ಕಾಯುತ್ತಿರುವೆ ಎಂದ ಈಕೆ ಹೇಳಿದ್ದೇನು?

by ಹೊಸಕನ್ನಡ
1 comment
Actress Ileana

Actress Ileana : ಸದ್ಯ ಸಿನಿ ಇಂಡಸ್ಟ್ರಿಯಲ್ಲಿ ಮದುವೆಗೂ ಮುಂಚೆ ಗರ್ಭಿಣಿ ಆಗುವುದು, ಮಗು ಪಡೆಯುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿದೆ. ಕೆಲ ನಟಿಯರು ಇದನ್ನು ಆರಂಭಿಸಿದರೆ, ಇನ್ನು ಕೆಲ ನಟಿಯರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ನಟಿ ಇಲಿಯಾನ(Actress Ileana) ಕೂಡ ಇದೇ ಸಾಲಿಗೆ ಸೇರಿದರಾ ಎಂಬ ಗುಮಾನಿ ಹುಟ್ಟಿದ್ದು, ಅವರೇ ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಒಂದು ಈ ಪ್ರಶ್ನೆಗೆ ಕಾರಣವಾಗಿದೆ.

ಹೌದು, ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡದೊಂದಿಗೆ ಹಲವು ಭಾಷೆಗಳಲ್ಲಿ ನಟಿಸಿದ್ದ ಸೌತ್ ಇಂಡಿಯಾದ ಖ್ಯಾತ ನಟಿ ಇಲಿಯಾನ ಒಂದು ಸಮಯದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿ ಬಳಿಕ ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದು ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಇವರು, ಇನ್ನೂ ಮದುವೆ (Marriage) ಆಗಿಲ್ಲ. ಆದರೂ ಕೂಡ ನಾನು ತಾಯಿ (Pregnancy) ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ ಇನ್ಸ್ಟಾದಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿರುವ ಇಲಿಯಾನ, ‘ತಾವು ತಾಯಿ ಆಗುತ್ತಿದ್ದು ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ’ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವೂ ಇದೆ.

ಆದರೆ ಇಲಿಯಾನ ಪ್ರೆಗ್ನಿನ್ಸಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಹಲವರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಶುಭಾಶಯಗಳನ್ನು ಕೋರಿದ್ದರೆ, ಇನ್ನೂ ಕೆಲವರು ಮದುವೆ ಆಗದೇ ಮಗು ಹೇಗೆ? ಯಾವಾಗ ಮದುವೆಯಾದೆ? ಮಗುವಿನ ತಂದೆ ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಹರಿಬಿಟ್ಟಿದ್ದಾರೆ.

ಇನ್ನು ಇಲಿಯಾನ ನಿಜವಾಗಿಯೂ ಗರ್ಭಿಣಿಯಾ ಅಥವಾ ಯಾವುದಾದರೂ ಸಿನಿಮಾದ ಪ್ರಮೋಷನ್ ಗೆ ಈ ರೀತಿ ಪೋಸ್ಟ್ ಮಾಡಿದ್ದಾರಾ ಎನ್ನುವ ಅನುಮಾನ ಕೂಡ ಇನ್ನೊಂದು ದೃಷ್ಟಿಯಿಂದ ಮೂಡಿದೆ. ಆದರೆ ಇಲಿಯಾನ ಅವರೇ ಸದ್ಯದಲ್ಲಿ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆಯಲಿದ್ದಾರೆ. ಅಭಿಮಾನಿಗಳಲೆಲ್ಲರು ಕಾದು ನೋಡಬೇಕಿದೆ.

 

ಇದನ್ನು ಓದಿ : Actress Soundarya: ನಟಿ ಸೌಂದರ್ಯ ಸಾಯೋ ವಿಷ್ಯ ಆಕೆಯ ತಂದೆಗೆ ಮೊದ್ಲೇ ಗೊತ್ತಿತ್ತಾ ? ಶಾಕಿಂಗ್ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ !

You may also like

Leave a Comment