Gayatri Joshi: ಬಾಲಿವುಡ್ ನಟಿ ಗಾಯತ್ರಿ ಜೋಶಿ(Gayatri Joshi) ಕಾರು ಭೀಕರ ಅಪಘಾತ ಸಂಭವಿಸಿ ಇಬ್ಬರು ವೃದ್ಧರು ಮೃತಪಟ್ಟ (Death)ಘಟನೆ ವರದಿಯಾಗಿದೆ.

ಶಾರುಖ್ ಖಾನ್ ಜೊತೆಗೆ “ಸ್ವದೇಸ್” ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಗಾಯತ್ರಿ ಜೋಶಿ ತಮ್ಮ ಪತಿ ವಿಕಾಸ್ ಒಬೆರಾಯ್ ಅವರ ಜೊತೆಗೆ ಇಟಲಿಯಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭ ಭೀಕರ ಅಪಘಾತಕ್ಕೀಡಾಗಿದ್ದು, ಸಾರ್ಡಿನಿಯಾದ ಗ್ರಾಮೀಣ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ದುರಂತ ಸಂಭವಿಸಿದೆ.
ಬಾಲಿವುಡ್ ನಟಿ ಗಾಯತ್ರಿ ಅವರ ಕಾರು ಇತರ ವಾಹನಗಳು ಮತ್ತು ಕ್ಯಾಂಪರ್ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದು, ವರದಿಗಳ ಪ್ರಕಾರ, ಲಂಬೋರ್ಘಿನಿ ಮತ್ತು ಫೆರಾರಿ ಸೇರಿದಂತೆ ಅನೇಕ ಉನ್ನತ-ಕಾರ್ಯಕ್ಷಮತೆಯ ವಾಹನಗಳು ಏಕಕಾಲದಲ್ಲಿ ಕ್ಯಾಂಪರ್ ವ್ಯಾನ್ ಅನ್ನು ಹಿಂದಿಕ್ಕಲು ಯತ್ನಿಸಿದ ಸಂದರ್ಭ ದುರಂತ ನಡೆದಿದೆ. ಫೆರಾರಿಗೆ ಬೆಂಕಿ ತಗುಲಿದ್ದು, ಇದರಿಂದ ಒಳಗೆ ಕುಳಿತಿದ್ದ 63 ವರ್ಷದ ಮೆಲಿಸ್ಸಾ ಕ್ರೌಟ್ಲಿ ಮತ್ತು 67 ವರ್ಷದ ಸ್ವಿಟ್ಜರ್ಲೆಂಡ್‌ನ ಮಾರ್ಕಸ್ ಕ್ರೌಟ್ಲಿ ಎಂಬ ದಂಪತಿಗಳು ಮೃತ ಪಟ್ಟಿದ್ದಾರೆ. “ವಿಕಾಸ್ ಮತ್ತು ನಾನು ಇಟಲಿಯಲ್ಲಿದ್ದು, ನಾವು ದೇವರ ದಯೆಯಿಂದ ಅಪಾಯದಿಂದ ಪಾರಾಗಿದ್ದೇವೆ” ಎಂದು ಗಾಯತ್ರಿ ದಿ ಫ್ರೀ ಪ್ರೆಸ್ ಜರ್ನಲ್‌ಗೆ ಮಾಹಿತಿ ನೀಡಿದ್ದಾರೆ.
Two deaths on a Ferrari in Sardina, Italy pic.twitter.com/skT3CaXg0T
— Globe Clips (@globeclip) October 3, 2023
