Actress Mrinal Navell: ದೂರದ ಬೆಟ್ಟಗೆ ನುಣ್ಣಗೆ ಎಂಬಂತೆ ದೂರದಿಂದ ನೋಡಿದಾಗ ಎಲ್ಲವೂ ಸುಂದರ.ಆದರೆ ಒಮ್ಮೆ ಸಿನಿಮಾ ರಂಗದ ಒಳಹೊಕ್ಕರೆ ಅಲ್ಲಿನ ಒಳಗಿನ ಗುಟ್ಟು ರಟ್ಟಾಗುತ್ತದೆ. ಬಣ್ಣದ ಲೋಕದಲ್ಲಿ ನೆಲೆ ಕಂಡು ಯಶಸ್ಸು ಪಡೆದ ಅದೆಷ್ಟೋ ನಟ ನಟಿಯರು ಸಿನಿ ಲೋಕದಲ್ಲಿ ತೊಡಗಿಸಿಕೊಂಡಾಗ ಎದುರಾಗುವ, ಅನುಭವಿಸುವ ಕಷ್ಟ ವಿವರಿಸಲಾಗದಂತದ್ದು.
ನಟ-ನಟಿಯರು ಚಿತ್ರರಂಗದಲ್ಲಿ ತಾವು ಎದುರಿಸಿದ ಕಹಿ ಅನುಭವಗಳನ್ನು ಜೊತೆಗೆ ಪಾತ್ರಕ್ಕಾಗಿ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಕರೆದಿರುವ ಬಗ್ಗೆ ಕೂಡ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಇದೀಗ, ನಟಿ ಮೃಣಾಲ್ (Actress Mrinal Navell)ಕೂಡ ತಾನು ಅನುಭವಿಸಿದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಬಾಲಿವುಡ್ (Bollywood)ಕಿರುತೆರೆ ನಟಿ ಮೃಣಾಲ್ ತಾನು ಕೂಡ ಕಾಸ್ಟಿಂಗ್ ಕೌಚ್ ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ.
“ಕಳೆದ ವರ್ಷ ಈ ಘಟನೆ ನಡೆದಿದ್ದು, ನಾನು ಟಿವಿ ಜಾಹೀರಾತಿಗಾಗಿ ಆಡಿಷನ್ ನೀಡಲು ಹೋಗಿದ್ದಾಗ ಒಬ್ಬ ವ್ಯಕ್ತಿ, ಇಬ್ಬರನ್ನು ಶಾರ್ಟ್ ಲಿಸ್ಟ್ ಮಾಡಿದ್ದೀವಿ. ಅದರಲ್ಲಿ ನೀವು ಕೂಡ ಇದ್ದೀರಾ “ಎಂದ. ನೀವು ಒಂದು ವೇಳೆ ಆಯ್ಕೆಯಾದರೆ, ಕಾರ್ರಿಕ್ ಆರ್ಯನ್ ಜೊತೆ ಜಾಹೀರಾತಿನಲ್ಲಿ (Advertisement)ನಟಿಸುವ ಅವಕಾಶ ಸಿಗಲಿದೆ ಎಂಬ ಸಂದೇಶ ಮರುದಿನವೇ ಕಳುಹಿಸಲಾಗಿತ್ತು.
ನಿಮಗೆ ಈ ಅವಕಾಶ ಸಿಗಬೇಕು ಎಂದಾದರೆ ನೀವು ಕಾಂಪ್ರಮೈಸ್ ಆಗಬೇಕು ಎಂದನಂತೆ. ಈ ಸಂದೇಶ ನೋಡಿ, ಆತನ ತನ್ನಿಂದ ಏನು ಬಯಸುತ್ತಿದ್ದಾನೆ ಎನ್ನುವುದನ್ನು ತಿಳಿಯಲು ನಟಿ ಮೃಣಾಲ್ “ಏನು ಕಾಂಪ್ರಮೈಸ್ ಬೇಕು? ಎಂದು ಕೇಳಿದರಂತೆ. ಬೇರೆ ಏನು ಇಲ್ಲ. ಸುಮ್ಮನೆ ಭೇಟಿಯಾಗಿ ರಾತ್ರಿಯಿಡೀ ಚಿಲ್ ಆಗುವುದಷ್ಟೇ!! ಅಲ್ಲೇ ಕಾಂಟ್ರಾಕ್ಟ್ ಮೇಲೆ ಸಹಿ ಹಾಕಬಹುದು ಎಂದರಂತೆ!! ಇದರಿಂದ ಕೋಪಗೊಂಡ ನಟಿ ಮೃಣಾಲ್ ಬಾಯಿಗೆ ಬಂದಂತೆ ಬೈದರಂತೆ. ಕೂಡಲೇ ಆ ವ್ಯಕ್ತಿ ಮೆಸೇಜ್ ಎಲ್ಲಾ ಡಿಲೀಟ್ ಮಾಡಿದ್ದಾನೆ. ನನಗೆ ಹೀಗೆ ಅಡ್ಡದಾರಿಯಲ್ಲಿ ನಟಿಸುವ ಅನಿವಾರ್ಯತೆ ಇಲ್ಲ ಎಂದು ನಟಿ ಹೇಳಿದಾಗ, ಆತ, ಇದು ಸುವರ್ಣಾವಕಾಶ, ಕಳೆದುಕೊಳ್ಳಬೇಡ ಎಂದು ಕೂಡ ಹೇಳಿದ್ದನಂತೆ.
ಜಾಹೀರಾತು ಪ್ರಕ್ರಿಯೆ ಇದೇ ರೀತಿ ನಡೆಯುತ್ತದೆ. ಎಲ್ಲರೂ ಇದೇ ರೀತಿ ಮಾಡಬೇಕು. ನೀವು ಒಪ್ಪಿಕೊಂಡರೆ ನಾವು ನಿಮಗೆ ಸಿನಿಮಾ ಅವಕಾಶ ಕೂಡ ನೀಡುತ್ತೇವೆ ಎಂದು ಆ ವ್ಯಕ್ತಿ ಹೇಳಿದ್ದನಂತೆ.ಇದರಿಂದ ಕೋಪಗೊಂಡು ನಟಿ ಆತನ ನಂಬರ್ ಕೂಡ ಬ್ಲಾಕ್ ಮಾಡಿದ್ದರಂತೆ ಪ್ರತಿಯೊಬ್ಬರು ಹೀಗೆ ನೇರವಾಗಿ ಕೇಳುವುದಿಲ್ಲ. ಕೆಲವರು ಪರೋಕ್ಷವಾಗಿ ಹಿಂಟ್ ನೀಡುತ್ತಾರೆ. ಇನ್ನು ಕೆಲವರು ಹೀಗೆ ಕೇಳುತ್ತಾರೆ ಎಂದು ನಟಿ ಮೃಣಾಲ್ ಹೇಳಿಕೊಂಡಿದ್ದು, ನನಗೆ ಆ ಘಟನೆ ನೆನಪಿನಲ್ಲಿ ಉಳಿದುಬಿಟ್ಟಿದೆ ಎಂದು ತಮ್ಮ ಕಹಿ ಅನುಭವವನ್ನುನಟಿ ಮೃಣಾಲ್ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಕೇವಲ 14,000ಕ್ಕೆ ಸಿಗ್ತಿದೆ ಈ ಹೈ ಫೈ ಲ್ಯಾಪ್ ಟಾಪ್- ಆಫರ್ ಇರೋದು ಇಲ್ಲಿವರೆಗೂ ಮಾತ್ರ !! ಮುಗಿಬಿದ್ದ ವಿದ್ಯಾರ್ಥಿಗಳು
