Ileana D’cruz: ಖ್ಯಾತ ನಟಿ ಇಲಿಯಾನಾ ಡಿಕ್ರೂಜ್(Ileana D’cruz )ಕಳೆದ ತಿಂಗಳಿಂದಲೂ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡು ಭಾರೀ ಸುದ್ದಿಯಾಗ್ತಿದ್ದಾರೆ. ಅಲ್ಲದೆ ತಾಯ್ತನದ ಸಂಭ್ರಮವನ್ನು ಎಂಜಾಯ್(Enjoy) ಮಾಡುತ್ತಿದ್ದಾರೆ. ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಬಹಿರಂಗ ಪಡಿಸಿದ್ದ ನಟಿ ಬೇಬಿ ಬಂಪ್ ಫೋಟೋ(Baby bump) ಹಂಚಿಕೊಂಡು ಅಭಿಮಾನಿಗಳಲ್ಲಿ ತಂದೆ ಯಾರಿರಬಹುದು? ಎಂದು ಕುತೂಹಲವನ್ನು ಹುಟ್ಟುಹಾಕಿದ್ದರು. ಆದರೀಗ ಗೋವಾ ಬ್ಯೂಟಿ(Goa beauty) ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ, ತನ್ನ ಮಗುವಿನ ತಂದೆ ಯಾರೆಂದು ತಿಳಿಸಿ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ.
ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ (Ileana) ಸದ್ಯ ಮೊದಲ ಮಗುವಿನ ಬರುವಿಕೆಯ ಕಾತರದಲ್ಲಿದ್ದಾರೆ. ಮದುವೆಯಾಗದೇ ತಾಯಿಯಾಗುತ್ತಿರುವ ವಿಚಾರ ತಿಳಿಸುತ್ತಿದ್ದಂತೆ ತಂದೆ ಯಾರು.? ಎಂಬು ಪ್ರಶ್ನೆ ಎದುರಾಗಿತ್ತು. ಇದೀಗ ಇದಕ್ಕೆಲ್ಲಾ ನಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ತನ್ನ ಗೆಳೆಯನ ಜೊತೆಯಿರುವ ಫೋಟೋ ಹಂಚಿಕೊಂಡು, ತಾಯ್ತನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಹೌದು, ಇಷ್ಟು ದಿನ ಸೈಲೆಂಟ್ ಆಗಿದ್ದ ನಟಿ ಇಲಿಯಾನ ಡಿಕ್ರೂಸ್ ಇದ್ದಕ್ಕಿದ್ದಂತೆ ತನ್ನ ಬಾಯ್‌ಫ್ರೆಂಡ್(Boy friend) ಫೋಟೊ ಶೇರ್ ಮಾಡಿದ್ದಾರೆ. ಪ್ರಿಯಕರನ ಜೊತೆ ಬಹಳ ರೊಮ್ಯಾಂಟಿಕ್ ಆಗಿರುವ ಕ್ಲೋಸ್‌ಅಪ್ ಫೋಟೊವೊಂದನ್ನು ಶೇರ್ ಮಾಡಿದ್ದು ಅದು ಕೊಂಚ ಬ್ಲರ್ ಆಗಿರುವಂತೆ ನೋಡಿಕೊಂಡಿದ್ದಾರೆ. ಆದರೆ ಆ ಫೋಟೊದಲ್ಲಿರುವ ಆ ಮಿಸ್ಟರಿ ಮ್ಯಾನ್ ಯಾರು ಅನ್ನೋದು ರಿವೀಲ್ ಆಗಿಲ್ಲ. ಬೇಕಂತಲೇ ಕುತೂಹಲ ಹುಟ್ಟಿಸಲು ಇಲಿಯಾನ ಈ ರೀತಿ ಪೋಸ್ಟ್ ಮಾಡಿರೋದು ಅರ್ಥವಾಗ್ತಿದೆ.
ಅಲ್ಲದೆ ಗರ್ಭಿಣಿಯಾಗಿರುವುದು (Pregnancy) ನಮಗೆ ಸಿಗುವ ತುಂಬಾ ಸುಂದರವಾದ ಆಶೀರ್ವಾದ. ನಾನು ಅದೃಷ್ಟಶಾಲಿ. ನನ್ನೊಳಗೆ ಒಂದು ಜೀವ ಬೆಳೆಯುತ್ತದೆ ಎಂದು ಅರಿತುಕೊಳ್ಳುವುದೇ ಎಷ್ಟು ಸುಂದರವಾಗಿದೆ. ಈ ಪ್ರಯಾಣದಲ್ಲಿ ನನ್ನ ಪ್ರೀತಿಯ ವ್ಯಕ್ತಿ ಬಹಳ ಸಹಕರಿಸಿದ. ನನಗೆ ಸಮಸ್ಯೆ ಎದುರಾದ ಪ್ರತಿಕ್ಷಣ ನನ್ನ ಕಣ್ಣೀರು ಒರೆಸಿದ. ಬಂಡೆಯಂತೆ ನನಗೆ ಬೆಂಬಲವಾಗಿ ನಿಂತಿದ್ದಾನೆ. ಈಗ ಯಾವುದು ಅಷ್ಟು ಕಷ್ಟ ಎನಿಸುತ್ತಿಲ್ಲ” ಎಂದು ಎಮೋಷನಲ್ ಆಗಿ ನಟಿ ಬರೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ನಟಿ ಕತ್ರಿನಾ ಕೈಫ್(Katrina kaif) ಸಹೋದರ ಸಭಾಸ್ಟಿನ್ ಲಾರೆಂಟ್(Sabastin Laurent) ಜೊತೆ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಕೆಲ ವರ್ಷಗಳ ಹಿಂದೆ ಇಲಿಯಾನ ಆಸ್ಟ್ರೇಲಿಯಾ ಮೂಲದ ಫೋಟೊಗ್ರಫರ್ ಆಂಡ್ರ್ಯೂ ನೀಬೋನ್ ಜೊತೆ ಲವ್ವಿ ಡವ್ವಿ ನಡೆಸ್ತಿದ್ದಾರೆ ಎನ್ನಲಾಗಿತ್ತು. ಇಬ್ಬರು ಮದುವೆ ಕೂಡ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ 4 ವರ್ಷಗಳ ಹಿಂದೆ ಇಬ್ಬರೂ ದೂರಾಗಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಇದೆಲ್ಲದರ ನಡುವೆ ಗೋವಾ ಬ್ಯೂಟಿ ಮತ್ತೊಬ್ಬನ ಪ್ರೀತಿಲಿ ಬಿದ್ದಿದ್ಧಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು.
ಆದರೆ ಕಳೆದ ಏಪ್ರಿಲ್(April) ನಲ್ಲಿ ಇಲಿಯಾನ ತಾನು ಗರ್ಭಿಣಿ ಆಗ್ತಿದ್ದೇನಿ ಎಂಬ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದ್ದರು. ನಂತರ ಒಂದೊಂದೇ ಬೇಬಿ ಬಂಪ್ ಫೋಟೊಗಳನ್ನು ತೇಲಿ ಬಿಡುತ್ತಿದ್ದರು. ಮದುವೆಗೂ ಮೊದ್ಲೆ ಗರ್ಭಿಣಿನಾ? ಆ ಮಗುವಿನ ತಂದೆ ಯಾರು? ಅಂತೆಲ್ಲಾ ನೆಟ್ಟಿಗರು, ಅಭಿಮಾನಿಗಳು ನಟಿಯನ್ನು ಕೇಳಿ ಟ್ರೋಲ್ ಮಾಡುತ್ತಿದ್ದರು. ಆದರೆ ಈ ಬಗ್ಗೆ ಆಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಆದರೀಗ ಇನ್ನೂ ಕುತೂಹಲ ಹುಟ್ಟಿಸುವ ರೀತಿಯಲ್ಲಿ ಇಲಿಯಾನ ತಮ್ಮ ಪ್ರಿಯತಮನ ಫೋಟೋ ಶೇರ್ ಮಾಡಿದ್ದಾರೆ.
