Actress Sherlyn Chopra: ಬಾಲಿವುಡ್‌ನ (Bollywood) ಬೋಲ್ಡ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್ ಚೋಪ್ರಾ (Actress Sherlyn Chopra) ಇದೀಗ ಉದ್ಯಮಿ ವಿರುದ್ಧ ದೂರು ನೀಡಿದ್ದಾರೆ. ಉದ್ಯಮಿಯು ತಮ್ಮೊಡನೆ ಅನುಚಿತವಾಗಿ ವರ್ತಿಸಿದ ಎಂದು ಹೇಳಿ, ಆತನ ಮೇಲೆ ದೂರು ದಾಖಲಿಸಿದ್ದಾರೆ.
ನಟನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ.
ಈ ಹಿಂದೆ ನಟಿ, ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ (Saajid Khan) ವಿರುದ್ಧ ಗಂಭೀರ ಆರೋಪ ಮಾಡಿ, ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದರು. ಇದೀಗ ನಟಿ ಮುಂಬೈ (mumbai) ಮೂಲದ ಉದ್ಯಮಿಯೊಬ್ಬರ ವಿರುದ್ಧ ಕಿಡಿಕಾರಿದ್ದು, ಉದ್ಯಮಿಯು ತಮ್ಮೊಡನೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಿ, ಆತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನೂ ದಾಖಲಿಸಿದ್ದಾರೆ.
ಈ ಬಗ್ಗೆ ನಟಿ ಶೆರ್ಲಿನ್ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ, ವಿಡಿಯೋ ಆಲ್ಬಂ (video album) ಹಾಡೊಂದನ್ನು ಮಾಡಿಕೊಡುವ ಸಲುವಾಗಿ ಏ. 12ರಂದು ಶರ್ಲಿನ್ ಅವರನ್ನು ಹೊಟೇಲ್‌ವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಉದ್ಯಮಿ, ಶರ್ಲಿನ್ ಅವರನ್ನು ಚೆನ್ನಾಗಿ ಮಾತನಾಡಿಸಿದ್ದು, ತುಂಬಾ ಹೊಗಳಿದ್ದರು ಕೂಡ. ಹಾಡಿನ ನಿರ್ಮಾಣಕ್ಕೆ ಶರ್ಲಿನ್ ಮ್ಯಾನೇಜರ್ ಕೈಯಲ್ಲಿ ಮುಂಗಡ ಹಣವನ್ನೂ ನೀಡಿದ್ದಾರೆ ಎನ್ನಲಾಗಿದೆ.
ಎಲ್ಲಾ ಕಾರ್ಯಗಳು ಮುಗಿದ ನಂತರ, ನಟಿ ಮನೆಗೆ ಹೊರಡಲು ಅನುವಾದಾಗ ಉದ್ಯಮಿ ತನ್ನ ಬಳಿ ವಾಹನ ಇಲ್ಲ, ನನಗೆ ಡ್ರಾಪ್ ಕೊಡುವಿರಾ? ಎಂದು ಕೇಳಿದ್ದಾರೆ. ಇದಕ್ಕೆ ನಟಿ ಒಪ್ಪಿಗೆ ನೀಡಿದ್ದಾರೆ. ಬಳಿಕ ಶರ್ಲಿನ್ ಮನೆ ಬರುತ್ತಿದ್ದಂತೆ ಉದ್ಯಮಿ ಸುನಿಲ್ ನಿಮ್ಮ ಮನೆ ನೋಡಬಹುದಾ? ಎಂದಿದ್ದಾರೆ. ಶೆರ್ಲಿನ್ ‘ಸರಿ ಬನ್ನಿ’ ಎಂದು ಮನೆಗೆ ಕರೆದೊಯ್ದು, ಇಬ್ಬರೂ ಕೆಲಹೊತ್ತು ಮಾತನಾಡಿದ್ದು, ನಂತರ ಊಟ ಪಾರ್ಸೆಲ್ ತರಿಸಿ ಸೇವಿಸಿದ್ದಾರೆ ಎನ್ನಲಾಗಿದೆ.
ಊಟದ ಬಳಿಕ ನಟಿ ಕುಳಿತ ಜಾಗಕ್ಕೆ ಬಂದ ಉದ್ಯಮಿ ಆಕೆಯ ಎದೆ ಭಾಗವನ್ನು ಮುಟ್ಟಿದ್ದಾನೆ ಎಂದು ನಟಿ ಹೇಳಿದ್ದು, ಈತನ ವರ್ತನೆಯಿಂದ ಶಾಕ್ ಆದ ನಟಿ ತಕ್ಷಣವೇ ಆತನಿಂದ ತಪ್ಪಿಸಿಕೊಂಡು, ಸಿಟ್ಟುಗೊಂಡಿದ್ದಾರೆ. ಇದೆಲ್ಲ ನನಗೆ ಇಷ್ಟವಾಗಲ್ಲ, ತಕ್ಷಣವೇ ನೀವು ಹೊರಡಿ ಎಂದಿದ್ದಾರೆ. ಉದ್ಯಮಿ ತನ್ನ ವರ್ತನೆಗೆ ಕ್ಷಮೆಯಾಚಿಸಿ, “ನೀವು ತುಂಬ ಹಾಟ್ ಆಗಿದ್ದೀರಿ, ಹಾಗಾಗಿ ನನ್ನಿಂದ ತಡೆಯಲು ಆಗಲಿಲ್ಲ ”ಎಂದು ಸುನೀಲ್ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೊಂಚ ಗರಂ ಆಗಿ ಉತ್ತರಿಸಿದ ನಟಿ“ ನಾನು ಹಾಟ್ ಇದ್ದ ಮಾತ್ರಕ್ಕೆ ಸಾರ್ವಜನಿಕರ ಆಸ್ತಿಯಲ್ಲ ” ಎಂದಿದ್ದಾರೆ.
“ಈ ಘಟನೆ ಬಳಿಕ ನಾನು ತಕ್ಷಣವೇ ನನ್ನ ಕೋಣೆಗೆ ಬಂದೆ. ಆದರೆ ಆತ ಮತ್ತೆ ಚಾರ್ಜರ್ ನೆಪದಲ್ಲಿ ನನ್ನ ಕೋಣೆಗೆ ಬಂದ. ಅಲ್ಲಿ ಮತ್ತೆ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಮುಂದುವರಿದು ಜೀವ ಬೆದರಿಕೆಯನ್ನೂ ಹಾಕಿದ್ದಾನೆ” ಎಂದು ಶರ್ಲಿನ್ ಚೋಪ್ರಾ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಸುನೀಲ್ ಪರಸ್ಮಾನಿ ಲೋಧಾ ವಿರುದ್ಧ ಜುಹು ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
