Akash choudary: ಜನಪ್ರಿಯ ದಾರವಾಹಿಗಳಲ್ಲಿ ಒಂದಾದ ‘ಭಾಗ್ಯಲಕ್ಷ್ಮಿ’ದಾರವಾಹಿಯ ನಟ ಆಕಾಶ್ ಚೌಧರಿ(Akash choudary) ಅವರ ಮೇಲೆ ಕೆಲವು ಯುವಕ ಅಭಿಮಾನಿಗಳು ಮುಂಬೈನಲ್ಲಿ ರಸ್ತೆಯ ನಡುವಲ್ಲೇ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಹೌದು, ನಟ ಆಕಾಶ್ ಚೌಧರಿ ಅವರು ಮುಂಬೈಗೆ ತೆರಳಿದ ಸಂದರ್ಭದಲ್ಲಿ ನಾವು ನಿಮ್ಮ ಅಭಿಮಾನಿಗಳು ಎಂದು ಹೇಳಿಕೊಂಡು ಆಕಾಶ್ ಬಳಿ ಕೆಲ ಯುವಕರು ಬಂದು ಸೆಲ್ಫಿ ಕೇಳಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಂಡ ಬಳಿಕ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಂದಹಾಗೆ ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಪಾಪರಾಜಿಗಳು ವಿಡಿಯೋವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಮೊದಲಿಗೆ ಯುವಕರು ಆಕಾಶ್ ಕಡೆಗೆ ಸೆಲ್ಫಿಗಾಗಿ ವಿನಂತಿಸುತ್ತಾರೆ. ಆಯು ವಕರ ಗುಂಪಿನೊಂದಿಗೆ ಫೋಟೋ ಮತ್ತು ಸೆಲ್ಫಿ ತೆಗೆಸಿಕೊಳ್ಳದೇ ಮುಂದಕ್ಕೆ ಹೋಗುತ್ತಾರೆ. ಇದರಿಂದ ಕೋಪಗೊಂಡ ಅಭಿಮಾನಿಗಳ ಗಂಪಿನಲ್ಲಿ ಇದ್ದವರು ಕೂಗಾಡಿ ಬಾಟಲ್ ಎಸೆಯಲು ಮುಂದಾಗುತ್ತಾರೆ. ಅಲ್ಲದೆ ಬಾಟಲಿಗಳಿಂದ ಹೊಡೆಯಲು ಪ್ರಾರಂಭಿಸುತ್ತಾರೆ. ಇದರಿಂದ ದಿಗ್ಭ್ರಮೆಗೊಂಡ ನಟ ‘ಕ್ಯಾ ಕರ್ ರಹಾ ಹೈ ಭಾಯ್? (ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ?) ಎಂದು ಕೇಳಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಇದನ್ನು ವೀಕ್ಷಿಸಿದ ಬಳಿಕ ಸೆಲೆಬ್ರಿಟಿಗಳಿಗೆ ಭದ್ರತೆ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ನೆಟಿಜನ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಈ ಹುಡುಗರಿಗೆ ಕಪಾಳಮೋಕ್ಷ ಮಾಡಬೇಕು. ನಟರ ಮೇಲೆ ಹಲ್ಲೆ ಮಾಡಲು ನಿಮಗೆ ಎಷ್ಟು ಧೈರ್ಯವಿದೆ. ಅವರಿಗೆ ಕಪಾಳಮೋಕ್ಷ ಮಾಡುವ ಮೂಲಕ ಇಂಥಹ ಎಲ್ಲರಿಗೂ ಪಾಠ ಕಲಿಸಬೇಕು ಎಂದರೆ ಮತ್ತೊಬ್ಬರು ಇವರು ಅಭಿಮಾನಿಗಳಲ್ಲ ಎಂದು ಹೇಳಿದ್ದಾರೆ.
https://www.instagram.com/reel/CxPuemdqpbi/?igshid=MTc4MmM1YmI2Ng==
