Rakhi Sawant: ಬಿಟೌನ್ ಮಾದಕ ಚೆಲುವೆಯೆಂದೇ ಖ್ಯಾತಿ ಪಡೆದ ರಾಖಿ ಸಾವಂತ್(Rakhi Sawant) ಅವರು ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಪ್ರಹಸನ ಮಾಡುತ್ತಾ ಜನರ ಮುಂದೆ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುವುದು ಗೊತ್ತಿರುವ ವಿಚಾರವೇ.

ಸೋಷಿಯಲ್ ಮೀಡಿಯಾದಲ್ಲಿ (Social Media)ಇತ್ತೀಚೆಗೆ ಮದುವೆಯಾಗಿದ್ದ ಮೈಸೂರು ಮೂಲದ ಆದಿಲ್ ತನಗೆ ಮೋಸ ಮಾಡಿದ ಕುರಿತು ಎಲ್ಲೆಡೆ ಹೇಳಿಕೊಂಡಿದ್ದು ಜೊತೆಗೆ ಜೈಲಿಗೆ ಕಳುಹಿಸಿದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ, ಡ್ರಾಮಾ ಕ್ವೀನ್ ರಾಖಿ ಸಾವಂತ್ ಇಸ್ಲಾಂ ಸಮುದಾಯದ ಪವಿತ್ರ ಕ್ಷೇತ್ರ ಮೆಕ್ಕಾಗೆ(Mecca)ಭೇಟಿ ನೀಡಿ ಹೊಸ ನಾಟಕ ಶುರು ಮಾಡಿದ್ದಾಳೆ.
ಜೈಲಿಂದ ಹೊರಬಂದ ಆದಿಲ್ ಸಹ ರಾಖಿ ವಿರುದ್ಧ ಹರಿಹಾಯ್ದಿದಿದ್ದರು. “ನನ್ನನ್ನು ಸುಳ್ಳು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ(Prision )ಕಳುಹಿಸಿದ್ದಾರೆ ಎಂದು ಆದಿಲ್ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ರಾಖಿ, “ಆದಿಲ್ ಬಾಲಿವುಡ್‌ನಲ್ಲಿ ಫೇಮ್ ಗಿಟ್ಟಿಸಿಕೊಳ್ಳಲು ನನ್ನನ್ನು ಮದುವೆಯಾಗಿದ್ದಲ್ಲದೇ, ನನಗೆ ಕೇವಲ ಮೋಸ ಮಾಡಿ ಲೈಂಗಿಕವಾಗಿಯೂ ನನ್ನನ್ನು ಬಳಸಿಕೊಂಡು ಕಿರುಕುಳ ನೀಡಿರುವ ಕುರಿತು ಆರೋಪ ಮಾಡಿದ್ದಾರೆ.
ಇದೀಗ, ರಾಖಿ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾಗೆ ಭೇಟಿ ನೀಡಿ ಅಲ್ಲಿನ ಆಚರಣೆಗಳನ್ನು ಪಾಲಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ. ಮೆಕ್ಕಾದಲ್ಲಿ ಅಲ್ಲಾಹುನ ದರ್ಶನ ಪಡೆದು, “ನನಗೆ ನ್ಯಾಯ ಬೇಕು. ಅದಕ್ಕಾಗಿ ನಾನು ಮೆಕ್ಕಾಗೆ ಬಂದಿರುವುದಾಗಿ ಎಲ್ಲರೂ ನನ್ನ ವಿರುದ್ಧ ಸುಳ್ಳನ್ನೇ ಹೇಳುತ್ತಿದ್ದಾರೆ” ಎಂಬ ವಿಡಿಯೋಗಳು(Viral Video)ಸದ್ಯ ವೈರಲ್ ಆಗಿವೆ.
ಆರೋಪ ಪ್ರತ್ಯಾರೋಪಗಳ ಮಾಡುತ್ತಲೇ ರಾಖಿ ನ್ಯಾಯಕ್ಕಾಗಿ ಅಲ್ಲಾಹುನ ಮೊರೆ ಹೋಗಿದ್ದು,”ಆದಿಲ್ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ಆತನಿಂದ ನನಗೆ ನ್ಯಾಯ ಬೇಕು. ಅದಕ್ಕಾಗಿ ನಾನು ಮೆಕ್ಕಾಗೆ ಬಂದಿರುವುದಾಗಿ ಹೇಳಿಕೊಂಡು ಗಳಗಳನೆ ಅತ್ತಿದ್ದಾರೆ. ನಾನು ಅಲ್ಲಾಹುನ ಮೊರೆ ಹೋಗಿದ್ದೇನೆ. ಆದಿಲ್ ಒಂದು ಹೆಣ್ಣಿನ ಜೀವನವನ್ನೇ ಹಾಳು ಮಾಡಿದ್ದಾನೆ” ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದನ್ನು ಕಂಡು ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Mangalore:ಸಿಟಿ ಬಸ್ ಅತಿ ವೇಗದ ಧಾವಂತ: ಬಸ್ ಬಾಗಿಲಿನಿಂದ ಕೆಳಕ್ಕೆ ಬಿದ್ದ ಕಂಡಕ್ಟರ್ ಸಾವು! ವೀಡಿಯೋ ವೈರಲ್
