Home » Breakup: ಬಿಗ್‌ಬಾಸ್‌ ಸ್ಪರ್ಧಿ ಜಯಶ್ರೀ ಆರಾಧ್ಯ-ಸ್ಟೀವನ್‌ ಜೋಡಿ ಬ್ರೇಕಪ್‌; ಲಿವ್‌ಇನ್‌ ಜೋಡಿ ದೂರ ದೂರ

Breakup: ಬಿಗ್‌ಬಾಸ್‌ ಸ್ಪರ್ಧಿ ಜಯಶ್ರೀ ಆರಾಧ್ಯ-ಸ್ಟೀವನ್‌ ಜೋಡಿ ಬ್ರೇಕಪ್‌; ಲಿವ್‌ಇನ್‌ ಜೋಡಿ ದೂರ ದೂರ

134 comments

Breakup News: ಮದುವೆ, ಡಿವೋರ್ಸ್‌, ಬ್ರೇಕಪ್‌ ಇತ್ತೀಚೆಗೆ ಭಾರೀ ಸದ್ದು ಮಾಡುವ ಘಟನೆಗಳು. ಅದರಲ್ಲೂ ಬಿಗ್‌ಬಾಸ್‌ ಸ್ಪರ್ಧಿಯಾದ ಜಯಶ್ರೀ ಆರಾಧ್ಯ ಲವ್‌ ಬ್ರೇಕಪ್‌ ಸುದ್ದಿ ಕೇಳಿ ಬರುತ್ತಿದೆ.

ಬಿಗ್‌ಬಾಸ್‌ ಕನ್ನಡ ಒಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ ತಮ್ಮ ಬಾಯ್‌ಫ್ರೆಂಡ್‌ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ ಇವರಿದ್ದು ದಂಪತಿಗಳ ಶೋ ಆಗಿದ್ದ ರಾಜಾ ರಾಣಿ ರೀಲೋಡೆಡ್‌ ಕಾರ್ಯಕ್ರಮದಲ್ಲಿ ತಮ್ಮ ಬಾಯ್‌ಫ್ರೆಂಡ್‌ ಸ್ಟೀವನ್‌ ಜೊತೆ ಬಂದಾಗ ಎಲ್ಲರೂ ಆಶ್ಚರ್ಯಪಟ್ಟಿದ್ದರು.

ಅದೇನೇ ಇರಲಿ, ಆದರೆ ಎರಡ್ಮೂರು ವರ್ಷಗಳಿಂದ ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಈ ಜೋಡಿ ಇದೀಗ ದೂರಾಗಿದ್ದಾರೆ ಎನ್ನುವ ಸುದ್ದಿ ಸ್ಪೀಡಾಗಿ ಹರಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ಬರೂ ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದು, ಜೊತೆಗಿರುವ ಫೋಟೋಗಳನ್ನು ಕೂಡಾ ಡಿಲೀಟ್‌ ಮಾಡಿದ್ದಾರೆ.

ಮದುವೆ ಆಗದ ಈ ಜೋಡಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇವರಿಬ್ಬರು ರಾಜಾರಾಣಿ ಶೋನಲ್ಲಿ ಭಾಗವಹಿಸಿದಾಗ ಭಾರೀ ಚರ್ಚೆ ಕೂಡಾ ಆಗಿತ್ತು. ನಂತರ ಇವರಿಬ್ಬರು ನಾವಿಬ್ಬರು ಅಧಿಕೃತವಾಗಿ ಮದುವೆಯಾಗದಿದ್ದರೂ ತಾಳಿ ಕಟ್ಟಿಲ್ಲ ಅನ್ನೋದು ಬಿಟ್ಟರೆ ನಾವಿಬ್ಬರೂ ಪತಿ-ಪತ್ನಿಯಂತೆ ಇದ್ದೇವೆ ಎಂದು ಹೇಳಿಕೊಂಡಿದ್ದರು.

ಆವಾಗ ಜನರು ಇದೆಲ್ಲಾ ಶೋಕಿ ಅಂತಾನೂ ಹೇಳಿದ್ದು, ಇದೀಗ ಈ ಜೋಡಿ ಬೇರೆ ಬೇರೆಯಾಗಿದೆ.

You may also like

Leave a Comment