Home » Mumbai Cricketer Dies: ಪಂದ್ಯದ ವೇಳೆ ಘೋರ ದುರಂತ; ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು!!

Mumbai Cricketer Dies: ಪಂದ್ಯದ ವೇಳೆ ಘೋರ ದುರಂತ; ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು!!

2 comments
Mumbai Cricketer Dies

Mumbai Cricketer Dies: ಪಿಚ್‌ನಿಂದ ಹಾರಿ ಬಂದ ಚೆಂಡೊಂದು ತಲೆಗೆ ಬಡಿದು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮಾಟುಂಗಾದ ದಾಡ್ಕರ್‌ ಮೈದಾನದಲ್ಲಿ ನಡೆದಿದೆ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕಚ್ಚಿ ವೀಸಾ ಓಸ್ವಾಲ್‌ ವಿಕಾಸ್‌ ಲೆಜೆಂಡ್‌ ಕಪ್‌ T20 ಪಂದ್ಯಾವಳಿಗಾಗಿ ಆಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ.

ದಾದರ್‌ ಪಾರ್ಸಿ ಕಾಲೋನಿ ಸ್ಪೋರ್ಟಿಂಗ್‌ ಕ್ಲಬ್‌ ಮೈದಾನದಲ್ಲಿ ಜಯೇಶ್‌ ಸಾವಾಲಾ ಬ್ಯಾಟ್ಸ್‌ ಮನ್‌ ಹಿಂದೆ ಫೀಲ್ಡಿಂಗ್‌ ಮಾಡುತ್ತಿದ್ದಾಗ ಚೆಂಡು ಅವರ ಕಿವಿಯ ಹಿಂಭಾಗಕ್ಕೆ ಬಡಿದಿದೆ ಎಂದು ವರದಿಯಾಗಿದೆ.

ಕೂಡಲೇ ಕೆಳಗೆ ಬಿದ್ದ ಆಟಗಾರನನ್ನು ಕೂಡಲೇ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಅಲ್ಲಿ ಅವರು ಮೃತಪಟ್ಟಿರುವುದು ಘೋಷಣೆ ಮಾಡಲಾಗಿದೆ.

ಆಕಸ್ಮಿಕ ಸಾವಿನ ವರದಿ ದಾಖಲಾಗಿದ್ದು, ಶವ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬದವರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment