Home » Keerthy suresh: ಕೊನೆಗೂ ಬಾಯ್ ಫ್ರೆಂಡ್ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್! ಏನಂದ್ರು ಗೊತ್ತಾ ಸೌತ್ ಬ್ಯೂಟಿ!

Keerthy suresh: ಕೊನೆಗೂ ಬಾಯ್ ಫ್ರೆಂಡ್ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್! ಏನಂದ್ರು ಗೊತ್ತಾ ಸೌತ್ ಬ್ಯೂಟಿ!

by ಹೊಸಕನ್ನಡ
0 comments
Keerthy Suresh

Keerthy suresh boyfriend :ದಕ್ಷಿಣ ಭಾರತ ಸಿನಿಮಾರಂಗದ(South Film Industry) ಖ್ಯಾತ ನಟಿ ಕೀರ್ತಿ ಸುರೇಶ್(Keerti Suresh) ಮದುವೆ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕೀರ್ತಿ ಸುರೇಶ್ ಮದ್ವೆ ಫಿಕ್ಸ್ ಆಗಿದೆ, ಉದ್ಯಮಿ ಜೊತೆ ಹಸಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿತ್ತು. ಆದಕ್ಕೆ ಪುಷ್ಟಿನೀಡುವಂತೆ ಕೀರ್ತಿ ಸುರೇಶ್ ಅವರು ನಿಗೂಢ ವ್ಯಕ್ತಿ ಜೊತೆ (Keerthy suresh boyfriend) ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಗಳನ್ನು ಎಬ್ಬಿಸಿತ್ತು. ಕೀರ್ತಿ ಇದು ಸ್ನೇಹನಾ, ಪ್ರೀತಿನಾ? ಇಲ್ಲಾ ಬಾಯ್‌ಫ್ರೆಂಡ್‌ನ(Boy Friend) ಪರಿಚಯಿಸಿದ್ರಾ? ಎಂಬ ಗುಮಾನಿಗಳು ಮೂಡಿತ್ತು. ಆದರೀಗ ಇದೀಗ ನಟಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.

ಹೌದು, ಹಳದಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಯುವಕನೊಬ್ಬನ ಜೊತೆ ಕೀರ್ತಿ ಕಾಣಿಸಿಕೊಂಡಿದ್ದರು. ಆತನಿಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಇದರ ಬೆನ್ನಲ್ಲೇ ಆತ ಯಾರು? ಏನ್ ಕತೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು. ಆತ ದುಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ. ಕೀರ್ತಿ ಫ್ರೆಂಡ್. ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಕೂಡ ಆಗುತ್ತಾರೆ ಎನ್ನುವ ಚರ್ಚೆ ನಡೀತು. ಇದೀಗ ಆ ವ್ಯಕ್ತಿಯ ಬಗ್ಗೆ ಸ್ವತ: ‘ಮಹಾನಟಿ’ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಹಾಗೂ ತನ್ನ ಗೆಳೆಯನ ಬಗ್ಗೆ ಗುಸು ಗುಸು ಶುರುವಾದ ಕೂಡಲೇ ಎಚ್ಚೆತ್ತ ನಟಿ ಆತ ತನ್ನ ಸ್ನೇಹಿತನೆಂದು ಕೀರ್ತಿ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಸ್ನೇಹಿತರನ್ನು (Friends) ಎಳೆತರಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸ್ನೇಹಿತನ ಬರ್ತ್‌ಡೇ ಪಾರ್ಟಿಯಲ್ಲಿ ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ.

ಅಲ್ಲದೆ ಈ ಫೋಟೊ ಕುರಿತು ಬರುತ್ತಿರುವ ವದಂತಿಗಳ ಬಗ್ಗೆ ನಟಿ ಟ್ವೀಟ್ ಮಾಡಿ “ಒಂದು ಬಾರಿ ಕೂಡ ಸರಿಯಾಗಿ ಗೆಸ್ ಮಾಡಲಾಗಲಿಲ್ಲ. ಆತ ನನ್ನ ಸ್ನೇಹಿತ. ಯಾವ ಹೆಸರು ಸಿಕ್ಕಿದರೆ ಅದನ್ನು ಹೇಳುತ್ತಿದ್ದೀರಾ. ನನಗೆ ಆ ಮಿಸ್ಟರಿ ಮ್ಯಾನ್ ಸಿಕ್ಕಿದಾಗ ಆ ಸಮಯ ಬಂದಾಗ ನಾನೇ ರಿವೀಲ್ ಮಾಡುತ್ತೇನೆ. ಅಲ್ಲಿಯವರೆಗೂ ಸ್ವಲ್ಪ ರಿಲ್ಯಾಕ್ಸ್ ಆಗಿರಿ” ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಕೀರ್ತಿ ಅವರು ಪೋಸ್ಟ್ ಮಾಡಿದ್ದ ಫೋಟೋದಲ್ಲಿ ಅವರ ಪಕ್ಕದಲ್ಲಿ ಇರುವ ವ್ಯಕ್ತಿ ಫರ್ಹಾನ್ ಬಿನ್ ಲೈತ್(Farhan bin Laith) ಎನ್ನಲಾಗಿದೆ. ಈತ ರಿಯಲ್ ಎಸ್ಟೇಟ್(Real Estate) ಉದ್ಯಮಿ. ಫರ್ಹಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೀರ್ತಿ ಭಾಗಿಯಾಗಿದ್ದರು. ಅಷ್ಟೆಯಲ್ಲ ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿ ಫೋಟೋಗೆ ಪೋಸ್ ನೀಡಿದ್ದರು.

ಸದ್ಯ ಕೀರ್ತಿ ಸುರೇಶ್ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ತೆಲುಗಿನ ‘ಭೋಳಾ ಶಂಕರ್’ ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ ‘ಮಾಮನನ್’, ‘ಸಿರೇನ್’, ‘ರಘು ತಾತ’ ಹಾಗೂ ‘ರಿವಾಲ್ವರ್ ರೀಟಾ’ ಚಿತ್ರಗಳಲ್ಲಿ ನಟಸುತ್ತಿದ್ದಾರೆ. ಕೀರ್ತಿ ನಟನೆಯ ‘ರಘು ತಾತ’ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ:Aditya Singh Rajput dead: ಬಾತ್‌ರೂಮಿನಲ್ಲಿ ಶವವಾಗಿ ಪತ್ತೆಯಾದ ನಟ ಆದಿತ್ಯ ಸಿಂಗ್ ರಜಪೂತ್ ! ಅಷ್ಟಕ್ಕೂ ಸಾವಿಗೆ ಕಾರಣವೇನು?

You may also like

Leave a Comment