Chandrayaan-3: ಅಭೂತ ಪೂರ್ವ ಶಕ್ತಿಯಾದ ಚಂದ್ರಯಾನ-3(Chandrayaan-3) ಮಿಷನ್ ಯಶಸ್ವಿಯಾಗಿ ಬಲಗಾಲಿಟ್ಟು ಚಂದ್ರನ ಮೇಲೆ ಕಾಲಿಟ್ಟು ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಸದ್ಯ ಪ್ರಪಂಚದಾದ್ಯಂತ ಚಂದ್ರಯಾನದ್ದೇ (Chandrayaan-3) ವಿಚಾರ. ಅಚ್ಚರಿಯ ವಿಚಾರ ಎಂದರೆ ಚಂದ್ರನ ಮೇಲೆ ಬಾಲಿವುಡ್ನ ಕೆಲವು ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ! ಹೌದು, ಚಂದ್ರನ ಮೇಲೆ ಅನೇಕ ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ. ಹಾಗಂತ ಈ ಜಾಗದ ಮೇಲೆ ನೀವು ಹಕ್ಕು ಸಾಧಿಸೋಕೆ ಆಗುವುದಿಲ್ಲವಂತೆ.
ಬನ್ನಿ ಈ ಕೆಳಗೆ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಬಾಲಿವುಡ್’ನ ಸ್ಟಾರ್ ನಟ-ನಟಿಯರ ಬಗ್ಗೆ ನಿಮಗೆ ಮಾಹಿತಿ ನೀಡಲಾಗಿದೆ.
ಶಾರುಖ್ ಖಾನ್:
ಸೂಪರ್ ಸ್ಟಾರ್ ಶಾರುಖ್ ಖಾನ್ ತಮ್ಮ 52ನೇ ವರ್ಷದ ಹುಟ್ಟುಹಬ್ಬದಂದು ಚಂದ್ರನ ಮೇಲಿನ ಜಾಗವನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಅಭಿಮಾನಿಯೊಬ್ಬರು ಚಂದ್ರನ ಮೇಲೆ ಜಾಗವನ್ನು ಖರೀದಿಸಿ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಚಂದ್ರನ ಮೇಲೆ ‘ಸೀ ಆಫ್ ಟ್ರಾನ್ಕ್ವಾಲಿ’ ಹೆಸರಿನ ಪ್ರದೇಶದಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ :
ಸುಶಾಂತ್ ಸಿಂಗ್ ರಜಪೂತ್ ಅವರ ವಿಜ್ಞಾನ ಮತ್ತು ಬಾಹ್ಯಾಕಾಶದ ಮೇಲಿನ ಪ್ರೀತಿ, ಚಂದ್ರನ ಅಂಗಳದಲ್ಲೂ ಜಾಗ ಖರೀದಿಸುವಂತೆ ಮಾಡಿದೆ. ಇವರು ಖರೀದಿಸಿದ ಪ್ರದೇಶವನ್ನು ಮೇರ್ ಮಸ್ಕೋವಿಯೆನ್ಸ್ ಅಥವಾ ಮಸ್ಕೋವಿ ಸಮುದ್ರ ಎಂದು ಕರೆಯಲಾಗುತ್ತದೆ.
ಅಂಕಿತ್ ಗುಪ್ತಾ:
ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತಾ ಕೂಡ ಚಂದ್ರನ ಮೇಲೆ ಆಸ್ತಿ ಹೊಂದಿದ್ದು, ಇದನ್ನು ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ಚಹರ್ ಚೌಧರಿ:
ಕಿರುತೆರೆ ನಟಿ ಪ್ರಿಯಾಂಕಾ ಚಹರ್ ಚೌಧರಿ ಕೂಡ ಚಂದ್ರನ ಮೇಲೆ ಆಸ್ತಿಯನ್ನು ಹೊಂದಿದ್ದಾರೆ. ಇವರು ಬಿಗ್ ಬಾಸ್ ಹಿಂದಿಯ 16ನೇ ಸೀಸನ್ ಸ್ಪರ್ಧಿ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರಿಗೆ ಅಭಿಮಾನಿಯೊಬ್ಬರು ಚಂದ್ರನಲ್ಲಿ ಜಾಗ ಖರೀದಿಸಿ ಇವರಿಗೆ ಗಿಫ್ಟ್ ಆಗಿ ನೀಡಿದ್ದಾರೆ.
ನಿಮಗೂ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಬೇಕೆಂದಿದ್ದರೆ ದಿ ಲೂನಾರ್ ರಿಜಿಸ್ಟ್ರಿ ಎಂಬ ವೆಬ್‌ಸೈಟ್ ಮೂಲಕ ಅಪ್ಲೈ ಮಾಡಬಹುದು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಭೂಮಿಯನ್ನು ಖರೀದಿಸಲು ಬಯಸುವ ಪ್ರದೇಶವನ್ನು ಆಯ್ಕೆ ಮಾಡಬಹುದು.
ನಿಮ್ಮ ಆಯ್ಕೆಯ ಪ್ರದೇಶವನ್ನು ನೀವು ಆಯ್ಕೆ ಮಾಡಿದ ನಂತರ, ನೀವು ದಾಖಲೆಗಳನ್ನು ಒದಗಿಸಿ, ಬಳಿಕ ಅದನ್ನು ಖರೀದಿ ಮಾಡಬಹುದು. ಚಂದ್ರನ ಮೇಲೆ ಒಂದು ಎಕರೆ ಭೂಮಿಗೆ USD 42.5 ವೆಚ್ಚವಾಗುತ್ತದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ 3430 ವರೆಗೆ ಆಗುತ್ತದೆ.
ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಎರಡು ಕಂಪನಿಗಳು ಚಂದ್ರನ ಮೇಲೆ ಭೂಮಿಯನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದು, ಅವರ ಮೂಲಕ, ಅನೇಕರು ಚಂದ್ರನ ಮೇಲೆ ಭೂಮಿ ಖರೀದಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Gardening Tips: ಸಕಲ ಸಮೃದ್ಧಿಗಾಗಿ ಮನೆಯಲ್ಲಿ ಈ ರೀತಿ ಸುಲಭವಾಗಿ ಕಮಲದ ಹೂವು ಬೆಳೆಯಿರಿ
