Home » Celebrity Body Guard salary: ಕೋಟಿ ಕೋಟಿ ಸಂಬಳ ಪಡೆಯುವ ಸ್ಟಾರ್ ನಟ ನಟಿಯರ ಬಾಡಿಗಾರ್ಡ್ ಗಳು ಯಾರು ಗೊತ್ತಾ ?

Celebrity Body Guard salary: ಕೋಟಿ ಕೋಟಿ ಸಂಬಳ ಪಡೆಯುವ ಸ್ಟಾರ್ ನಟ ನಟಿಯರ ಬಾಡಿಗಾರ್ಡ್ ಗಳು ಯಾರು ಗೊತ್ತಾ ?

0 comments
Body guard salary

Bodyguards Salary: ಪ್ರತಿಯೊಂದು ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಇರುವವರಿಗೆ ಅವರದ್ದೇ ಆದ ಗೌರವ ಮತ್ತು ಸಂಬಳ ನೀಡಲಾಗುತ್ತದೆ. ಕೆಲವು ಕ್ಷೇತ್ರದಲ್ಲಿ ಉದ್ಯೋಗಿಗಳ ಸಂಬಳದ ಊಹೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಹಾಗೆಯೇ ಚಿತ್ರರಂಗದ ಸ್ಟಾರ್‌ ನಟ – ನಟಿಯರಿಗೆ ಭದ್ರತೆ ನೀಡುವ ವೈಯಕ್ತಿಕ ಅಂಗರಕ್ಷಕರಿಗೆ ಸ್ಯಾಲರಿ (Bodyguards Salary) ಎಷ್ಟು ಎಂದು ಊಹಿಸುವುದು ಸ್ವಲ್ಪ ಕಷ್ಟವೇ ಬಿಡಿ.

 

ಮುಖ್ಯವಾಗಿ ಚಿತ್ರರಂಗದ ಸೆಲೆಬ್ರಿಟಿಗಳು ಅಭಿಮಾನಿಗಳ ಮುಂದೆ ಬಂದಾಗ ಅವರಿಗೆ ಭದ್ರತೆ ಒದಗಿಸುವುದು ಎಷ್ಟು ಕಷ್ಟ ಎಂಬುದನ್ನು ನೀವೂ ಅನೇಕ ಬಾರಿ ವಿಡಿಯೋಗಳಲ್ಲಿ ನೋಡಿರಬಹುದು. ಅಗಾಧ ಫ್ಯಾನ್ ಫಾಲೋಯಿಂಗ್ ಹೊಂದಿರುವ ಸ್ಟಾರ್ ಹೀರೋ, ಹೀರೋಯಿನ್ ಗಳಿಗೆ ಸೆಕ್ಯೂರಿಟಿ ಕೊಡೋಕೆ ಅಂತಾನೆ ಅವರ ಅಂಗರಕ್ಷಕರು ಇರುತ್ತಾರೆ.

 

ಇನ್ನು ಸಿನಿಮಾದಲ್ಲಿ ಅದ್ಧೂರಿ ಸ್ಟಂಟ್ ಮಾಡಿ ವಿಲನ್ ಗಳನ್ನು ಬೆಚ್ಚಿ ಬೀಳಿಸುವ ಸ್ಟಾರ್ ಹೀರೋ, ಹೀರೋಯಿನ್ ಗಳು ಭಾರೀ ಸ್ಯಾಲರಿ ಪಡೆಯುತ್ತಿರುವಾಗ, ಅವರಿಗೆ ಭದ್ರತೆ ನೀಡುವ ವೈಯಕ್ತಿಕ ಅಂಗರಕ್ಷಕರಿಗೆ, ಕೂಡ ಭಾರೀ ಸ್ಯಾಲರಿ ಇರಲೇ ಬೇಕು.

 

ಹೌದು, ಶಾರುಖ್ ಖಾನ್ ಅವರ ಅಂಗರಕ್ಷಕ ರವಿ ಸಿಂಗ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷಕರಾಗಿದ್ದಾರೆ. ರವಿ ಸಿಂಗ್ 2.7 ಕೋಟಿ ಸ್ಯಾಲರಿ ಪಡೆಯುತ್ತಾರೆ.

 

ಅಮೀರ್ ಖಾನ್ ಅವರ ಅಂಗರಕ್ಷಕ ಯುವರಾಜ್ ಅವರ ವಾರ್ಷಿಕ ವೇತನ ರೂ. 2 ಕೋಟಿ ಆಗಿದೆ. ಅಲ್ಲದೆ, ಅಕ್ಷಯ್ ಕುಮಾರ್ ತನ್ನ ಅಂಗರಕ್ಷಕನಿಗೆ ರೂ. 1.2 ಕೋಟಿ ಸಂಬಳ ನೀಡುತ್ತಾರೆ. ಸ್ಟಾರ್ ನಟಿ ದೀಪಿಕಾ ಪಡುಕೋಣೆ ತಮ್ಮ ಅಂಗರಕ್ಷಕ ಜಲಾಲ್‌ಗೆ 1.2 ಕೋಟಿ ಸಂಬಳ ನೀಡುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ 2 ಕೋಟಿ ರೂ. ಸಂಬಳ ಪಡೆಯುತ್ತಾರೆ.

 

ಇನ್ನು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿಗಳು ಪ್ರಕಾಶ್ ಸಿಂಗ್ ಅವರಿಗೆ ವಾರ್ಷಿಕ ರೂ.1.2 ಕೋಟಿ ಸಂಬಳ ನೀಡುತ್ತಾರೆ.

 

ಬಾಲಿವುಡ್‌ ನ ಅಮಿತಾಬ್ ಬಚ್ಚನ್ ಅವರ ದೀರ್ಘಕಾಲದಿಂದ ಅಂಗರಕ್ಷಕನಾಗಿರುವ ಜಿತೇಂದ್ರ ಶಿಂಧೆ ಅವರು ರೂ. 1.5 ಕೋಟಿ ಸಂಬಳ ಪಡೆಯುತ್ತಿದ್ದಾರೆ.

 

ಇನ್ನು ಅಕ್ಷಯ್ ಕುಮಾರ್ ಅವರು ಮನೆಯಿಂದ ಹೊರಗೆ ಕಾಲಿಟ್ಟಾಗಲೆಲ್ಲ ಶ್ರೇಯ್ಸೆ ಥೇಲೆ ಎಂಬ ಭದ್ರತಾ ಸಿಬ್ಬಂದಿ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ. ಅಕ್ಷಯ್ ಕುಮಾರ್‌ಗೆ ಸೆಕ್ಯುರಿಟಿ ಕವರ್ ಆಗಿ ಕೆಲಸ ಮಾಡುವುದರ ಜೊತೆಗೆ, ಮಗ ಆರವ್ನನ್ನು ಸಹ ರಕ್ಷಿಸುತ್ತಾರೆ. ವರದಿ ಪ್ರಕಾರ, ಅಕ್ಷಯ್ ಕುಮಾರ್ ತನ್ನ ಅಂಗರಕ್ಷಕನಿಗೆ ವಾರ್ಷಿಕವಾಗಿ 1.2 ಕೋಟಿ ಸಂಬಳ ನೀಡುತ್ತಾರೆ.

ಇದನ್ನೂ ಓದಿ : ಅಯ್ಯಯ್ಯೋ… ಈ ಉರ್ಫಿಗೆ ಸಡನ್ ಏನಾಯ್ತು?ಕೊನೆಗೂ ಮೈತುಂಬಾ ಬಟ್ಟೆ ಹಾಕಿದ ನಟಿಯ ಕಂಡು ನೆಟ್ಟಿಗರು ಶಾಕ್!!

You may also like

Leave a Comment