Home » ಜನಪ್ರಿಯ “ಮಹಾಭಾರತ” ಸೀರಿಯಲ್ ನ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ನಿಧನ

ಜನಪ್ರಿಯ “ಮಹಾಭಾರತ” ಸೀರಿಯಲ್ ನ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ನಿಧನ

1 comment

ನವದೆಹಲಿ : ಬಿ ಆರ್ ಚೋಪ್ರಾ ಅವರ ಮಹಾಭಾರತ ಸೀರಿಯಲ್ ನ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದ ಎದೆನೋವಿನ ಸೋಂಕಿನಿಂದ ಬಳಲುತ್ತಿದ್ದ ಅವರು ಇಂದು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ‌.

ಇವರು ನಟ ಮಾತ್ರವಲ್ಲದೇ ಅಥ್ಲೀಟ್ ಕೂಡಾ ಆಗಿದ್ದಾರೆ. ಹ್ಯಾಮರ್ ಮತ್ತು ಡಿಸ್ಕ್ ಸ್ ಥ್ರೋ ನಲ್ಲಿ ಅಗ್ರಸ್ಥಾನವನ್ನು ಪಡೆದ ಆಟಗಾರರಾಗಿದ್ದಾರೆ. ಏಷ್ಯನ್ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಿದ್ದರು ಕೂಡಾ.

ಬಿಎಸ್ ಎಫ್ ನಲ್ಲಿ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸೋಬ್ತಿ ಅವರು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಹಲವಾರು ಪದಕಗಳನ್ನು ತಂದು ಕೊಟ್ಟಿದ್ದಾರೆ.

ಬಣ್ಣದ ಲೋಕಕ್ಕೆ ಬಂದ ನಂತರ ಮಹಾಭಾರತ ಸೀರಿಯಲ್ ಮಾಡುವ ಮೊದಲು 30 ಚಲನಚಿತ್ರಗಳಲ್ಲಿ ನಟನೆ ಮಾಡಿದ್ದರು. ನಂತರ ಬಿ ಆರ್ ಛೋಪ್ರಾ ಅವರನ್ನು ಭೇಟಿ ಮಾಡಿದ ಅವರು ಮಹಾಭಾರತ ಭೀಮನ ಪಾತ್ರ ದೊರಕಿತು. ಅನಂತರ ನಡೆದದ್ದು ಇತಿಹಾಸ.

2013 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಅವರು ಆಮ್ ಆದ್ಮಿ ಪಕ್ಷದ ಟಿಕೆಟ್ ನಲ್ಲಿ ದೆಹಲಿಯ ವಜೀರ್ ಪುರದಿಂದ ಸ್ಪರ್ಧಿಸಿ ಸೋಲನ್ನು ಕಂಡರು. ನಂತರ ಬಿಜೆಪಿ ಪಕ್ಷ ಸೇರಿದ್ದರು.

You may also like

Leave a Comment