Viral Video : ಕಳೆದ ಕೆಲವು ದಿನಗಳಿಂದ ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಸಮರ ನಡೆಯುತ್ತಿದೆ. ಈ ವಿಚಾರಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಈಗ ಕೊಂಚ ತಣ್ಣಗಾಗಿದೆ. ಆದರೆ ಇದೀಗ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ಅವರು ಈ ಎಲ್ಲಾ ವಿಚಾರಕ್ಕೆ ತುಪ್ಪ ಸುರಿಯುವಂತೆ ನಾಲಗೆ ಹರಿ ಬಿಟ್ಟಿದ್ದಾರೆ.
ಹೌದು, ಮಾಜಿ ಬಿಗ್‌ಬಾಸ್ ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ- ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡುವ ವೇಳೆ ಹಾಡಿರುವ ಮಾತು ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಅಷ್ಟು ಮಾತ್ರವಲ್ಲ ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಧ್ಯ ವೀಡಿಯೋ ಇದೀಗ ಚರ್ಚೆ ಹುಟ್ಟಾಕ್ಕಿದೆ.
ವೈರಲ್ ಆದ ವಿಡಿಯೋದಲ್ಲಿ ಮೀತಾ ಕ್ರಿಸ್ಟಲ್ ಸಂಖ್ಯಾಶಾಸ್ತ್ರಜ್ಞೆ ಜೊತೆ ಸೇರಿ ಸಂಖ್ಯಾಶಾಸ್ತ್ರ, ಜೋತಿಷಯ ಶಾಸ್ತ್ರದ ಬಗ್ಗೆ ಮಾಹಿತಿ ನೀಡುವಾಗ ಆರ್ಯವರ್ಧನ್ ಗುರೂಜಿ ಈ ರೀತಿ ಮಾತನಾಡಿದ್ದಾರೆ. 2026ನೇ ಸಾಲಿನಲ್ಲಿ ಯಾವ ರಾಶಿಯವರ ಭವಿಷ್ಯ ಏನು ಎಂದು ಮಾತನಾಡಿದ್ದಾರೆ. ಸುದೀಪ್ ಅವರ ಮುಂದಿನ ಸಿನಿಮಾ ಸೂಪರ್ ಹಿಟ್ ಆಗುತ್ತಾ ಎಂದು ಎಂದು ಕೇಳಿದ್ದಾರೆ. ಬಳಿಕ ಹೀಗೆ ಮಾತು ಮುಂದುವರೆದಿದೆ. ಬಳಿಕ ಆರ್ಯವರ್ಧನ್ ಗುರೂಜಿ ಅವರು “ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ.. ಮೊನ್ನೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಿದ್ರು. ನಾನೇ ನೋಡಿದ್ದೀನಿ” ಎಂದಿರುವ ವೀಡಿಯೋ ವೈರಲ್ ಆಗ್ತಿದೆ.
Viral Video : ‘ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ, ಮೊನ್ನೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂದಿದ್ರು’- ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ಹೇಳಿಕೆ
