Home » Salman Khan-Aishwarya Rai: ಸಲ್ಲು ವಿರುದ್ಧ ಐಶ್ವರ್ಯಾ ರೈ ಹಲ್ಲೆ ಆರೋಪ ; ಸಲ್ಮಾನ್ ಖಾನ್ ಪ್ರತಿಕ್ರಿಯೆ ಏನು?

Salman Khan-Aishwarya Rai: ಸಲ್ಲು ವಿರುದ್ಧ ಐಶ್ವರ್ಯಾ ರೈ ಹಲ್ಲೆ ಆರೋಪ ; ಸಲ್ಮಾನ್ ಖಾನ್ ಪ್ರತಿಕ್ರಿಯೆ ಏನು?

1 comment
Salman Khan- Aishwarya Rai

Salman Khan- Aishwarya Rai: 90ರ ದಶಕದಲ್ಲಿ ಬಾಲಿವುಡ್ ನಲ್ಲಿ (Bollywood) ಭಾರೀ ಸದ್ಧು ಮಾಡಿದ್ದ ಪ್ರೇಮಿಗಳ ಜೋಡಿ ಅಂದ್ರೆ ಅದು ಸಲ್ಮಾನ್‌ ಖಾನ್‌ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರದ್ದು. ಹೌದು, ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತೆಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಅದೇ ಸಮಯದಲ್ಲಿ ಅವರ ಸಂಬಂಧ ಬ್ರೇಕಪ್‌ ಆಗಿ, ಹೆಚ್ಚು ಚರ್ಚೆಯಾಗಿತ್ತು. ಇದೀಗ ಮತ್ತೆ ಇವರಿಬ್ಬರ ಹಿಂದಿನ ಪ್ರೇಮಕಾವ್ಯ ತುಣುಕುಗಳು ವೈರಲ್ ಆಗುತ್ತಲೇ ಇವೆ. ಈ ಐಶ್ವರ್ಯಾ ರೈ ಖಾನ್ ಬಗ್ಗೆ ಹೇಳಿದ್ದ ಮಾತುಗಳು ವೈರಲ್ ಆಗಿತ್ತು. ಈ ಬಾರಿ ಐಶ್ವರ್ಯಾ ರೈ ಹಲ್ಲೆ ಆರೋಪಕ್ಕೆ ಸಲ್ಮಾನ್ ಖಾನ್ (Salman Khan- Aishwarya Rai) ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.

ಇವರಿಬ್ಬರು ಸಂಬಂಧ ಹೊಂದಿದ್ದ ಸಂದರ್ಭದಲ್ಲಿ ಸಲ್ಮಾನ್ ಖಾನ್
ಐಶ್ವರ್ಯಾ ಮೇಲೆ ಹಲ್ಲೆ ನಡೆಸಿದ್ದರಂತೆ ಹಾಗಂತ ಐಶ್ವರ್ಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಐಶ್ವರ್ಯಾ ರೈ 2002 ರಲ್ಲಿ ಸಂದರ್ಶನದಲ್ಲಿ “ನಾನು ಸಲ್ಮಾನ್ ಖಾನ್ ಅವರ ಮದ್ಯದ ಚಟ, ಅವರ ನಿಂದನೆಯಿಂದ ಬೇಸತ್ತಿದ್ದೇನೆ. ಇದರ ಹೊರತಾಗಿಯೂ, ನಾನು ಅವನ ಬೆಂಬಲಕ್ಕೆ ನಿಂತಿದ್ದೆ. ಪ್ರತಿಯಾಗಿ ನನಗೆ ಸಿಕ್ಕಿದ್ದು ಅವನ ನಿಂದನೆ, ದ್ರೋಹ ಮತ್ತು ಅವಮಾನ. ನಾನು ಅವನ ಮತ್ತು ಅವನ ತಪ್ಪುಗಳ ಬಗ್ಗೆ ಮೌನವಾಗಿದ್ದರೂ, ಅವರ ಕುಟುಂಬ ಮತ್ತು ಸ್ನೇಹಿತರು ಬೇಜವಾಬ್ದಾರಿ ವದಂತಿಗಳನ್ನು ಹರಡುವ ಮೂಲಕ ನನ್ನ ಮತ್ತು ನನ್ನ ಕುಟುಂಬದ ಗೌರವ, ಘನತೆಗೆ
ಪದೇ ಪದೇ ದಾಳಿ ಮಾಡಿದ್ದಾರೆ” ಎಂದಿದ್ದರು.

ಈ ಬಗ್ಗೆ ಸಲ್ಮಾನ್ ಖಾನ್ ಆಕೆಯ ಹೆಸರು ಹೇಳದೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು. ಹೌದು, ಹಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಸಂದರ್ಶನದಲ್ಲಿ“ ಈಗ ನಾನೇನು ಹೇಳಬೇಕು. ಮಹಿಳೆ ಹೇಳಿದ್ದಾರೆ. ನನಗೆ ಕೋಪ ಬಂದು ನಾನು ಅವಳನ್ನು ಹೊಡೆದಿದ್ದರೆ, ಅವಳು ಅದರಿಂದ ತಪ್ಪಿಸಿಕೊಳ್ಳುತ್ತಿದ್ದಳು ಎಂದು ನಾನು ಭಾವಿಸುವುದಿಲ್ಲ” ಎಂದು ಹೇಳಿದ್ದರು. ಸದ್ಯ ಈ ಹೇಳಿಕೆ ವೈರಲ್ ಆಗುತ್ತಿದೆ.

1999ರಲ್ಲಿ ತೆರೆಕಂಡ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಚಿತ್ರದಲ್ಲಿ ಮೊದಲ ಬಾರಿಗೆ ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ ಜೊತೆಯಾಗಿ ನಟಿಸಿದರು. ಬಣ್ಣದ ಲೋಕದಲ್ಲಿ ಐಶ್‌ ಆಗತಾನೇ ಪಯಣ ಆರಂಭಿಸಿದ್ದರು. ಅಷ್ಟರಲ್ಲಾಗಲೇ ಸಲ್ಮಾನ್‌ ಚಿತ್ರರಂಗಕ್ಕೆ ಕಾಲಿಟ್ಟ 10 ವರ್ಷ ಕಳೆದಿತ್ತು. ಅವರಿಗೆ ಸ್ಟಾರ್‌ ಪಟ್ಟವೂ ಸಿಕ್ಕಿತ್ತು. ಇಬ್ಬರ ನಡುವೆ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಶೂಟಿಂಗ್‌ ಸಮಯದಲ್ಲೇ ಆಪ್ತತೆ ಬೆಳೆಯಿತು. ಪ್ರೀತಿಯೂ ಆಯಿತು. ಆದರೆ ನಂತರ ಅದು ಕಳಚಿಕೊಂಡಿತು. ಇದೀಗ ಐಶ್ವರ್ಯ ಬಚ್ಚನ್ ಫ್ಯಾಮಿಲಿ ಸೊಸೆಯಾಗಿದ್ದಾರೆ.

 

ಇದನ್ನು ಓದಿ: Bajarang Dal: ಕಾಂಗ್ರೆಸ್ ವಿರುದ್ಧ ಭಜರಂಗದಳ ಚಾಲೆಂಜ್! ಮೇ 4ರಂದು ರಾಜ್ಯದಾದ್ಯಂತ ಹನುಮಾನ್ ಚಾಲಿಸಾ ಪಠಣ! 

You may also like

Leave a Comment