The Kerala Story: ದಿ ಕೇರಳ ಸ್ಟೋರಿ‘ (The Kerala Story) ಚಿತ್ರವನ್ನು ಸನ್‌ಲೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಅಮೃತ್‌ಲಾಲ್ ಶಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸಿದ್ದು, ಸುದಿಪ್ರೋ ಸೇನ್ ನಿರ್ದೇಶಿಸಿದ್ದಾರೆ.
ಸದ್ಯ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ದಾನಿ, ವಿಜಯ್ ಕೃಷ್ಣ, ಪ್ರಣಯ್ ಪಚೋರಿ, ಪ್ರಣವ್ ಮಿಶ್ರಾ ಹಾಗೂ ಇತರರು ಚಿತ್ರದಲ್ಲಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಮೇ 5 ರಂದು ಈ ಸಿನಿಮಾ ರಿಲೀಸ್ ಆಗಿದೆ.
ಮೊದಲ ದಿನದಿಂದಲೂ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಬಿಡುಗಡೆಯಾಗಿ 6 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 60ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಮುಂದಿನ ನಾಲೈದು ದಿನಗಳಲ್ಲಿ ಶತಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ.
ಆದರೆ ‘ದಿ ಕೇರಳ ಸ್ಟೋರಿ’ ಯಲ್ಲಿರುವ ಅಂಶಗಳು ಕೆಲವರನ್ನು ಕೆರಳಿಸಿದ್ದು ಇದೆ. ಈ ಸಿನಿಮಾವನ್ನು ಬ್ಯಾನ್ ಮಾಡಲೇಬೇಕೆಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಇದೀಗ ಎಲ್ಲೆಡೆಯಿಂದ ಅದ್ಭುತ ಮೆಚ್ಚುಗೆಯೊಂದಿಗೆ ಕಲೆಕ್ಷನ್ ವಿಚಾರದಲ್ಲಿಯೂ ಮುನ್ನುಗ್ಗುತ್ತಿರುವ ಈ ಚಿತ್ರಕ್ಕೆ ಇದೀಗ ಬಿಜೆಪಿ ಶಾಕ್ ನೀಡಿದೆ.
ಮೇ 6 ರಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಶೇರ್ ಮಾಡಿ, ಮಧ್ಯಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ತೆರಿಗೆ ಮುಕ್ತವಾಗಿದೆ ಎಂದು ಘೋಷಿಸಿದ್ದರು. ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ್ದಕ್ಕಾಗಿ ಬಿಜೆಪಿಯ ಎಲ್ಲ ನಾಯಕರು ಸಿಎಂ ಚೌಹಾಣ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು. ಆದರೆ, ಆದೇಶ ಹೊರಬಿದ್ದ ಕೇವಲ 4 ದಿನಕ್ಕೆ ನೀಡಿದ್ದ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿದೆ.
ಯಾವಾಗ ಕರ್ನಾಟಕದ ಮತದಾನೋತ್ತರ ಸಮೀಕ್ಷೆ ಹೊರಬಿತ್ತೋ ಆ ಕ್ಷಣದಿಂದ ಸಿನಿಮಾ ಮೇಲಿನ ತೆರಿಗೆ ವಿನಾಯಿತಿಯನ್ನು ಸರ್ಕಾರ ಹಿಂಪಡೆದಿದೆ. ಈ ನಿರ್ಧಾರದ ಅಸಲಿಯತ್ತು ಇನ್ನೇನು ಹೊರಬೀಳಬೇಕಿದೆ. ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳದಂತೆ ಚೂಬಿಟ್ಟ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಪ್ರೇಮಚಂದ್, ಕರ್ನಾಟಕದಲ್ಲಿ ಮತದಾನ ಮುಗಿದ ತಕ್ಷಣ ಸರ್ಕಾರ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ಮುಕ್ತನಿರ್ಧಾರ ಹಿಂಪಡೆದಿದೆ.
