Home » Akshay Kumar- Raveena Tandon: ನಿಶ್ಚಿತಾರ್ಥ ಮುರಿದ 20 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಅಕ್ಷಯ್ ಕುಮಾರ್ – ರವೀನಾ ಟಂಡನ್ ; ವೈರಲ್ ಆಯ್ತು ವಿಡಿಯೋ!!

Akshay Kumar- Raveena Tandon: ನಿಶ್ಚಿತಾರ್ಥ ಮುರಿದ 20 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಅಕ್ಷಯ್ ಕುಮಾರ್ – ರವೀನಾ ಟಂಡನ್ ; ವೈರಲ್ ಆಯ್ತು ವಿಡಿಯೋ!!

0 comments
Akshay Kumar- Raveena Tandon

Akshay Kumar- Raveena Tandon: ಕಳೆದ 20 ವರ್ಷಗಳ ನಂತರ ಇದೀಗ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಕೆ.ಜಿ.ಎಫ್ (KGF) ನಟಿ ರವೀನಾ ಟಂಡನ್ (Raveena Tandon) ಒಟ್ಟಿಗೆ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಎರಡು ದಶಕಗಳ ಹಿಂದೆ ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದರು. ಆನಂತರ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ, ಕಳೆದ ಭಾನುವಾರ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ (fashion event) ಒಂದೇ ವೇದಿಕೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಆಶ್ಚರ್ಯದ ಜೊತೆಗೆ ಸಂತಸ ಉಂಟಾಗಿದೆ.

ಭಾನುವಾರ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದು, ಇಲ್ಲಿಗೆ ರವೀನಾ ಟಂಡನ್ (Akshay Kumar- Raveena Tandon) ಕೂಡ ಆಗಮಿಸಿದ್ದರು. ಇಬ್ಬರೂ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ರವೀನಾ ಟಂಡನ್, ಅಕ್ಷಯ್ ಕುಮಾರ್‌ಗೆ ಪ್ರಶಸ್ತಿಯನ್ನು ಘೋಷಿಸಿ, ನೀಡಿದರು. ನಂತರ ಇಬ್ಬರೂ ಒಟ್ಟಿಗೆ ಕುಳಿತು ಮಾತಿನಲ್ಲಿ ತೊಡಗಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋ ವೀಕ್ಷಿಸಿದ ನೆಟ್ಟಿಗರು ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ.
ಈ ಜೋಡಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದು, ಅಭಿಮಾನಿಯೊಬ್ಬರು, “ಬಹಳ ಸಮಯದ ನಂತರ, ನಾನು ನನ್ನ ಸಾರ್ವಕಾಲಿಕ ನೆಚ್ಚಿನ ಜೋಡಿಯನ್ನು ಒಟ್ಟಿಗೆ ನೋಡುತ್ತಿದ್ದೇನೆ. ಅವರನ್ನು ಚಲನಚಿತ್ರದಲ್ಲಿ ಒಟ್ಟಿಗೆ ನೋಡುವ ನಿರೀಕ್ಷೆ ಇದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ನೆಟ್ಟಿಗ, “ಇದು ಪರಿಪೂರ್ಣ ಚಿತ್ರ” ಎಂದು ಕಾಮೆಂಟ್ ಮಾಡಿದ್ದಾರೆ.

ಅಕ್ಷಯ್ ಮತ್ತು ರವೀನಾ ಅವರ ಪ್ರೇಮಕಥೆಯು 1994 ರಲ್ಲಿ ‘ಮೊಹ್ರಾ’ ಸಿನಿಮಾ ಸಮಯದಲ್ಲಿ ಪ್ರಾರಂಭವಾಯಿತು. 90 ರ ದಶಕದಲ್ಲಿ ಇವರಿಬ್ಬರ ತೆರೆಮೇಲಿನ ಕೆಮಿಸ್ಟ್ರಿ ಸಖತ್ ಸದ್ದು ಮಾಡಿತ್ತು. ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 1995ರ ನಂತರದಲ್ಲಿ ನಟಿ ರವೀನಾ ಟಂಡನ್ ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಆಗಿತ್ತು. ಇನ್ನೇನು ಇವರಿಬ್ಬರು ಮದುವೆಯಾಗ್ತಾರೆ ಎಂದುಕೊಳ್ಳುವಾಗ ನಿಶ್ಚಿತಾರ್ಥ ಮುರಿದು ಬಿತ್ತು.
ಇವರಿಬ್ಬರು ಬೇರೆ ಬೇರೆ ಸಂಗಾತಿಯನ್ನು ಹುಡುಕಿಕೊಂಡು, ಮದುವೆಯಾಗಿ ಖುಷಿಯಾಗಿದ್ದಾರೆ.

ಇದನ್ನೂ ಓದಿ: KCET 2023 Admit Card : ಕರ್ನಾಟಕ ಸಿಇಟಿ ಪ್ರವೇಶ ಪತ್ರ ಬಿಡುಗಡೆ; ಪರೀಕ್ಷೆ ಯಾವಾಗ ಆರಂಭ? ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ

 

You may also like

Leave a Comment