Home » Sandalwood : ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಲಕ್ಷ ಲಕ್ಷ ಹಣ ಪಡೆದ ನಿರ್ಮಾಪಕ ; ಕೊನೆಗೆ ಹಣ ವಾಪಸ್ ಕೊಡುವ ನೆಪದಲ್ಲಿ ನಟಿಯ ಮೇಲೆ ಅತ್ಯಾಚಾರ !

Sandalwood : ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಲಕ್ಷ ಲಕ್ಷ ಹಣ ಪಡೆದ ನಿರ್ಮಾಪಕ ; ಕೊನೆಗೆ ಹಣ ವಾಪಸ್ ಕೊಡುವ ನೆಪದಲ್ಲಿ ನಟಿಯ ಮೇಲೆ ಅತ್ಯಾಚಾರ !

0 comments
Sandalwood

Sandalwood : ಸಿನಿಮಾ ಇಂಡಸ್ಟ್ರಿಯಲ್ಲಿ (Cinema Industry) ಹಣದ ನೆಪವೊಡ್ಡಿ ನಟಿಯೋರ್ವರಿಗೆ ನಿರ್ಮಾಪಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಯುವತಿಯಿಂದ ಬರೋಬ್ಬರಿ 75 ಲಕ್ಷ ರೂಪಾಯಿ ಪಡೆದ ನಿರ್ಮಾಪಕ ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಸ್ಯಾಂಡಲ್​ವುಡ್​ನಲ್ಲಿ (Sandalwood) ನಡೆದಿದೆ.

50 ಹಾಗೂ ದಿ ಕಲರ್ಸ್​ ಆಫ್ ಟೊಮ್ಯಾಟೊ ಎಂಬ ಎರಡು ಸಿನಿಮಾಗಳನ್ನು ಮಾಡುತ್ತೇನೆ ಎಂದು ನಿರ್ಮಾಪಕ ಕುಮಾರ್ ಅವರು ಯುವತಿಯಿಂದ 75 ಲಕ್ಷ ಹಣ ಪಡೆದುಕೊಂಡಿದ್ದರು. ಸಿನಿಮಾದಲ್ಲಿ ಅವಕಾಶ ಮಾತ್ರವಲ್ಲದೆ, ಸಿನಿಮಾ ಆದ ಮೇಲೆ ಒಂದೂವರೆ ಕೋಟಿ ವಾಪಸ್ ಕೊಡುತ್ತೇನೆ ಎಂದಿದ್ದರು.

ಆದರೆ, ಹಲವು ಸಮಯ ಕಳೆದರೂ ಸಿನಿಮಾದ ಬಗ್ಗೆ ಯಾವುದೇ ಚರ್ಚೆ ಇರಲಿಲ್ಲ.‌ ಹಣವೂ ವಾಪಾಸ್ ಬರಲಿಲ್ಲ. ಸ್ವಲ್ಪ ದಿನ ಸುಮ್ಮನಿದ್ದ ಯುವತಿ ನಂತರ ನಿರ್ಮಾಪಕರಲ್ಲಿ ಹಣ ವಾಪಸ್ ನೀಡಲು ಹೇಳಿದ್ದಾರೆ. ಬಳಿಕ ನಿರ್ಮಾಪಕ ಕುಮಾರ್ ಹಣ ವಾಪಸ್ ಕೊಡ್ತೀನಿ ಎಂದು ಯುವತಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಸಂತ್ರಸ್ತ ಮಹಿಳೆ  ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ದೂರು ದಾಖಲಾಗಿದೆ.

ಇದನ್ನೂ ಓದಿ: BEL Recruitment 2023: ಬಿಇಎಲ್ ನಲ್ಲಿ ಉದ್ಯೋಗಾವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ, ಹೆಚ್ಚಿನ ವಿವರ ಇಲ್ಲಿದೆ !

You may also like

Leave a Comment