Home » Chetan ahimsa: ಸಿನಿಮಾ ನಟನೊಬ್ಬ ಬಿಜೆಪಿ ಸೇರಿದರೆ ಅದು ‘ಮಾರಾಟ’ ಆಗುವುದು ಹೇಗೆ ? ಕಿಚ್ಚನ ಬಿಜೆಪಿ ಬೆಂಬಲದ ಬಗ್ಗೆ ಮೌನ ಮುರಿದ ಚೇತನ್ ಅಹಿಂಸಾ!

Chetan ahimsa: ಸಿನಿಮಾ ನಟನೊಬ್ಬ ಬಿಜೆಪಿ ಸೇರಿದರೆ ಅದು ‘ಮಾರಾಟ’ ಆಗುವುದು ಹೇಗೆ ? ಕಿಚ್ಚನ ಬಿಜೆಪಿ ಬೆಂಬಲದ ಬಗ್ಗೆ ಮೌನ ಮುರಿದ ಚೇತನ್ ಅಹಿಂಸಾ!

by ಹೊಸಕನ್ನಡ
3 comments
Chetan ahimsa

Chetan ahimsa : ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ(Chetan Ahimsa) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಈ ನಟ, ನಿತ್ಯದ ಬೆಳವಣಿಗೆಗಳ ಬಗ್ಗೆ ಒಂದಿಲ್ಲೊಂದು ಕಮೆಂಟ್‌ ಮಾಡುತ್ತಲೇ ಇರುತ್ತಾರೆ. ತಮ್ಮ ಟ್ವೀಟ್ ಮೂಲಕ ಆಗಾಗ ಸೆನ್ಸೇಷನ್ ಕ್ರಿಯೇಟ್ ಮಾಡುವ ಚೇತನ್ ಇದೀಗ ಕಿಚ್ಚ ಸುದೀಪ್‌(Kiccha Sudeep) ಬಿಜೆಪಿ(BJP) ಗೆ ಬೆಂಬಲ ನೀಡಿದ್ದರ ಬಗ್ಗೆಯೂ ಫೇಸ್ ಬುಕ್(Facebook) ಪೋಸ್ಟ್ ಮಾಡಿದ್ದಾರೆ.

ಮೊನ್ನೆಯಿಂದಲೂ ಸುದೀಪ್‌ ಬಿಜೆಪಿ ಸೇರಲಿದ್ದಾರೆ, ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎಂಬ ಅನೇಕ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಬಿಜೆಪಿ ಸೇರೋ ಮೂಲಕ ಸುದೀಪ್ ಎಲ್ಲಾ ಉಹಾ ಪೂಹಗಳಿಗೆ, ಪ್ರಶ್ನೆ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ, ಆದರೆ ತನ್ನ ಆಪ್ತರಾದ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ, ಅವರು ಹೇಳಿದವರ ಪರ ಪ್ರಚಾರ ಮಾಡುವೆ ಎಂದು ತಿಳಿಸಿದ್ದಾರೆ.

ಈ ಬೆನ್ನಲ್ಲೇ ಭಾರತೀಯ ಚಿತ್ರರಂಗದ ಹಿರಿಯ ನಟ ಪ್ರಕಾಶ್ ರಾಜ್(Prakash Raj) ಟ್ವೀಟ್ ಮಾಡಿ ಸುದೀಪ್ ಅವರ ಈ ನಿರ್ಧಾರ ಅಚ್ಚರಿ ಅಲ್ಲದೆ ಅತೀವ ನೋವುಂಟುಮಾಡಿದೆ ಎಂದು ಬರೆದುಕೊಂಡಿದ್ದರು. ಅಲ್ಲದೆ ಈ ಮೊದಲು ಟ್ವೀಟ್ ಮಾಡಿದದ್ದ ಅವರು, ‘ಇದು ಬಿಜೆಪಿ ಸೃಷ್ಟಿಸಿರುವ ನಕಲಿ ಸುದ್ದಿ, ಸುದೀಪ್ ಮಾರಿಕೊಳ್ಳುವವರಲ್ಲ’ ಎಂದೂ ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಕೊನೆಗೆ ಪ್ರತಿಕ್ರಿಯಿಸಿರುವ ನಟ, ಹೋರಾಟಗಾರ ಚೇತನ್ ಅಹಿಂಸಾ ಅವರು “ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುತ್ತಾರೆ — ಏಕೆ? ಏಕೆಂದರೆ ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್‌/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ‘ಮಾರಾಟ’ ಆಗಿದ್ದಾರೆ. ನೆನಪಿಡಿ: ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು” ಎಂದು ಚೇತನ್‌ ಅಹಿಂಸಾ ಫೇಸ್‌ಬುಕ್‌ನಲ್ಲಿ ಈ ಬರಹವನ್ನು ಪೋಸ್ಟ್‌ ಮಾಡಿದ್ದಾರೆ.

ಅಂದಹಾಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ “ಚಿತ್ರರಂಗದಲ್ಲಿ ನನಗೆ ಗಾಡ್ ಫಾದರ್ ಇರಲಿಲ್ಲ. ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿರುವುದು ನನಗೆ ಖುಷಿ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಚಿಕ್ಕ ವಯಸ್ಸಿನಿಂದ ಬೊಮ್ಮಾಯಿಯರನ್ನು ಮಾಮ ಎನ್ನುತ್ತೇನೆ” ಎಂದರು. ಅಲ್ಲದೆ ರಾಜಕಾರಣಕ್ಕೆ ನಾನು ಇಳಿಯುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಆರಂಭದ ದಿನಗಳಿಂದಲೂ ನನಗೆ ಬೊಮ್ಮಾಯಿಯವರು ಪರಿಚಯ. ಬೊಮ್ಮಾಯಿಯವರ ಆಹ್ವಾನದ ಮೇಲೆ ಸುದ್ದಿಗೋಷ್ಠಿಗೆ ಬಂದಿದ್ದೇನೆ. ನಾನು ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ನನ್ನ ತಂದೆ ತೋರಿಸಿದ ದಾರಿಯಲ್ಲಿ ನಾನು ನಡೆಯುತ್ತೇನೆ ಎಂದು ತಿಳಿಸಿದರು.

You may also like

Leave a Comment