Home » ಬಾಲಿವುಡ್‍ನ ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

ಬಾಲಿವುಡ್‍ನ ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

0 comments

ಬಾಲಿವುಡ್‍ನ ಹಿರಿಯ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇನ್ನು ನೆನಪು ಮಾತ್ರ. ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 69 ವರ್ಷದ ಬಪ್ಪಿ ಲಹರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಬಪ್ಪಿ ಲಹರಿ 1970-80ರ ದಶಕದಲ್ಲಿ ಬಾಲಿವುಡ್‍ನಲ್ಲಿ ಮಿಂಚಿದ ಹಾಡುಗಾರ. ಬಾಲಿವುಡ್‍ನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಅವರು, 1970-80ರ ದಶಕದಲ್ಲಿ ಸದ್ದು ಮಾಡಿದ್ದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಬಪ್ಪಿ ಲಹರಿಯವರ ಕಂಠದಲ್ಲಿ ಮೂಡಿಬಂದಿತ್ತು.

You may also like

Leave a Comment