Actress Tanisha kuppanda: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಸೆಲೆಬ್ರಿಟಿಗಳ ಬಗ್ಗೆ ಏನಾದರೊಂದು ವಿಚಾರಗಳು ಇದ್ದೇ ಇರುತ್ತದೆ. ಸದ್ಯ ಕೆಲ ದಿನಗಳಿಂದ ನಿರಂತರ ಸುದ್ದಿಯಲ್ಲಿರುವ ವಿಚಾರವೆಂದರೆ ನಟಿ ತನಿಷಾ ಕುಪ್ಪಂಡ (Actress Tanisha kuppanda) ಹಾಗೂ ಯುಟ್ಯೂಬರ್ (youtuber) ನಡುವೆ ನಡೆದ ಮಾತಿನ ಚಕಮಕಿ. ಯುಟ್ಯೂಬರ್ ”ನೀವು ನೀಲಿ ಚಿತ್ರ (blue film) ಮಾಡ್ತೀರಾ? ”ಎಂದು ನಟಿಗೆ ಕೇಳಿದ್ದು, ನಟಿ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ವಿಚಾರ ಇದೀಗ ಇನ್ನಷ್ಟು ವಿಸ್ತಾರಗೊಂಡಿದ್ದು, ಈ ವಿಚಾರವಾಗಿ ಇದೀಗ ರಾಜಾಹುಲಿ (rajahuli) ಖ್ಯಾತಿಯ ಹರ್ಷನ (Harsha) ಹೆಸರು ಕೇಳಿಬರುತ್ತಿದೆ. ಹರ್ಷ ಕೂಡ ನೀಲಿ ಚಿತ್ರ ಮಾಡ್ತೀಯಾ ಎಂದು ತನಿಷಾಳನ್ನು ಕೇಳಿದ್ದ ಎಂಬ ಶಾಕಿಂಗ್ ವಿಚಾರವನ್ನು ನಟಿ ಬಹಿರಂಗಪಡಿಸಿದ್ದಾರೆ.
ನಟಿ ತನಿಷಾ ಕುಪ್ಪಂಡ ನಾಯಕಿಯಾಗಿ ನಟಿಸಿರುವ ಕನ್ನಡ ಚಿತ್ರ ಪೆಂಟಗನ್ (pentagan) ಶುಕ್ರವಾರ (ಏಪ್ರಿಲ್ 7 ) ಬಿಡುಗಡೆಯಾಗುತ್ತಿದ್ದು, ನಟಿ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾಗೇ ಈ ವೇಳೆ ಯುಟ್ಯೂಬ್ ಸಂದರ್ಶನದಲ್ಲಿ ನಟಿ ತನಿಷಾ ಕುಪ್ಪಂಡ ಭಾಗವಹಿಸಿದ್ದು, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿರುವ ನಟಿ, ಚಿತ್ರದ ಒಂದು ಹಾಡಿನಲ್ಲಿ ಬ್ಯಾಕ್‌ಲೆಸ್ ಪೋಸ್ ಕೊಟ್ಟು ನಟಿಸಿದ್ದು, ಸಿನಿರಸಿಕರ ನಿದ್ದೆ ಕೆಡಿಸಿದ್ದಾರೆ. ಈ ವಿಚಾರವಾಗಿ ಯುಟ್ಯೂಬರ್ ಮಾತನಾಡಿದ್ದು, ಮಾತು ಮಿತಿ ಮೀರಿ, “ನೀವು ನೀಲಿ ಚಿತ್ರ ಮಾಡ್ತೀರಾ” ಎಂದು ಕೇಳೇ ಬಿಟ್ಟ ಯುಟ್ಯೂಬರ್. ಈತನ ಮಾತಿಗೆ ಸಿಟ್ಟಿಗೆದ್ದ ನಟಿ ಅಲ್ಲೇ ಜಗಳ ಶುರು ಮಾಡಿದ್ದು, ಸಂದರ್ಶನದಲ್ಲಿ ಭಾಗವಹಿಸಿದ್ದ ಚಿತ್ರದ ಇತರೆ ಸದಸ್ಯರೂ ಕೂಡ ಸಿಟ್ಟಿಗೆದ್ದು, ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಈ ವಿವಾದವಾದ ಬಳಿಕ ನಟಿ ತನಿಷಾ ಕುಪ್ಪಂಡ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾರೆ. ಯುಟ್ಯೂಬರ್ ಮಾತ್ರವಲ್ಲದೆ, ಕನ್ನಡ ಚಿತ್ರರಂಗದ (kannada film industry) ನಟ ಸಹ ತನ್ನನ್ನು ನೀಲಿ ಚಿತ್ರದಲ್ಲಿ ನಟಿಸ್ತೀಯಾ ಎಂದು ಕೇಳಿದ್ದ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಯುಟ್ಯೂಬರ್ ಕೇಳಿದ ಪ್ರಶ್ನೆಗೆ ನಟಿ ಸಿಟ್ಟು, ಬೇಸರಗೊಂಡಿದ್ದು, ಈ ವಿಚಾರವಾಗಿ ಸ್ನೇಹಿತರು, ಹಿತೈಷಿಗಳು ಮೆಸೇಜ್ ಮಾಡಿ ಸಮಾಧಾನ ಹೇಳಿ, ಧೈರ್ಯ ತುಂಬಿದರೇ, ಇನ್ನೂ ಕೆಲವರು ಇದ್ದಾರೆ ಸರ್, ಹೇಳಿಕೊಳ್ಳುವುದಕ್ಕೆ ಕಲಾವಿದರು. ವಿಚಿತ್ರವಾಗಿ ಮೆಸೇಜ್ ಮಾಡ್ತಾರೆ ಎಂದು ಬೇಸರದಿಂದ ಕಣ್ಣೀರಿಡುತ್ತಾ ತಮಗಾದ ಅನುಭವವನ್ನು ಹೇಳಿಕೊಂಡರು. “ ಆತ ಖ್ಯಾತ ಕಲಾವಿದ ಅಷ್ಟೇ ಅಲ್ಲ ನನ್ನ ಸ್ನೇಹಿತನೂ ಹೌದು. ಆದರೆ, ಆತನ ಹೆಸರು ಹೇಳುವುದಿಲ್ಲ ಎಂದು ನಟಿ ಹೇಳಿದ್ದು, ಗುರು ದೇಶಪಾಂಡೆ ಸರ್ ಬ್ಯಾನರ್‌ನಲ್ಲಿ ಕೂಡ ಆತ ಕೆಲಸ ಮಾಡಿದ್ದಾನೆ. ಆ ವ್ಯಕ್ತಿ ನಾನು ಹಾಕಿದ್ದ ಸ್ಟೇಟಸ್‌ಗೆ ನ್ಯೂಡ್ ಫಿಲ್ಮ್ಸ್ ಮಾಡ್ತೀಯಾ ಅಂತ ಹೇಳಿ ಸ್ಮೈಲ್ ಇಮೋಜಿ ಹಾಕಿ ರಿಪ್ಲೇ ಮಾಡಿದ್ದಾನೆ ಎಂಬ ವಿಚಾರ ನಟಿ ತಿಳಿಸಿದ್ದಾರೆ.
ಇಷ್ಟೆಲ್ಲಾ ಹೇಳಿದ ಮೇಲೆ ನಟಿಗೆ ಆತನ ಹೆಸರೇನು ಹೇಳಿ ಎಂಬ ಒತ್ತಡ ಹೆಚ್ಚಾಗಿದ್ದು, ಕೊನೆಗೆ ನಟಿ ಆತನ ಹೆಸರು ಹೇಳಿದರು. “ಸರ್ ನನಗೆ ನಿಜಕ್ಕೂ ತುಂಬಾ ಬೇಸರವಾಯಿತು. ಏಕೆಂದರೆ ಹೊರಗಿನವರು ಮಾತಾಡಿದ್ರೆ ಕಂಟ್ರೋಲ್ ಮಾಡ್ಕೊಬಹುದು. ನಮ್ಮ ಮನೆಯವರು, ಫ್ರೆಂಡ್ಸ್ ಆದವರು ಮಾತನಾಡಿದ್ರೆ ನಿಜವಾಗಲೂ ನೋವಾಗುತ್ತೆ. ಅವನ ಹೆಸರು ಹರ್ಷ. ಅವನ್ಯಾರೋ ಪ್ರಜ್ಞೆಯಿಲ್ಲದೇ ಮಾತನಾಡಿದ ಅಂದ್ರೆ ಫ್ರೆಂಡ್ಸ್ ಆದ ಇವರು ಈ ರೀತಿ ಮೆಸೇಜ್ ಮಾಡ್ತಾರೆ. ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಾ ಇದೆ ಎಂಬ ಐಡಿಯಾ ಕೂಡ ಇಲ್ಲದೇ ಸ್ಮೈಲಿ ಎಮೋಜಿ ಹಾಕಿ ಮೆಸೇಜ್ ಕಳಿಸ್ತಾರೆ” ಎಂದು ತನಿಷಾ ಕಣ್ಣೀರು ಹಾಕುತ್ತಲೇ ಹೇಳಿದರು.
“ಅವರೂ ಸಹ ಒಬ್ಬ ಕಲಾವಿದನಾಗಿ ಅವರ ಹೆಂಡತಿಗೆ ಅಥವಾ ಅಕ್ಕನಿಗೆ ಯಾರಾದ್ರೂ ಇದೇ ರೀತಿ ಕೇಳಿದ್ರೆ, ನಗ್ತಾರಾ ಸರ್. ನಾನು ಅವರ ರಿಯ್ಯಕ್ಷನ್ ಗೆ, ನಿಮ್ಮ ಕಾಮನ್ ಸೆನ್ಸ್ ಸತ್ತೋಗಿದೆಯಾ ಅಂತ ವಾಪಸ್ ಕೇಳಿದೆ. ಅದಕ್ಕೆ ಅವರು ಇಲ್ಲ ನಾನು ಆ ರೀತಿ ಕೇಳ್ತಿಲ್ಲ, ಆ ರೀತಿ ಪ್ರಶ್ನೆ ಕೇಳಿದ್ನಲ್ಲಾ ಅಂತ ನಗ್ತೀದ್ದೀನಿ ಎಂದರು. ನೀವು ಸೈಕೋನ, ನನಗೆ ಅರ್ಥವಾಗುತ್ತಿಲ್ವ ನಿಜವಾಗಲೂ ಅರ್ಥವಾಗ್ತಿಲ್ಲ” ಎಂದು ಹೇಳಿಕೊಂಡರು. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
