Home » Matte Maduve: ಪವಿತ್ರಾ ಲೋಕೇಶ್, ನರೇಶ್ ನಟನೆಯ ಮಳ್ಳಿಪಳ್ಳಿ ಥಿಯೇಟರ್ ನಲ್ಲಿ ಮಕಾಡೆ ಮಲಗಿತೇ? ಜನ ಮೆಚ್ಚಲಿಲ್ಲವೇ ಈ ಜೋಡಿನಾ?

Matte Maduve: ಪವಿತ್ರಾ ಲೋಕೇಶ್, ನರೇಶ್ ನಟನೆಯ ಮಳ್ಳಿಪಳ್ಳಿ ಥಿಯೇಟರ್ ನಲ್ಲಿ ಮಕಾಡೆ ಮಲಗಿತೇ? ಜನ ಮೆಚ್ಚಲಿಲ್ಲವೇ ಈ ಜೋಡಿನಾ?

0 comments
Malli Pelli Film

Malli Pelli Film: ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ವಿಜಯ ಕೃಷ್ಣ (Actor Naresh) ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್ (Pavitra Lokesh) ನಟನೆಯ ‘ಮಳ್ಳಿ ಪೆಳ್ಳಿ’ (Malli Pelli Film) ಸಿನಿಮಾ ಮೇ 26ರಂದು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ನಿರೀಕ್ಷಿಸಿದ ಗಳಿಕೆ ಕಂಡಿಲ್ಲ. ಪವಿತ್ರಾ ಲೋಕೇಶ್‌ ನರೇಶ್‌ ಲೆಕ್ಕಾಚಾರ ತಲೆಕೆಳಗಾಗಿದೆ‌. ಹಾಕಿದ ಬಂಡವಾಳವನ್ನೂ ಗಳಿಸಲು ವಿಫಲವಾಗಿದೆ. ಹಾಗಾದ್ರೆ ಈ ಸಿನಿಮಾ ಎಷ್ಟು ಗಳಿಕೆ ಕಂಡಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರೋದು ಪವಿತ್ರಾ ಲೋಕೇಶ್ ಹಾಗೂ ನರೇಶ್. ಇವರು ಜೋಡಿಯಾಗಿ ನಟಿಸಿರುವ ‘ಮಳ್ಳಿ ಪೆಳ್ಳಿ’ ಸಿನಿಮಾ ಇವರದೇ ಲವ್‌ಸ್ಟೋರಿ ಆಧಾರಿತವಾಗಿದೆ. ಈ ಸಿನಿಮಾ ಕನ್ನಡದಲ್ಲಿ ‘ಮತ್ತೆ ಮದುವೆ’ ಹೆಸರಿನಲ್ಲಿ ಡಬ್ ಆಗಿದ್ದು, ಜೂನ್‌ 9 ರಂದು ರಿಲೀಸ್ ಆಗಲಿದೆ. ‘ಮಳ್ಳಿ ಪೆಳ್ಳಿ’ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿತ್ತು.

ಆದರೆ, ಈ ಸಿನಿಮಾ ನಿರೀಕ್ಷಿಸಿದ ಗಳಿಕೆ ಕಂಡಿಲ್ಲ. ‘ಮಳ್ಳಿ ಪೆಳ್ಳಿ’ ಸಿನಿಮಾಗೆ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾ ದೊಡ್ಡ ಹಿಟ್‌ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಹಾಗಾಗಲಿಲ್ಲ. ಹಾಕಿದ ಬಂಡವಾಳವನ್ನೂ ಗಳಿಸಲು ವಿಫಲವಾಯ್ತು. ತೆಲುಗಿನಲ್ಲಿ ಈ ಸಿನಿಮಾ ಕೇವಲ 30 ಲಕ್ಷ ರೂಪಾಯಿ ಗಳಿಸಿದೆ (Malli Pelli movie collection). ಕನ್ನಡದಲ್ಲಿ ರಿಲೀಸ್ ಆಗಬೇಕಿದೆ. ಇಲ್ಲಿ ಎಷ್ಟು ಗಳಿಕೆ ಆಗಲಿದೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.

ಈ ಸಿನಿಮಾವನ್ನು ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ನರೇಶ್ ನಿರ್ಮಾಣ ಮಾಡಿದ್ದಾರೆ. ಎಂ. ಎಸ್. ರಾಜು (MS Raju) ಆಕ್ಷನ್ ಕಟ್ ಹೇಳಿದ್ದಾರೆ. ‘ಮತ್ತೆ ಮದುವೆ’ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ‌. ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಜನರ ಮಧ್ಯೆಯೇ ಪ್ರೇಮಿಗಳ ರೊಮ್ಯಾನ್ಸ್‌ ! ವೈರಲ್ ಆಯ್ತು ವಿಡಿಯೋ!

You may also like

Leave a Comment