Home » Aishwarya Rai- Abhishek Bachchan: ಐಶ್ವರ್ಯಳ ಮಾಜಿ ಪ್ರಿಯತಮನ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ! ಗಂಡನ ಮಾತಿಗೆ ವಿಶ್ವಸುಂದರಿ ಮಾಡಿದ್ದೇನು?

Aishwarya Rai- Abhishek Bachchan: ಐಶ್ವರ್ಯಳ ಮಾಜಿ ಪ್ರಿಯತಮನ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ! ಗಂಡನ ಮಾತಿಗೆ ವಿಶ್ವಸುಂದರಿ ಮಾಡಿದ್ದೇನು?

0 comments
Aishwarya Rai- Abhishek Bachchan

Aishwarya Rai- Abhishek Bachchan: ನಟಿ ಐಶ್ವರ್ಯ ಹಾಗೂ ಸಲ್ಮಾನ್‌ ಖಾನ್‌ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿದೆ. 90ರ ದಶಕದಲ್ಲಿ ಬಾಲಿವುಡ್ ನಲ್ಲಿ (Bollywood) ಭಾರೀ ಸದ್ಧು ಮಾಡಿದ್ದ ಪ್ರೇಮಿಗಳ ಜೋಡಿ ಅಂದ್ರೆ ಅದು ಸಲ್ಮಾನ್‌ ಖಾನ್‌ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರದ್ದು. ಹೌದು, ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತೆಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಅದೇ ಸಮಯದಲ್ಲಿ ಅವರ ಸಂಬಂಧ ಬ್ರೇಕಪ್‌ ಆಗಿ, ಹೆಚ್ಚು ಚರ್ಚೆಯಾಗಿತ್ತು. ಇದೀಗ ಐಶ್ವರ್ಯಳ ಮಾಜಿ ಪ್ರಿಯತಮನ ಬಗ್ಗೆ ಅಭಿಷೇಕ್ ಬಚ್ಚನ್ (Aishwarya Rai- Abhishek Bachchan) ಮೌನ ಮುರಿದಿದ್ದಾರೆ. ಏನಂದ್ರು ಅಭಿಷೇಕ್ ಬಚ್ಚನ್ ? ಗಂಡನ ಮಾತಿಗೆ ವಿಶ್ವಸುಂದರಿ ಮಾಡಿದ್ದೇನು ಗೊತ್ತಾ?

 

ಸದ್ಯ ಐಶ್ವರ್ಯಾ ರೈ ಬಚ್ಚನ್ ಫ್ಯಾಮಿಲಿಯ ಸೊಸೆ. ಐಶ್ವರ್ಯಾ ರೈ ಅವರು, ಪತಿ ಅಭಿಷೇಕ್ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಡೆಸುತ್ತಿದ್ದಾರೆ. ಆದರೂ ಐಶ್ವರ್ಯಾ ರೈ ಹಿಂದಿನ ಪ್ರೇಮಪುಟಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ.

 

ಹೌದು, ಇದೀಗ ಐಶ್ ಪ್ರೀತಿಯ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ. ಕಾಫಿ ವಿತ್​ ಕರಣ್​ ಕಾರ್ಯಕ್ರಮಕ್ಕೆ ಐಶ್ವರ್ಯ ಮತ್ತು ಅಭಿಷೇಕ್​ ಬಚ್ಚನ್​ ಅವರು ಬಂದಿದ್ದರು. ಹಲವು ವಿಚಾರಗಳ ಬಗ್ಗೆ ಮಾತನಾಡಿದ ಕರಣ್ (Karan Johr) ಈ ವೇಳೆ ಕೆಲವೊಂದು ನಟರ ಬಗ್ಗೆ ಅಭಿಷೇಕ್​ ಅವರಲ್ಲಿ ​ಕೇಳಿದ್ದಾರೆ. ಜೊತೆಗೆ ಸಲ್ಮಾನ್​ ಖಾನ್​ ಬಗ್ಗೆಯೂ ಕೇಳಿದ್ದಾರೆ. ಸಲ್ಮಾನ್​ ಖಾನ್​ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್​, ಕೂಡಲೇ ವರ್ಕೌಟ್ ಮಾಡುವುದನ್ನು ನಿಲ್ಲಿಸಿ ಎಂದು ಹೇಳುತ್ತೇನೆ ಎಂದಿದ್ದಾರೆ.

 

ಉತ್ತರಕ್ಕೆ ಕಾರಣವೂ ನೀಡಿದ್ದಾರೆ, ಸಲ್ಮಾನ್​ ಖಾನ್​ ಶರ್ಟ್ ತೆಗೆಯಲು ಹೆಸರುವಾಸಿಯಾಗಿದ್ದಾರೆ. ಆದರೆ ಅವರು ಅಷ್ಟಕ್ಕೇ ಸೀಮಿತವಲ್ಲ. ಅದಕ್ಕಿಂತ ಹೆಚ್ಚು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಅಂದಹಾಗೆ, ಕರಣ್ ಪತಿಗೆ ಪ್ರಶ್ನೆ ಕೇಳುವಾಗ ಐಶ್ವರ್ಯ ರೈ ಕೂಡ ಪತಿ ಅಭಿಷೇಕ್​ ಜೊತೆಗೆ ಉತ್ತರಿಸುತ್ತಿದ್ದರು. ಆದರೆ,

ಸಲ್ಮಾನ್​ ಹೆಸರು ಕೇಳುತ್ತಲೇ ಐಶ್ವರ್ಯ ಮೌನವಾದರು. ಅಷ್ಟೇ ಅಲ್ಲ, ಅವರ ಮುಖದಲ್ಲಿ ವಿಚಿತ್ರ ಎಕ್ಸ್​ಪ್ರೆಷನ್​ನನ್ನು ಕೂಡ ಮೂಡಿದೆ. ಅವರಿಗೆ ಮುಜುಗರವಾದಂತೆ ಭಾಸವಾಯಿತು. ಸದ್ಯ ಈ ವಿಚಾರ ಸಖತ್ ವೈರಲ್ ಆಗಿದೆ.

 

ಇದನ್ನೂ ಓದಿ : ರಾತ್ರೋರಾತ್ರಿ ವರ್ಗಾವಣೆಯಾದ 8 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ

You may also like

Leave a Comment