Home » Samantha ruth prabhu: ಫೋಟೋ ಪೋಸ್ಟ್ ಮಾಡಿ ಮತ್ತೆ ಮದುವೆಯಾಗೋ ಸುಳಿವು ನೀಡಿದ ಸಮಂತಾ! ಹುಡುಗ ಯಾರು?

Samantha ruth prabhu: ಫೋಟೋ ಪೋಸ್ಟ್ ಮಾಡಿ ಮತ್ತೆ ಮದುವೆಯಾಗೋ ಸುಳಿವು ನೀಡಿದ ಸಮಂತಾ! ಹುಡುಗ ಯಾರು?

by ಹೊಸಕನ್ನಡ
0 comments
Samantha Ruth Prabhu

Samantha Ruth Prabhu: ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ನಟ ನಾಗ ಚೈತನ್ಯ(Naga Chaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ ಬಳಿಕ ಒಂಟಿಯಾಗಿ ಬದುಕುತ್ತಿದ್ದಾರೆ. ವಿಚ್ಛೇದನ ಪಡೆದ ಬಳಿಕ ಸ್ಯಾಮ್ ಸಂಪೂರ್ಣವಾಗಿ ಸಿನಿಮಾ ಮತ್ತು ವೆಬ್​ ಸಿರೀಸ್​(Web Series) ಕಡೆಗೆ ಗಮನ ಹರಿಸಿದ್ದು, ಸದ್ಯ ಬಾಲಿವುಡ್(Bollywood) ನಲ್ಲಿ ಆಕ್ಟಿವ್ ಆಗಿದ್ದಾರೆ. ಆದರೀಗ ಇದೆಲ್ಲದರ ನಡುವೆ ಸಮಂತಾ ಮತ್ತೆ ಮದುವೆಯಾಗುತ್ತಿದ್ದಾರೆ (Wedding) ಎಂಬ ಸುದ್ದಿ ಹರಿದಾಡುತ್ತಿದ್ದು, ಎರಡನೇ ಮದುವೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಸ್ಟಾರ್ ಹೀರೋಯಿನ್(Star Heroin) ಸಮಂತಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿ ಕೆರಿಯರ್​ನಲ್ಲಿ ವಿನೂತನ ಹೆಜ್ಜೆಗಳನ್ನು ಇಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಾಗ ಚೈತನ್ಯ ಜೊತೆ ವಿಚ್ಛೇದನದ ನಂತರ ಸಮಂತಾ ಪ್ರತಿ ಹೆಜ್ಜೆಯೂ ಚರ್ಚೆಯಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಸಮಂತಾ ಎರಡನೇ ಮದುವೆಯಾಗ್ತಾರಾ? ಅಥವಾ ಮದುವೆನೇ ಆಗೋದಿಲ್ಲ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ನಡುವೆ ಸಮಂತಾ ಹುಡುಗನ ಫೋಟೋ ಪೋಸ್ಟ್ ಮಾಡಿದ್ದಾರೆ. ಆ ವ್ಯಕ್ತಿ ಯಾರು? ಸಮಂತಾ ಈ ಹುಡುಗನ ಬಗ್ಗೆ ಹೇಳೋದೇನು?

ಹೀಗೆ ಸಮಂತಾ ಮದುವೆ ಸುದ್ದಿ ಚರ್ಚೆ ಆಗಲು ಕಾರಣ ಇತ್ತೀಚಿಗೆ ನಟಿ ಹಂಚಿಕೊಂಡಿದ್ದ ಹುಡುಗನ ಪೋಸ್ಟ್. ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ(Instagram Story)ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ನಾನು ಸೂಕ್ತವಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ವ್ಯಕ್ತಿಯೇ ಬಾಲಿವುಡ್ ಸೆಲೆಬ್ರಿಟಿ ಡಾ.ಜ್ಯುವೆಲ್ ಗಮಾಡಿಯಾ(Dr. Dr. Jewel Gamadia) ತನಗೆ ಸರಿಯಾದ ಜೋಡಿ ಬೇಕು ಎಂದಿದ್ದಾರೆ.

ಬಾಲಿವುಡ್ ನಾಯಕಿಯರಾದ ಅನುಷ್ಕಾ ಶರ್ಮಾ(Anushka Sharma), ಕತ್ರಿನಾ ಕೈಫ್(Katrina Kaif), ಅಜಯ್ ದೇವಗನ್(Ajay Devgan) ಸೇರಿದಂತೆ ಅನೇಕ ಬಿಟೌನ್ ಸೆಲೆಬ್ರಿಟಿಗಳಿಗೆ ಡಾ. ಜ್ಯುವೆಲ್ ಗಮಾಡಿಯಾ ಫ್ಯಾಮಿಲಿ ಡಾಕ್ಟರ್ ಆಗಿದ್ದಾರೆ. ಡಾ.ಜ್ಯುವೆಲ್ ಜೊತೆ ಸಮಂತಾ ಮದುವೆಯಾಗೋದು ನಿಜಾನಾ.? ಇದಕ್ಕೆ ನಟಿಯೇ ಉತ್ತರಿಸಬೇಕಿದೆ.

ಅಂದಹಾಗೆ ವೈಯುಕ್ತಿಕ ಜೀವನದಲ್ಲಿ ವಿಚ್ಛೇದನದ ನಂತರವೂ ಸಮಂತಾ ಮದುವೆ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿಲ್ಲ ಎಂಬುದು ತಿಳಿಯುತ್ತದೆ. ಆದ್ರೆ ಈ ಪೋಸ್ಟ್ ನೋಡಿದ ಮೇಲೆ.. ಸಮಂತಾ ಕೂಡ ಎರಡನೇ ಮದುವೆ ಯೋಚನೆ ಮಾಡ್ತಾರಾ? ಎಂಬ ಚರ್ಚೆ ಶುರುವಾಗಿವೆ.

ಇದನ್ನೂ ಓದಿ: Lubna Amir: ಈ ಖ್ಯಾತ ನಟಿ ತನ್ನದೇ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು!! ಪ್ರಿಯಕರ ಬಿಚ್ಚಿಟ್ಟ ರೋಚಕ ಸತ್ಯ!!

You may also like

Leave a Comment