Home » ತನ್ನ ಸಿನೆಮಾ ನೋಡಲು ಬುರ್ಖಾ ಧರಿಸಿ ಬಂದಿದ್ದ ಸ್ಟಾರ್ ನಟಿ ! | ಆಕೆ ಬುರ್ಖಾ ಧರಿಸಿದ್ದು ಯಾಕೆ ಗೊತ್ತಾ?

ತನ್ನ ಸಿನೆಮಾ ನೋಡಲು ಬುರ್ಖಾ ಧರಿಸಿ ಬಂದಿದ್ದ ಸ್ಟಾರ್ ನಟಿ ! | ಆಕೆ ಬುರ್ಖಾ ಧರಿಸಿದ್ದು ಯಾಕೆ ಗೊತ್ತಾ?

by Praveen Chennavara
0 comments

ಇಲ್ಲೊಬ್ಬ ಸ್ಟಾರ್ ನಟಿಯೊಬ್ಬರು ಅಭಿಮಾನಿಗಳ ಕಿರಿ ಕಿರಿ ತಪ್ಪಿಸುವ ಸಲುವಾಗಿ ಬುರ್ಖಾ ಧರಿಸಿ ಸಿನಿಮಾ ಥಿಯೇಟರ್ ಗೆ ಬಂದ ವಿಡಿಯೋ ವೈರಲ್ ಆಗಿದೆ.

ಸ್ಟಾರ್ ನಟ-ನಟಿಯರು ಒಂಟಿಯಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ, ಜನಪ್ರಿಯತೆ, ಸಾರ್ವಜನಿಕ ಸ್ಥಳಗಳಿಗೆ ಬಂದರೆ ಅಭಿಮಾನಿಗಳು ಸೆಲ್ಫಿ ಹಾಗೂ ಆಟೋಗ್ರಾಫ್‌ಗಾಗಿ ಮುಗಿಬಿದ್ದು, ಕಿರಿಕಿರಿ ಉಂಟು ಮಾಡುತ್ತಾರೆ.

ಹೀಗಾಗಿಯೇ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರಬೇಕಾದರೂ ಬಾಡಿಗಾರ್ಡ್ ಅಥವಾ ಬೌನ್ಸರ್‌ಗಳ ನೆರವು ಪಡೆಯುತ್ತಾರೆ.

ಮನಸ್ಸಿನಲ್ಲಿ ತುಂಬಾ ಆಸೆಯಿದ್ದರೂ ಕೂಡ ಸ್ವಚ್ಛಂದವಾಗಿ ಓಡಾಡುವುದಕ್ಕೂ ಸೆಲೆಬ್ರಿಟಿಗಳಿಂದ ಆಗುವುದಿಲ್ಲ. ಆದರೆ, ಸಾಮಾನ್ಯ ಜನರಂತೆ ಓಡಾಡುವ ಬಯಕೆಯನ್ನು ಈಡೇರಿಸಿಕೊಳ್ಳಲು ಸೆಲೆಬ್ರಿಟಿಗಳಿಗೆ ಒಂದು ದಾರಿ ಇದೆ ಅದೇನೆಂದರೆ, ಮುಖ ಮರೆಮಾಚಿ ಯಾರಿಗೂ ಗೊತ್ತಾಗದಂತೆ ಅಡ್ಡಾಡುವುದು. ಈ ರೀತಿ ಸಾಕಷ್ಟು ಸೆಲೆಬ್ರಿಟಿಗಳು ಆಗಾಗ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ.

ಅದೇ ರೀತಿಯಲ್ಲಿ ಸ್ಟಾರ್ ನಾಯಕಿಯೊಬ್ಬರು ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ನೋಡಿ ಹೊರಬಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಗಾದ್ರೆ ಆ ನಟಿ ಯಾರು ಅಂತೀರಾ ? ಅವರೇ ಸಾಯಿ ಪಲ್ಲವಿ. ಇತ್ತೀಚೆಗಷ್ಟೇ ಅವರ ನಟನೆಯ ತೆಲುಗು ಸಿನೆಮಾ ‘ಶ್ಯಾಮ್‌ಸಿಂಗ್ ರಾಯ್’ ಬಿಡುಗಡೆಯಾಗಿದ್ದು, ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೇರವಾಗಿ ತಿಳಿಯುವ ಬಯಕೆಯಿಂದ ಡಿ.29 ರಂದು ಸಾಯಿ ಪಲ್ಲವಿ ಅವರು ಬುರ್ಖಾ ಧರಿಸಿಕೊಂಡು ಪ್ರೇಕ್ಷಕರ ಜತೆ ಕುಳಿತು ಸಿನಿಮಾ ಎಂಜಾಯ್ ಮಾಡಿದ್ದಾರೆ.

You may also like

Leave a Comment