Bigg Boss: ಈಗಾಗಲೇ ಬಿಗ್ ಬಾಸ್( Bigg Boss)ಕಾರ್ಯಕ್ರಮ ಆರಂಭಗೊಂಡಿದ್ದು, ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟು ಭರ್ಜರಿ ಮನರಂಜನೆ ನೀಡಲು ರೆಡಿಯಾಗಿದ್ದಾರೆ. ಆದರ ಈ ನಡುವೆ ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಿದ್ದಿದ್ದಾರೆ. ಯಾರು ಆ ಸ್ಪರ್ಧಿ??
ಬಿಗ್ ಬಾಸ್ ತಮಿಳು ಸೀಸನ್ 7 ಶುರುವಾಗಿ ಒಂದು ವಾರ ಕಳೆದಿದ್ದು, ಈ ನಡುವೆ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ತಮ್ಮ ಸ್ವಇಚ್ಛೆಯಿಂದ ಕಾರ್ಯಕ್ರಮದಿಂದ ಹೊರಬಂದಿರುವ ಘಟನೆ ವರದಿಯಾಗಿದೆ. ಕಮಲ್ ಹಾಸನ್ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ತಮಿಳು ಸೀಸನ್ 7 ಶುರುವಾಗಿ ವಾರ ಕಳೆದಿದೆ. ಈ ನಡುವೆ ದೊಡ್ಮನೆಯ 18 ಸ್ಪರ್ಧಿಗಳಲ್ಲಿ ಖ್ಯಾತ ಬರಹಗಾರರಾದ ಬಾವ ಚೆಲ್ಲದೊರೈ ಕೂಡ ಒಬ್ಬರಾಗಿದ್ದು, ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದ ಒಂದು ವಾರಕ್ಕೆ ಮನೆಯಿಂದ ಹೊರ ಬೀಳುವ ತೀರ್ಮಾನ ಕೈಗೊಂಡಿದ್ದಾರೆ.

ಕಳೆದ ವಾರ ಬಾವ ಚೆಲ್ಲದೊರೈ ಅವರು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಹಿನ್ನೆಲೆ ಅವರನ್ನು ಮತ್ತೆ ಸ್ಮಾಲ್ ಬಾಸ್ ಮನೆ( ಸಣ್ಣ ಬಾಸ್ ಹೌಸ್) ಗೆ ರವಾನಿಸಲಾಗಿತ್ತು. ಈ ಮನೆಯಲ್ಲಿರುವ ಸ್ಪರ್ಧಿ ಅಡುಗೆಯ ಜೊತೆಗೆ ಶುಚಿ ಮಾಡುವ ಕಾರ್ಯದಲ್ಲಿ ಭಾಗಿಯಾಗಬೇಕು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲು ಅವಕಾಶವಿಲ್ಲ. ಹೀಗಾಗಿ ಬಾವ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು.
ಅಕ್ಟೋಬರ್ 9 ರಂದು (ಸೋಮವಾರ) ಬಾವ ಚೆಲ್ಲದೊರೈ ಅವರು ತನಗೆ ಎದೆನೋವು ಕಾಣಿಸಿಕೊಂಡ ಕುರಿತು ಬಿಗ್ ಬಾಸ್ ಬಳಿ ಕ್ಯಾಮರಾದ ಮುಂದೆ ಹೇಳಿಕೊಂಡಿದ್ದರು. ಹೀಗಾಗಿ, ಬಾವ ಕಾರ್ಯಕ್ರಮದಿಂದ ಹೊರಹೋಗುವ ಕುರಿತು ಬಿಗ್ ಬಾಸ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಕೂಡ ಬಾವಾ ಅವರು ಕಾರ್ಯಕ್ರಮದಿಂದ ನಿರ್ಗಮಿಸಲು ಬಯಸುವುದಾಗಿ ಹೇಳಿ ದೊಡ್ಮನೆಯಿಂದ ಹೊರಬಂದಿದ್ದಾರೆ.
ಇದನ್ನು ಓದಿ: gk quiz : ತನ್ನ ಲಿಂಗವನ್ನೇ ತಾನು ಬದಲಿಸಿಕೊಳ್ಳೋ ಪ್ರಾಣಿ ಯಾವುದು ?! ನೀವೇನಾದರೂ ಉತ್ತರ ಹೇಳ್ತೀರಾ ?!
