Dhoomam Trailer: ಹೊಂಬಾಳೆ ಫಿಲ್ಮ್ಸ್ (Hombale Films) ಇಂದು ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆದಿದೆ. ವಿಜಯ್ ಕಿರಗಂದೂರು ಒಡೆತನದ ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕೆಜಿಎಫ್, ಕಾಂತಾರ ದಂತಹ ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಿದ್ದು, ಈ ಬ್ಯಾನರ್ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚೇ ಇದೆ. ಇತ್ತೀಚೆಗಂತೂ ಈ ಬ್ಯಾನರ್‌ನಿಂದ ಬರುವ ಸಿನಿಮಾ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈಗ ಇದೇ ಸಂಸ್ಥೆಯ ʼಧೂಮಂʼ ಸಿನಿಮಾ (Dhoomam Movie) ದ ಟ್ರೇಲರ್ ಇಂದು ರಿಲೀಸ್ ಆಗಿದೆ. ಅತ್ಯದ್ಭುತ ನಟ, ತಾನು ಹುಟ್ಟಿದ್ದೇ ನಟನೆ ಮಾಡಲು ಎನ್ನುವಂತೆ ನಟಿಸುವ, ಎಲ್ಲಾ ಪ್ರೇಕ್ಷಕರನ್ನು ತನ್ನ ನಟನೆಯಿಂದ ತನ್ನತ್ತ ಸೆಳೆಯುವಂತೆ ಮಾಡಿದ ನಟನೆಂದರೆ ಅದು ಫಹಾದ್ ಫಾಸಿಲ್.(Fahad Fasil) ಈ ನಟನ ಚಿತ್ರವೇ ಧೂಮಂ. ಇದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಸಿನಿಮಾ. ಇಂದು ಜೂನ್ 8 ರಂದು ಯೂಟ್ಯೂಬ್ ಚಾನೆಲ್ ಮೂಲಕ ಧೂಮಂ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿಜಕ್ಕೂ ಕೌತುಕ ಮೂಡಿಸುತ್ತದೆ ಈ ಸಿನಿಮಾದ ಟ್ರೇಲರ್(Dhoomam Trailer).
ಬಹು ನಿರೀಕ್ಷೆ ಮೂಡಿಸಿದ ಈ ಸಿನಿಮಾ ಜೂನ್ 23ರಂದು ತೆರೆಗೆ ಬರುತ್ತಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ಇದು ರಿಲೀಸ್ ಆಗುತ್ತಿದೆ. ಲೂಸಿಯಾ, ಯೂಟರ್ನ್ ನಂತರ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ ಖ್ಯಾರಿ ಪವನ್ ಕುಮಾರ್ ಅವರಿಗೆ ಸಲ್ಲುತ್ತದೆ. ಈ ಸಿನಿಮಾ ಕೂಡಾ ಅವರ ನಿರ್ದೇಶದಲ್ಲಿ ಮೂಡಿ ಬರುತ್ತಿದೆ. ಹಾಗೆನೇ ಈ ಸಿನಿಮಾ ಬಗ್ಗೆ ಕೂಡಾ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಧೂಮಂ ಸಿನಿಮಾ ನಿಜಕ್ಕೂ ಬೇರೆನೇ ಕಥಾ ಹಂದರ ಹೊಂದಿದೆ ಎಂದು ಟ್ರೇಲರ್ ಮೂಲಕ ತಿಳಿಯುತ್ತದೆ.
ಆಡ್ ಏಜೆನ್ಸಿಯಲ್ಲಿ ಉದ್ಯೋಗ ಮಾಡುವ ಫಹಾದ್ ತಂಬಾಕು ಜಾಹೀರಾತನ್ನು ಬೇರೆ ರೀತಿಯಲ್ಲಿ ತೋರಿಸಬೇಕೆನ್ನುವುದು ಆತನ ಆಸೆ. ನಂತರ ಅದೇನೋ ಆಗಿ ಆತ ಹಣ ಮಾಡಲು ಬೇರೆ ದಾರಿ ಹಿಡಿಯುತ್ತಾನೆ. ನಂತರ ಟ್ರ್ಯಾಪ್‌ಗೊಳಗಾಗುತ್ತಾನೆ. ಇವಿಷ್ಟು ಟ್ರೇಲರ್‌ನಲ್ಲಿ ಕಾಣ ಸಿಗುವ ಕೆಲವೊಂದು ಪಾಯಿಂಟ್ಸ್. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆ ಅಪರ್ಣಾ ಬಾಲಮುರಳಿ, ರೋಷನ್ ಮ್ಯಾಥೀವ್ ನಂತಹ ನಟರು ನಟಿಸಿದ್ದಾರೆ. ಅಕ್ಟೋಬರ್ 9ರಂದು ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಕೇವಲ ಮೂರೇ ತಿಂಗಳಲ್ಲಿ ಶೂಟಿಂಗ್ ಕಂಪ್ಲೀಟ್ ಆಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಪಠ್ಯ ಪುಸ್ತಕ ಖಚಿತ: ಬಿಜೆಪಿ ಸಿದ್ದಾಂತದ ಆ ಮೂರು ಅಧ್ಯಾಯಗಳು ಡಿಲೀಟ್ !
