Home » Ada Sharma: ಈ ಸಿನಿಮಾ ನೋಡಲು ಹೋಗುವಾಗ ಡೈಪರ್ ಧರಿಸಿ ಎಂದ ಅದಾ ಶರ್ಮಾ! ನಟಿ ಹೀಗೆ ಸಲಹೆ ಕೊಟ್ಟಿದ್ದೇಕೆ?.. ಯಾವುದಾ ಸಿನಿಮಾ?

Ada Sharma: ಈ ಸಿನಿಮಾ ನೋಡಲು ಹೋಗುವಾಗ ಡೈಪರ್ ಧರಿಸಿ ಎಂದ ಅದಾ ಶರ್ಮಾ! ನಟಿ ಹೀಗೆ ಸಲಹೆ ಕೊಟ್ಟಿದ್ದೇಕೆ?.. ಯಾವುದಾ ಸಿನಿಮಾ?

by Mallika
0 comments
Ada Sharma

Ada Sharma: 2008 ರಲ್ಲಿ ‘1920’ ಎಂಬ ಹಾರರ್(Horror) ಚಿತ್ರದೊಂದಿಗೆ ಬಾಲಿವುಡ್​(Bollywood) ಗೆ ಎಂಟ್ರಿ ಕೊಟ್ಟ ಅದಾ ಶರ್ಮಾ(Ada Sharma) ಇದೀಗ “ದಿ ಕೇರಳ ಸ್ಟೋರಿ” (The Kerala Story) ಯಲ್ಲಿ ತಾವು ಅಭಿನಯಿಸಿರೋ ಪಾತ್ರಕ್ಕಾಗಿ ಎಲ್ಲೆಡೆ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಆದರೆ ಅದಾ ಅಭಿನಯದ ಮೊದಲ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಬಿಡುಗಡೆಗೂ ಮುನ್ನವೇ ನಟಿ ಪ್ರೇಕ್ಷಕರಿಗೆ ವಿಚಿತ್ರ ಸಲಹೆಯೊಂದನ್ನು ನೀಡಿ ಎಲ್ಲೆಡೆ ಸುದ್ದಿಯಾಗಿದ್ರು.

ದೇಶಾದ್ಯಂತ ವಿವಾದ ಸೃಷ್ಟಿಸಿರೋ “ದಿ ಕೇರಳ ಸ್ಟೋರಿ” ಸಿನಿಮಾ ಇದೀಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರ ವಾಗುತ್ತಿದೆ. ಅಲ್ಲದೆ ಮುಖ್ಯ ಪಾತ್ರದಲ್ಲಿ ಮಿಂಚಿರೋ ಅದಾ ಶರ್ಮಾ ಅಭಿನಯವನ್ನು ಪ್ರೇಕ್ಷಕರು, ದೇಶ-ವಿದೇಶಗಳಲ್ಲಿನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಈ ನಡುವೆ ಆದಾ ಶರ್ಮಾ ಹಳೇ ಸ್ಟೇಟ್​ಮೆಂಟ್ ಒಂದು ವೈರಲ್ ಆಗಿದೆ.

ಹೌದು, ‘1920’ ಎಂಬ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಅದಾ ಅವರು ಆಗಲೇ ತಮ್ಮ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ತಮ್ಮ ಈ ಮೊದಲ ಮೊದಲ ಸಿನಿಮಾ ರಿಲೀಸ್​ಗೂ ಮುನ್ನ ನಟಿ ಅದಾ ಶರ್ಮಾ ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗಿದೆ. ಸಿನಿಮಾ ರಿಲೀಸ್​ಗೂ ಮುನ್ನ ಸಂದರ್ಶನದಲ್ಲಿ ಮಾತಾಡಿದ್ದ ನಟಿ ಅದಾ, ಸಿನಿಮಾ ನೋಡಲು ಬರುವಾಗ ಡೈಪರ್(Diaper) ಧರಿಸುವಂತೆ ಸಲಹೆ ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

ಫಿಲ್ಮಿ ಬೀಟ್​(Filmi Beat) ನೀಡಿದ ಸಂದರ್ಶನದಲ್ಲಿ ಮಾತಾಡಿದ ಅದಾ ಶರ್ಮಾ, ನಾನು ವಿಭಿನ್ನವಾಗಿ ಈ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ನೋಡಲು ಹೋಗುವ ವೀಕ್ಷಕರು ಡೈಪರ್ ಧರಿಸಬೇಕು ಎಂದು ನಾನು ನಿಮಗೆ ಎಚ್ಚರಿಸುತ್ತೇನೆ ಎಂದು ಅದಾ ಶರ್ಮಾ ಹೇಳಿದ್ರು. ಏಕೆಂದರೆ ಈ ಸಿನಿಮಾ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಎಂದಿದ್ರು.

ಅಲ್ಲದೆ ಇದೇ ವೇಳೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದ ಅದಾ ಶರ್ಮಾ ಈ ಪಾತ್ರ ಬಹಳ ವಿಭಿನ್ನತೆಯಿಂದ ಕೂಡಿತ್ತು, ಇದುವರೆಗೂ ಯಾವುದೇ ಹಿಂದಿ ಚಿತ್ರದಲ್ಲಿ ಯಾರೂ ನಟಿಸಿಲ್ಲ. ಹಾಗೂ ನಟ-ನಟಿಯರು ಯಾವಾಗೂ ಒಂದೇ ಶೈಲಿಯಲ್ಲಿ ಸಿನಿಮಾ ಮಾಡಬಾರದು. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಬಗ್ಗೆ ನಟಿ ಮಾತನಾಡಿದ್ರು. ಹೀಗಾಗಿ ಹಾರರ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದರು.

ಅಂದಹಾಗೆ ಇದೀಗ ಅದಾ ಅಭಿನಯದ ‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿತ್ತು. ಆದರೆ ಈ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ನಟಿ ಅದಾ ಶರ್ಮಾಗೂ ಕೂಡ ಈ ಸಿನಿಮಾ ಮೂಲಕ ಒಳ್ಳೆಯ ಜನಪ್ರಿಯತೆ ಸಿಕ್ಕಿದೆ.

 

ಇದನ್ನು ಓದಿ: Rolex watch: 1964ರಲ್ಲಿ 7 ಸಾವಿರ ರೂ.ಗೆ ಖರೀದಿಸಿದ್ದ ವಾಚ್ ಈಗ ಎಷ್ಟು ಬೆಲೆಗೆ ಸೇಲಾಯ್ತು ಗೊತ್ತಾ? ರೊಲೆಕ್ಸ್ ವಾಚ್ ಸೇಲಾದ ಮೊತ್ತ ಕೇಳಿದ್ರೆ ಆಶ್ಚರ್ಯ ಪಡ್ತೀರಾ?!! 

You may also like

Leave a Comment