Home » Bigil Actress Indraja: ಬಿಗಿಲ್‌ ಖ್ಯಾತಿ ನಟಿಯ ಅಮ್ಮನಿಂದ ಅಳಿಯನಿಗೆ ಲಿಪ್‌ಕಿಸ್‌ ; ನೆಟ್ಟಿಗರಿಂದ ಟೀಕೆ

Bigil Actress Indraja: ಬಿಗಿಲ್‌ ಖ್ಯಾತಿ ನಟಿಯ ಅಮ್ಮನಿಂದ ಅಳಿಯನಿಗೆ ಲಿಪ್‌ಕಿಸ್‌ ; ನೆಟ್ಟಿಗರಿಂದ ಟೀಕೆ

2 comments
Bigil Actress Indraja

Bigil Actress Indraja: ರೋಬೋ ಶಂಕರ್‌ ಪುತ್ರಿ ಇಂದ್ರಜಾ ಶಂಕರ್‌ ಅವರು ನಿರ್ದೇಶಕ ಕಾರ್ತಿಕ್‌ ಅವರನ್ನು ಮದುವೆಯಾಗಿದ್ದಾರೆ. ಬಿಗಿಲ್‌ ಸಿನಿಮಾದಲ್ಲಿ ಪಾಂಡಿಯಮ್ಮನ ಪಾತ್ರವನ್ನು ಇಂದ್ರಜಾ ಶಂಕರ್‌ ಅವರು ಮಾಡಿದ್ದರು. ವಿಜಯ್‌ ಅವರು ಕೋಚ್‌ ಆಗಿ ಪಾತ್ರ ಮಾಡಿದ ಈ ಸಿನಿಮಾ ಬಹಳ ಹೆಸರು ಮಾಡಿತ್ತು. ಇದೀಗ ಪಾಂಡಿಯಮ್ಮನ ವಿವಾಹದ ಸಂಭ್ರಮದ ವೀಡಿಯೋವೊಂದು ವೈರಲ್‌ ಆಗಿದೆ. ಅಮ್ಮ ಪ್ರಿಯಾಂಕಾ ಶಂಕರ್‌ ಅವರು ತಮ್ಮ ಅಳಿಯನ ತುಟಿಗೆ ಕಿಸ್‌ ಕೊಟ್ಟಿದ್ದಾರೆ. ಈ ವೀಡಿಯೋ ಇದೀಗ ಭಾರೀ ಚರ್ಚೆ ಮಾಡುತ್ತಿದೆ.

ಇದನ್ನೂ ಓದಿ: Udupi: ದ.ಕ ದಲ್ಲಿ ಬ್ರಿಜೇಶ್‌ ಚೌಟಾ, ಉಡುಪಿ ಶ್ರೀನಿವಾಸ್‌ ಕೋಟಾ, ಕಾಂಗ್ರೆಸ್‌ಗೆ ಗೂಟ- ಬಸವನಗೌಡ ಪಾಟೀಲ್‌ ಯತ್ನಾಳ್

ಇಂದ್ರಜಾ ಶಂಕರ್‌ ಅವರು ಬಿಗಿಲ್‌ ಸಿನಿಮಾದಲ್ಲಿ ಪಾಂಡಿಯಮ್ಮನ ಪಾತ್ರ ಮಾಡಿದ್ದರು. ಇವರು ರೋಬೋ ಶಂಕರ್‌ ಮಗಳು. ಇಂದ್ರಜಾ ಅವರ ಮದುವೆ ಮಾ.24 ರಂದು ನಿರ್ದೇಶಕ ಕಾರ್ತಿಕ್‌ ಜೊತೆ ನಡೆಯಿತು. ಅಳಿಯನಿಗೆ ಇಂದ್ರಜಾ ತಂದೆ ತಾಯಿ 20 ಲಕ್ಷ ರೂ. ಮೌಲ್ಯದ ಕಾರು ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಇದನ್ನೂ ಓದಿ: Rajiv Gandhi Assassination Case: ಭಾರತ ತೊರೆದ ನಳಿನಿ ಪತಿ ಸೇರಿ ಮೂವರು ರಾಜೀವ್ ಗಾಂಧಿ ಪ್ರಕರಣದ ಅಪರಾಧಿಗಳು

ಮದುವೆ ಸಂಭ್ರದಮ ವೀಡಿಯೋ ಇದೀಗ ವೈರಲ್‌ ಆಗಿದ್ದು, ಇಲ್ಲಿ ಅತ್ತೆ ಅಳಿಯನಿಗೆ ಲಿಪ್‌ಕಿಸ್‌ ನೀಡಿದ್ದಾರೆ. ಆರತಕ್ಷತೆಯ ವೀಡಿಯೋ ಇದಾಗಿದೆ. ಈ ಕುರಿತು ನೆಟ್ಟಿಗರು ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದು, ಅಳಿಯ ಈ ಕುರಿತು ಕಮೆಂಟ್‌ ಮಾಡಿದ್ದು, ” ಅತ್ತೆ ನನಗೆ ಸಹೋದರಿಯ ಸಮಾನ” ಎಂದು ಹೇಳಿದ್ದಾರೆ.

ತಂದೆ ರೋಬೋ ಶಂಕರ್‌ ಅವರಿಗೆ ಮಗಳು ಇಂದ್ರಜಾ ತುಟಿಗೆ ಮುತ್ತು ಕೊಟ್ಟಿರುವ ಕುರಿತು ಕೂಡಾ ವರದಿಯಾಗಿದೆ.

You may also like

Leave a Comment