Home » ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸಾಕ್ಷಿಯ ಸಾವಿನ ಹಿಂದೆ ಹಲವು ಅನುಮಾನ!! ಹೃದಯಾಘಾತ ಎಂದು ಮುಚ್ಚಿ ಹೋಗಲಿದ್ದ ಪ್ರಕರಣ-ತನಿಖೆ ಗೃಹ ಸಚಿವರ ಆದೇಶ

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸಾಕ್ಷಿಯ ಸಾವಿನ ಹಿಂದೆ ಹಲವು ಅನುಮಾನ!! ಹೃದಯಾಘಾತ ಎಂದು ಮುಚ್ಚಿ ಹೋಗಲಿದ್ದ ಪ್ರಕರಣ-ತನಿಖೆ ಗೃಹ ಸಚಿವರ ಆದೇಶ

0 comments

ಇತ್ತೀಚಿಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದ ಆರ್ಯನ್ ಖಾನ್ ನ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯೊಬ್ಬರ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿದ್ದು ಹೆಚ್ಚಿನ ತನಿಖೆಗೆ ಆಗ್ರಹವಾಗಿದೆ. ಪ್ರಕರಣದ ಸಾಕ್ಷಿ ಎನ್ನಲಾದ ಪ್ರಭಾಕರ್ ಸೇಲ್ ಎಂಬವರು ಶುಕ್ರವಾರ ತನ್ನ ನಿವಾಸದಲ್ಲಿ ಹೃದಯಾಘಾತಗೊಂಡು ಮೃತಪಟ್ಟ ಬಗ್ಗೆ ವರದಿಯಾದ ಬೆನ್ನಲ್ಲೇ ಈ ಅನುಮಾನಗಳು ವ್ಯಕ್ತವಾಗಿದೆ.

36 ವರ್ಷದ ಪ್ರಭಾಕರ್ ಅವರನ್ನು ಆರ್ಯನ್ ಬಂಧನದ ಬಳಿಕ ಎನ್ ಸಿ ಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭ ಸುಮಾರು 10 ಕ್ಕೂ ಹೆಚ್ಚು ಖಾಲಿ ಪೇಪರ್ ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ,ಅದಲ್ಲದೆ ಸುಮಾರು 25 ಕೋಟಿ ವಸೂಲಿ ಮಾಡಿದ ಬಗ್ಗೆ ಇರುವ ದೂರವಾಣಿ ಸಂಭಾಷಣೆಯನ್ನು ನಾನು ಕೇಳಿದ್ದೇನೆ ಎಂದು ಪ್ರಭಾಕರ್ ಹೇಳಿಕೊಂಡಿದ್ದರು.

ಇನ್ನು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಕಿರಣ್ ಗೋಸಾಮಿ ಎನ್ನುವವರ ಬಾಡಿ ಗಾರ್ಡ್ ಆಗಿದ್ದ ಪ್ರಭಾಕರ್,ಮುಂಬೈ ನ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆದ ಸಂದರ್ಭ ಗೋ ಸಾಮಿ 50 ಲಕ್ಷ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದರು.ಅತ್ತ ಪ್ರಭಾಕರ್ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿಲ್ಲ ಎಂದು ವಕೀಲರು ತಿಳಿಸಿದ್ದರೂ, ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಪ್ರಕಾರಣವನ್ನು ಹೆಚ್ಚಿನ ತನಿಖೆ ನಡೆಸಲು ಡಿಜಿಪಿ ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment