Home » Bigg Boss ನಿಂದ ಚೈತ್ರ ಕುಂದಾಪುರ ಔಟ್ !?

Bigg Boss ನಿಂದ ಚೈತ್ರ ಕುಂದಾಪುರ ಔಟ್ !?

0 comments

Bigg Boss: ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ʼಬಿಗ್ ಬಾಸ್ʼ(Bigg Boss) ಸಹ ಒಂದು. ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇದೆ. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಕಾರಣ ಅದಕ್ಕಿಂತ ಹಿಂದಿನ ವಾರ ಶಿಶಿರ ಅವರು ಎಲಿಮಿನೇಟ್ ಆಗಿದ್ರು, ಅದರ ಜೊತೆಗೆ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗುವಂತಹ ಪರಿಸ್ಥಿತಿ ಬಂದಿತ್ತು. ಸದ್ಯ ಬಿಗ್ ಬಾಸ್ ಮನೆಯಲ್ಲಿ 10 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಾರದ ಮಧ್ಯೆ ಎಲಿಮಿನೇಷನ್ ನಡೆದಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಯಸ್, ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಸ್ಪರ್ಧಿಗಳ ಪೈಕಿ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೊರಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಲೀಕ್ ಆಗಿದ್ದು, ವೈರಲ್ ಆಗ್ತಿದೆ. ಹಾಗಿದ್ರೆ ಈ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಯಾರು ಹೊರ ಹೋಗಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಚೈತ್ರಾ ಕುಂದಾಪುರ ಔಟ್!?
ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಚೈತ್ರಾ ಕುಂದಾಪುರ(Chaitra Kundapura) ಹೊರಗೆ ಬಂದಿದ್ದಾರೆ ಎನ್ನಲಾಗ್ತಿದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ. ಕಳಪೆಗೆ ಫಿಕ್ಸ್ ಆಗಿದ್ದ ಚೈತ್ರಾ ಮನೆ ಮಂದಿಯ ಟಾರ್ಗೆಟ್ ಆಗಿದ್ರು, ರಜತ್ ಆಟದ ಮುಂದೆ ಕೂಗಿದ್ರು. ಫೈರ್ ಬ್ರ್ಯಾಂಡ್ ಅಂತ ಕರೆದುಕೊಂಡ್ರು ಹೆಚ್ಚು ಸದ್ದು ಮಾಡಲಿಲ್ಲ. ಹೀಗಾಗ ಚೈತ್ರಾ ಕುಂದಾಪುರ ಹೊರಗೆ ಹೋಗಿದ್ದಾರೆ ಎನ್ನಲಾಗ್ತಿದೆ.

You may also like

Leave a Comment