5
Shamanth gowda: ಕನ್ನಡ ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ (Shamanth gowda) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಮೇಘನಾ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಪ್ರೀತಿಸಿದ ಹುಡುಗಿ ಮೇಘನಾಗೆ ಖುಷಿ ಖುಷಿಯಾಗಿ ಶಮಂತ್ ತಾಳಿ ಕಟ್ಟುತ್ತಿರುವ ಫೋಟೋ ಸದ್ದು ಮಾಡುತ್ತಿದೆ.
ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ.
